--Ads--

ದೇವನಹಳ್ಳಿ ಪುರಸಭೆ ನೆಲವಳಿ ಸುಂಕ ₹16 ಲಕ್ಷಕ್ಕೆ ಹರಾಜು

On: March 18, 2026 3:43 AM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್……

ದೇವನಹಳ್ಳಿ ಪುರಸಭೆ ನೆಲವಳಿ ಸುಂಕ ₹16 ಲಕ್ಷಕ್ಕೆ ಹರಾಜು

ದೇವನಹಳ್ಳಿ: ಪುರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರ ಮಾಡುವ ಪೆಟ್ಟಿಗೆ ಅಂಗಡಿಗಳು, ತಳ್ಳುವ ಗಾಡಿಗಳು ಹೂವು-ಹಣ್ಣು, ತರಕಾರಿ, ಎಳನೀರು ವ್ಯಾಪಾರಿಗಳು ಹಾಗೂ ಖಾಸಗಿ ಬಸ್ ಗಳು, ಸರಕು ಸಾಗಣೆ ವಾಹನಗಳ ಸುಂಕ ಮತ್ತು ದ್ವಿಚಕ್ರ ವಾಹನ ಪಾರ್ಕಿಂಗ್ ಸುಂಕ ವಸೂಲಾತಿಗಾಗಿ 2026-27ನೇ ಸಾಲಿಗೆ ಒಂದು ವರ್ಷದ ಹಕ್ಕು ನೀಡಲು ಸೋಮವಾರ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.

ರಸ್ತೆ ಬದಿ ವ್ಯಾಪಾರಿಗಳು ಹಾಗೂ ಗೂಡಂಗಡಿ ಪೆಟ್ಟಿಗೆ ಅಂಗಡಿಗಳ ವ್ಯಾಪಾರಿಗಳಿಂದ ನಿತ್ಯ ಸುಂಕ ವಸೂಲಿ ಮಾಡಲು 12.53 ಲಕ್ಷ ರೂಪಾಯಿಗೆ ಕಳೆದ ಸಾಲಿನಲ್ಲಿ ಹಕ್ಕು ಪಡೆದಿದ್ದ ಸುನೀತಾ ಎಂಬುವವರು ಈ ಬಾರಿ 16 ಲಕ್ಷ ಪ್ಲಸ್ ಜಿಎಸ್ಟಿಗೆ ಬೀಡ್ ಮಾಡಿ ಮತ್ತೆ ಹಕ್ಕು ಪಡೆದುಕೊಂಡರು.

ವಾಹನ ಸುಂಕ ವಸೂಲಿಗೆ ಸಂಬಂಧಿಸಿದಂತೆ ಖಾಸಗಿ ವಾಹನಗಳ ಮಾಲೀಕರು ಗಲಾಟೆ ಮಾಡಿ ಬಿಎಂಟಿಸಿ ಬಸ್‌ಗಳು ಹೆಚ್ಚಾಗಿದ್ದು, ನೀವು ನಿಗದಿಪಡಿಸಿದಷ್ಟು ಸುಂಕ ನೀಡಲಾಗುವುದಿಲ್ಲ.ನಮಗೆ ಮಿನಿ ವಿಧಾನಸೌಧದ ಮುಂದಿನ ಸುಂಕ ವಸೂಲಿ ಹಕ್ಕು ಈ ವರ್ಷ ನೀಡುತ್ತಿಲ್ಲ ಅಲ್ಲದೆ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಗೆ ಪುರಸಭೆ ನಿರ್ದಿಷ್ಟ ಜಾಗ ಗುರ್ತಿಸಿಲ್ಲ, ಕೋರ್ಟ್ ಆವರಣದಲ್ಲಿ ಸುಂಕ ವಸೂಲಿಗೆ ಅವಕಾಶವಿಲ್ಲ, ವರ್ಷದಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಯಿಂದ ಪಟ್ಟಣದಲ್ಲಿ ಹಾದುಹೋಗುವ ವಾಹನಗಳು ಬೈಪಾಸ್ ಮೂಲಕ ತೆರಳುತ್ತಿವೆ ಎಂದು ಹೇಳಿ ಹೆಚ್ಚಿನ ಮೊತ್ತಕ್ಕೆ ಬೀಡ್ ಮಾಡಲು ತಕರಾರು ಮಾಡಿದರು. ಆದರೂ ಅಂತಿಮವಾಗಿ ವಾಹನ ಸುಂಕ ವಸೂಲಾತಿ ಕಳೆದ ಸಾಲಿಗೆಗಿಂತ ಕಿಡಿಮೆ ಅಂದರೆ 2.10 ಲಕ್ಷ ಪ್ಲಸ್ ಜಿಎಸ್‌ಟಿಗೆ ಹರಾಜಿನಲ್ಲಿ ಕಳೆದ ಬಾರಿ ಹಕ್ಕುದಾರ ನಾಗೇಂದ್ರ ವಸೂಲಿ ಹಕ್ಕು ಮತ್ತೆ ಪಡೆದುಕೊಂಡರು. ಕಳೆದ ವರ್ಷ ಮೊತ್ತ3.16 ಲಕ್ಷ ರೂ.ಗೆ ಹರಾಜು ಆಗಿತ್ತು. ಈ ಹರಾಜಿನ ವಸೂಲಾತಿ ಹಕ್ಕು 2026ರ ಏ.1 ರಿಂದ 2027ರ ಮಾ.31 ರವರೆಗೂ ಇರಲಿದೆ.

ಪುರಸಭೆ ಮುಖ್ಯಾಧಿಕಾರಿ ಎ.ಶಿವಮೂರ್ತಿ, ಮಾಜಿ ಅಧ್ಯಕ್ಷ ಎಂ ಮೂರ್ತಿ, ಕಂದಾಯಾಧಿಕಾರಿ ರಮೇಶ್‌ಬಾಬು, ಸಮುದಾಯ ಸಂಘಟನಾ ಅಧಿಕಾರಿ ಬೈರಪ್ಪ, ಮ್ಯಾನೇಜ‌ರ್ ಸರಸ್ವತಿ, ಕಂದಾಯ ನಿರೀಕ್ಷಕ ಎ ಮಂಜುನಾಥ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜಪ್ಪ, ಮಂಜುನಾಥ್ ಇದ್ದರಕ

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ನಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ: ಸಚಿವ ಕೆ.ಹೆಚ್ ಮುನಿಯಪ್ಪ

ಹೊಸಕೋಟೆಯಲ್ಲಿ ಮತದಾರರ ಜಾಗೃತಿ ಮ್ಯಾರಾಥಾನ್ ಹಾಗೂ SIR ವಿಶೇಷ ಆಂದೋಲನಕ್ಕೆ ಜಿ. ಪಂ. ಸಿಇಒ ಡಾ.ವಾಸಂತಿ ಅಮರ್ ಚಾಲನೆ

ದೇವನಹಳ್ಳಿ ತಾಲ್ಲೂಕು ಆಡಳಿತ ಸೌಧದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ

ತಾವರೆಕೆರೆಯಲ್ಲಿ ಅದ್ಧೂರಿ ಗಣೇಶೋತ್ಸವ ಜೈ ಭೀಮ್ ವಿನಾಯಕ ಗೆಳೆಯರ ಬಳಗದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ : ರಸಮಂಜರಿ ಕಾರ್ಯಕ್ರಮಕ್ಕೆ ಮೆರುಗು

ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ: ಮತದಾರರ ನೋಂದಣಾಧಿಕಾರಿ (ERO) 

ಪ್ರಜಾಪ್ರಭುತ್ವ ಪ್ರತಿಯೊಬ್ಬರ ಆಶಯಗಳಿಗೆ ಧ್ವನಿ: ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ