ಜನಾಗ್ರಹ ಚಳುವಳಿಗೆ ಎಐಟಿಯುಸಿ ಕಟ್ಟಡ ಕಾರ್ಮಿಕ ಸಂಘಟನೆ ಬೆಂಬಲ.

ವಿಜಯ ದರ್ಪಣ ನ್ಯೂಸ್

ಮಡಿಕೇರಿ ಜಿಲ್ಲೆ, ಸಿದ್ದಾಪುರ ಅಕ್ಟೋಬರ್ 02: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ 7/10/2023ರಂದು ಕರೆ ನೀಡಿರುವ ಜನಾಗ್ರಹ ಚಳುವಳಿಗೆ ಕಾಫಿನಾಡು ಕಟ್ಟಡ ಕಾರ್ಮಿಕ ಸಂಘಟನೆಯು ಬೆಂಬಲ ವ್ಯಕ್ತಪಡಿಸಿದೆ.

ಸಂಘದ ಕಛೇರಿಯಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಎಂ.ಎ ಕೃಷ್ಣ ಮಾತನಾಡಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ತಮ್ಮ ಬೇಡಿಕೆಯನ್ನ ಮುಂದಿಟ್ಟುಕೊಂಡು ಚಳುವಳಿಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು .

ಈಗಾಗಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳನ್ನು ಮಾತ್ರ ನೊಂದಾಯಿಸಿ ಕೊಂಡಿದ್ದು ಯಾವುದೇ ಖಾಸಗಿ ಆಸ್ಪತ್ರೆ ನೊಂದಣಿ ಯಾಗದೆ ಇರುವುದರಿಂದ ಜಿಲ್ಲೆಯ ಕಟ್ಟಡ ಕಾರ್ಮಿಕರು ಚಿಕಿತ್ಸಾ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಮಸ್ಯೆಯನ್ನು ಬಗೆ ಹರಿಸಲು ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯನ್ನು ನೋಂದಾಯಿಸಿ ಕೊಳ್ಳಬೇಕು ಆಗ್ರಹಿಸಿದರು

ನೊಂದಣಿಯ ಹಾಗೂ ನವೀಕರಣಕ್ಕೆ ವೇತನ ಚೀಟಿ ಹಾಗೂ ಹಾಜರಾತಿ ಪಟ್ಟಿ ಕಡ್ಡಾಯವನ್ನು ರದ್ದುಗೊಳಿಸ ಬೇಕು ಹಾಗೂ ನವಿಕರಣ ಅವಧಿ ಈ ಹಿದಿನಂತೆ 3ವರ್ಷಕ್ಕೆ ಸೀಮಿತ ಗೊಳಿಸಬೇಕು ಎಂದು ಒತ್ತಿಯಿಸಿದ ಅವರು 2021-22ಹಾಗೂ22-23ನೇ ಸಾಲಿನ ಶೈಕ್ಷಣಿಕ ಧನಸಹಾಯವನ್ನು ಕೂಡಲೇ ಬಿಡುಗಡೆ ಗೊಳಿಸಬೇಕು
ಕಟ್ಟಡ ನಿರ್ಮಾಣ ಕಾಮಗಾರಿಗೆ ಮರಳಿನ ಸಮಸ್ಯೆ ಹಾಗದಂತೆ ಜಿಲ್ಲೆಯಲ್ಲಿ ಮರಳು ನೀತಿ ಜಾರಿಗೊಳಿಸ ತಿಳಿದರು.

ದೇಶದ ಮೊದಲ ಕಾರ್ಮಿಕ ಸಂಘಟನೆ ಎ.ಐ.ಟಿ.ಯು.ಸಿ. ಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು.
ಮಂಡಳಿಯಿಂದ ನೀಡುವ ಪಿಂಚಣಿಗೆ 60ವರ್ಷ ಪೂರ್ಣ ಗೊಂಡ ನಂತರ ಯಾವಗ ಬೇಕಾದರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸ ಬೇಕು. ಎಂಬ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಚಳುವಳಿಯಲ್ಲಿ ಭಾಗವಹಿಸುವುದಾಗಿ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಾಫಿ ನಾಡು ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿ ವಸಂತ,ಸಂಘದ ಖಜಾಂಚಿ ಕೆ,ಎ,ಮಣಿ, ಕಟ್ಟಡ ಕಾರ್ಮಿಕ ಜಿಲ್ಲಾಮಂಡಳಿ ಸದಸ್ಯೆ ಶಿನು ಜೋನ್ಸ್ಫ್ ಡಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಎನ್. ಮಣಿ. ಎ.ಐ.ಟಿ.ಯು.ಸಿ ಜಿಲ್ಲಾ ಸದಸ್ಯೆ ಪುಷ್ಪಾಮಣಿ ಹಾಜರಿದ್ದರು.