ಕಲ್ಯಾಣ್ ಜ್ಯುವೆಲ್ಲರ್ಸ್ ಯುಗಾದಿ ಸಂಭ್ರಮ ಹೆಚ್ಚಿಸಿದ ಶೆಟ್ಟಿ ಸಹೋದರಿಯರು
ವಿಜಯ ದರ್ಪಣ ನ್ಯೂಸ್
ಮಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ಯುಗಾದಿ ಸಂಭ್ರಮ ಹೆಚ್ಚಿಸಿದ ಶೆಟ್ಟಿ ಸಹೋದರಿಯರು
ಮಂಗಳೂರು, 6ನೇ ಏಪ್ರಿಲ್ 2024: ಪ್ರಭಾವಿ ಇನ್‌ಫ್ಲುಯೆನ್ಸರ್‌ಗಳಾದ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ ಅವರು ಮಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲ್ಲರ್ಸ್‌ನಲ್ಲಿ ಯುಗಾದಿ ಸಂಭ್ರಮವನ್ನು ಹೆಚ್ಚಿಸಿದರು. ಅವರ ಉಪಸ್ಥಿತಿಯು ವಾರ ಕಾಲ ನಡೆದ ಯುಗಾದಿ ಆಚರಣೆಯ ಸಂಭ್ರಮವನ್ನು ಹೆಚ್ಚಿಸಿತಲ್ಲದೆ , ಯುಗಾದಿ ಸಂದರ್ಭಕ್ಕೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಭರಣಗಳ ಸಂಗ್ರಹವನ್ನೂ ಅನಾವರಣಗೊಳಿಸಿದರು.
ಯುಗಾದಿ ಆಚರಣೆಯ ಸಿದ್ದತೆಗಳು ಬಿರುಸಿನಿಂದ ಸಾಗಿರುವಾಗ, ನಿಸ್ಸಂದೇಹವಾಗಿಯೂ ಶೆಟ್ಟಿ ಸಹೋದರಿಯರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಕಲ್ಯಾಣ್ ಜ್ಯುವೆಲ್ಲರ್ಸ್‌ನಲ್ಲಿ ತಮ್ಮ ಫಾಲೋವರ್‌ಗಳ ಜತೆ ʻಭೇಟಿ ಮಾಡಿ, ಶುಭಾಶಯ ಹೇಳಿʼ (ಮೀಟ್ ಅಂಡ್ ಗ್ರೀಟ್) ಮಾದರಿಯ ಕಾರ್ಯಕ್ರಮದಲ್ಲಿ ಶೆಟ್ಟಿ ಸಹೋದರಿಯರು, ತಾವು ಮನೆಯಲ್ಲಿ ಯಾಚ ರೀತಿ ಯುಗಾದಿ ಆಚರಿಸುತ್ತೇವೆ ಎಂಬುದರ ಕುರಿತು ಅಭಿಪ್ರಾಯ ಹಂಚಿಕೊಂಡರು. ಸಾಂಪ್ರದಾಯಿಕ ಶೈಲಿಯ ಆಭರಣಗಳ ಕುರಿತು ಅದ್ವಿತಿ ಶೆಟ್ಟಿಯವರ ಪ್ರೀತಿ ಮತ್ತು ವಜ್ರದ ಕುರಿತು ಅಶ್ವಿತಿ ಶೆಟ್ಟಿ ಅವರಿಗಿರುವ ಒಲವು ಸಹ ಸಂವಾದದಲ್ಲಿ ಚರ್ಚೆಯ ವಿಷಯವಾಗಿತ್ತು. ನೃತ್ಯದ ಕುರಿತು ತಮ್ಮ ಪ್ರೀತಿ ಹಾಗೂ ಕನ್ನಡ ಮನೋರಂಜನೆ ಉದ್ಯಮದಲ್ಲಿನ ಅನುಭವವನ್ನು ಹಂಚಿಕೊಂಡರು.
ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಯುಗಾದಿ ಆಭರಣಗಳನ್ನು ಎದುರು ನೋಡುತ್ತಿರುವ ಆಭರಣ ಪ್ರಿಯರು ಕಲ್ಯಾಣ್ ಜ್ಯುವೆಲ್ಲರ್ಸ್‌ನಲ್ಲಿ ಲಭ್ಯವಿರುವ ಆಫರ್‌ಗಳ ಬಗ್ಗೆ ತಿಳಿದುಕೊಳ್ಳಬಹುದು. ಈ ಋತುವಿನಲ್ಲಿ ಎಲ್ಲ ಉತ್ಪನ್ನಗಳ ಮೇಲೆ ತಯಾರಿಕೆ ವೆಚ್ಚದಲ್ಲಿ 25% ರಿಯಾಯಿತಿಯನ್ನು ಕಲ್ಯಾಣ್ ಜ್ಯುವೆಲ್ಲರ್ಸ್ ಘೋಷಿಸಿದೆ.