ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸ್ಥಾನಕ್ಕೆ ನೂತನವಾಗಿ ಶಿವಕುಮಾರ್ ನೇಮಕ

ವಿಜಯ ದರ್ಪಣ ನ್ಯೂಸ್….

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸ್ಥಾನಕ್ಕೆ ನೂತನವಾಗಿ ಶಿವಕುಮಾರ್ ನೇಮಕ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೇ 28 : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹುದ್ದೆಗೆ  ಶಿವಕುಮಾರ್ ಅವರು ಬುಧವಾರ ಅದಿಕಾರ ವಹಿಕೊಳ್ಳುವ ಮೂಲಕ ನೇಮಕಗೊಂಡಿದ್ದು, ಕೊಲಾರ ಜಿಲ್ಲಾ ಪಂಚಾಯಿತಿಯಲ್ಲಿ ತೆರವಾದ ಹುದ್ದೆಗೆ ರಮೇಶ್ ಕುಮಾರ್ ಅವರು ವರ್ಗವಣೆ ಗೊಂಡಿದ್ದಾರೆಂದು ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಇಒ ಶ್ರೀನಾಥ್ ಗೌಡ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಮೇಶ್ ಕುಮಾರ್ ಅವರು ಸೃಜನಶೀಲತೆ, ಪ್ರಾಮಾಣಿಕತೆ, ಸರಳತೆ ಹೊಂದಾಣಿಕೆ, ದೂರದೃಷ್ಟಿ, ಏಕಾಗ್ರತೆ, ವೃತ್ತಿಪರತೆ ವೃತ್ತಿಶ್ರೇಷ್ಟತೆ ಗಳಿಂದ ಎಲ್ಲರ ಮನಸೆಳೆದವರು. ಇವರ ಕಾರ್ಯವೈಖರಿ ಪಾದರ ಸದಷ್ಟೆ ಆಕರ್ಷಕ. ತಮ್ಮ ಸೇವಾವಧಿ ಯಲ್ಲಿ ಶ್ರದ್ದೆ ಭಕ್ತಿಯಿಂದ ತನ್ನ ಬದುಕಿನ ಕರ್ತವ್ಯವನ್ನು ಕಟ್ಟು ನಿಟ್ಟಾಗಿ ಕಳೆದ ಕೀರ್ತಿಗೆ ಇವರು ಭಾಜನರು. ವರ್ಗಾವಣೆ ಆದ ರಮೇಶ್ ಕುಮಾರ್ ಹಾಗೂ ಅಧಿಕಾರ ವಹಿಸಿಕೊಂಡ ನಮ್ಮ ಮೇಲಾದಿಕಾರಿಗಳಿಗೆ  ಫಲಪುಷ್ಪ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೆಶಕ ದುರ್ಗಪ್ಪ, ಗ್ರಾಮ ಪಂಚಾಯಿತಿ ಅಬಿವೃದ್ಧಿ ಅದಿಕಾರಿಗಳಾದ ಶ್ರೀನಿವಾಸ್, ದಿಲೀಪ್, ಮಂಜುನಾಥ್, ಗಂಗರಾಜು, ಭೀರೇಶ್, ಪ್ರಕಾಶ್, ಕುಮಾರ್ ಹಾಜರಿದ್ದರು.