ಬಿಜೆಪಿ ಪಕ್ಷದಿಂದ ನನ್ನನ್ನು ಕಡೆಗಣಿಸುವ ಪ್ರಯತ್ನ ನಡೆದಿದೆ: ಮಾಜಿ ಶಾಸಕ ಎಂ ರಾಜಣ್ಣ

ವಿಜಯ ದರ್ಪಣ ನ್ಯೂಸ್….

ಬಿಜೆಪಿ ಪಕ್ಷದಿಂದ ನನ್ನನ್ನು ಕಡೆಗಣಿಸುವ ಪ್ರಯತ್ನ ನಡೆದಿದೆ: ಮಾಜಿ ಶಾಸಕ ಎಂ ರಾಜಣ್ಣ

ಶಿಡ್ಲಘಟ್ಟ : ಗ್ರಾಮ ಪಂಚಾಯತಿ ಚುನಾವಣೆ ವೇಳೆ ಬಿಜೆಪಿ ಬೆಂಬಲಿತ 53 ಸದಸ್ಯರ ಗೆಲುವಿಗೆ ಶ್ರಮಿಸಿದ್ದು ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ನನ್ನ ಕೊಡುಗೆ ಇದೆ ಸ್ಥಳೀಯವಾಗಿ ನನ್ನನ್ನು ಕಡೆಗಣಿಸುವ ಪ್ರಯತ್ನ ನಡೆಯುತ್ತಿದೆ .ಸದ್ಯ ಮೂಲ ಬಿಜೆಪಿಗರು ತಟಸ್ಥರಾಗಿಲ್ಲ ನಾನು ಸಹ ವಲಸಿಗ ಎಂದು ಮಾಜಿ ಶಾಸಕ ಎಂ.ರಾಜಣ್ಣ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ನಾನು ಕಳೆದ ವಿಧಾನಸಭಾ ಚುನಾವಣೆ ಅವಧಿಯಲ್ಲಿ ಸಂಸದ ಡಾ ಕೆ. ಸುಧಾಕರ್ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಕಳೆದ ಮೂರು ದಿನಗಳ ಹಿಂದೆ ಗ್ರಾಮ ಪಂಚಾಯತಿ ಮುಖಂಡರು,ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡಲಾಗಿದೆ ಲೋಕಸಭಾ ಚುನಾವಣೆಯಲ್ಲಿ
ಎನ್‌ಡಿಎ ಮೈತ್ರಿ ಒಕ್ಕೂಟದಂತೆ ಕೆಲಸ ಮಾಡಿದ್ದೇವೆ ಆದರೆ
ಅನಂತರ ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿ ಭಾಗಿಯಾಗಿಲ್ಲ, ನಮ್ಮ ಕ್ಷೇತ್ರದ ಬಿಜೆಪಿಯಲ್ಲಿನ ತಾರತಮ್ಯ ಹಾಗು ಕಾರ್ಪೊರೇಟ್ ಸಿಸ್ಟಂ ರಾಜಕೀಯ ವಿದ್ಯಮಾನಗಳ ಕುರಿತು ಸಂಸದ ಡಾ.ಕೆ.ಸುಧಾಕ‌ರ್ ಅವರೊಂದಿಗೆ ಪ್ರಸ್ತಾಪಿಸಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಬಗೆಹರಿಸುವ ಭರವಸೆಕೊಟ್ಟಿದ್ದಾರೆ ಎಂದರು.

ಸ್ಥಳೀಯ ಕಾರ್ಯಕರ್ತರು, ಮೂಲ ಬಿಜೆಪಿಗರನ್ನ ಕಡೆಗಣಿಸುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ಮುಖಂಡರು ಪ್ರತಿಯೊಂದರಲ್ಲಿಯೂ ತಮ್ಮದೇ ಆದ ಗುಂಪಿಗೆ ಮಾತ್ರ ಪ್ರಾಮುಖ್ಯತೆ ನೀಡಿ, ನಮ್ಮನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ,ನಮ್ಮನ್ನು ಪಕ್ಷದಲ್ಲಿ ಕಡೆಗಣಿಸುವ ಹುನ್ನಾರ ನಡೆಯುತ್ತಿದೆ ನಾವು ಭಾರತೀಯ ಜನತಾ ಪಕ್ಷದ ಕಟ್ಟಾಳುಗಳು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿದ್ದು, ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದೆ, ಆದರೆ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಒಪ್ಪಿ ಮತ್ತೊಬ್ಬ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದೆ ಸದ್ಯ ಎನ್‌ಡಿಎ ಅಭ್ಯರ್ಥಿ ಶಾಸಕರಾಗಿದ್ದು, ಈಗ ಸ್ಥಳೀಯವಾಗಿ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದೆ ನಂತರ ಮಾತುಕತೆ ನಡೆಸಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಾಯಿತು. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಆದರೆ ನಾನು ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ ಎಂದರು.

ಸ್ಥಳೀಯವಾಗಿ ಕಾರ್ಯಕರ್ತರ ಹಾಗೂ ಸ್ಥಳೀಯ ಚುನಾವಣೆ ವೇಳೆ ಕಾರ್ಯಕರ್ತರೊಂದಿಗೆ ಭಾಗಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ವರಿಷ್ಠರ ತೀರ್ಮಾನದಂತೆ ಪಕ್ಷದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ನುಡಿದರು. ಹೆಸರನ್ನು ಬಹಿರಂಗ ಪಡಿಸದೆ ಗೊಂದಲದಲ್ಲಿ ನೇರ ನೇರ ಹೆಸರನ್ನು ಹೇಳದೆ ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಅವರ ಬೆಂಬಲಿಗರಾದ ಸ್ಕೂಲ್ ದೇವರಾಜ್,ತಾತಹಳ್ಳಿ ಕನಕಪ್ರಸಾದ್‌,ದೋಣಹಳ್ಳಿ ರಾಮಣ್ಣ, ಅಶ್ವಥಪ್ಪ, ವೆಂಕಟೇಶ್‌, ಕೊತ್ತನೂರು ರವಿಚಂದ್ರ,ಜೆ.ವಿ. ಭರತ್‌ ಮುಂತಾದವರು ಪಾಲ್ಗೊಂಡಿದ್ದರು.