--Ads--

ಮೋಹನ್ ರೆಡ್ಡಿ ಗೆಲುವಿಗೆ ಮತಯಾಚಿಸಿದ ಬಿ ವಿ ರಾಜೇವ್ ಗೌಡ

On: May 28, 2025 3:43 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ  ಚುನಾವಣೆ

ಮೋಹನ್ ರೆಡ್ಡಿ ಗೆಲುವಿಗೆ ಮತಯಾಚಿಸಿದ ಬಿ ವಿ ರಾಜೇವ್ ಗೌಡ

ಶಿಡ್ಲಘಟ್ಟ : ಮೋಹನ್ ರೆಡ್ಡಿ ಅವರು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದು, ನಮ್ಮ ತಾಲ್ಲೂಕಿನ ಮತದಾನದ ಹಕ್ಕು ಹೊಂದಿರುವ ಎಲ್ಲಾ ಡೇರಿಗಳ ಅಧ್ಯಕ್ಷರು ಕೂಡ ತಪ್ಪದೆ ಮತ ಹಾಕಬೇಕೆಂದು ಮನವಿ ಮಾಡಿದರಲ್ಲದೆ, ಎಲ್ಲರ ಪರವಾಗಿ ಮೋಹನ್ ರೆಡ್ಡಿ ಅವರಿಗೆ ಎಲ್ಲಾ ಮತಗಳನ್ನು ತಪ್ಪದೆ ಹಾಕಿಸುವುದಾಗಿ ಕೆಪಿಸಿಸಿ ಸಂಯೋಜಕ ಬಿ.ವಿ.ರಾಜೀವ್‌ಗೌಡ
ಭರವಸೆ ನೀಡಿದರು.

ಡಿಸಿಸಿ ಬ್ಯಾಂಕ್‌ಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ಬೆಂಬಲಿತ ಅಧಿಕೃತ ಅಭ್ಯರ್ಥಿ ಎಚ್.ಎಸ್‌. ಮೋಹನ್‌ರೆಡ್ಡಿ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.

ಅಖಂಡ ಕೋಲಾರ ಜಿಲ್ಲೆಯಲ್ಲಿನ ಡಿಸಿಸಿ ಬ್ಯಾಂಕ್ ಆರ್ಥಿಕವಾಗಿ ಸಾಕಷ್ಟು ಸದೃಢಗೊಂಡು ಎರಡೂ ಜಿಲ್ಲೆಗಳ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕವಾಗಿ ಚೈತನ್ಯವನ್ನು ತುಂಬಿದೆ ರೈತರು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಂತೂ ಡಿಸಿಸಿ ಬ್ಯಾಂಕ್‌ನಿಂದ ಸಿಕ್ಕ ನೆರವನ್ನು ಜೀವಮಾನದಲ್ಲಿ ಮರೆಯುವಂತಿಲ್ಲ ಎಂದರು.

ಡಿಸಿಸಿ ಬ್ಯಾಂಕ್‌ಗೆ ಕಳೆದ ಅವಧಿಯಲ್ಲಿನಿರ್ದೇಶಕರು ಹಾಗೂ ಉಪಾಧ್ಯಕ್ಷರೂ ಆಗಿದ್ದ ಈ ತಾಲ್ಲೂಕಿನ ಡಾಲ್ಫಿನ್ ಶಾಲೆಯ ನಾಗರಾಜ್‌ ಅವರು ಈ ಕ್ಷೇತ್ರಕ್ಕೆ 150 ಕೋಟಿ ರೂ.ಗಳ ಸಾಲವನ್ನು ಕೊಡಿಸಿದ್ದು ಮತ್ತೆ ಇದೀಗ ಇನ್ನೂ ಹೆಚ್ಚಿನ ನೆರವನ್ನು ಈ ಕ್ಷೇತ್ರದ ರೈತರು, ಮಹಿಳೆಯರಿಗೆ ಕೊಡಿಸುವಂತಾಗಲಿ ,ಡಿಸಿಸಿ ಬ್ಯಾಂಕ್‌ನಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸಾವಿರಾರು ಕುಟುಂಬಗಳಿಗೆ ಆರ್ಥಿಕ ನೆರವು ಸಿಕ್ಕಿದ್ದು, ರೈತರು ಮತ್ತು ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಬದುಕನ್ನು ಕಟ್ಟಿಕೊಳ್ಳುವಂತಾಗಿದೆ ಎಂದು ಹೇಳಿದರು.

ನೀವು ಗೆದ್ದು ಬರುವುದು ಖಚಿತ ನಂತರ ನಮ್ಮ ತಾಲ್ಲೂಕಿಗೆ ಹೆಚ್ಚಿನ ನೆರವನ್ನು ಒದಗಿಸಿಕೊಡಬೇಕೆಂದು ಅವರು ತಾಕೀತು ಮಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಎಚ್.ಎಸ್.ಮೋಹನ್‌ರೆಡ್ಡಿ ಅವರು ಡೈರಿಗಳ ಅಧ್ಯಕ್ಷರಲ್ಲಿ ಮತ ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ನ ನೂತನ ನಿರ್ದೇಶಕ ಡಾಲ್ಫಿನ್ ಶಾಲೆಯ ನಾಗರಾಜ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಮುಖಂಡರಾದ ವರದಣ್ಣ, ಟಿ.ಕೆ.ನಟರಾಜ್, ಪಂಪ್ ನಾಗರಾಜ್, ಡಿ.ಪಿ.ನಾಗರಾಜ್, ರಾಯಪ್ಪಲ್ಲಿ ಅಶ್ವತ್ಥನಾರಾಯಣರೆಡ್ಡಿ, ಅಪ್ಸರ್‌ಪಾಷ, ನಿರಂಜನ್, ಮೇಲೂರು ಕೆ.ಮಂಜುನಾಥ್‌,ಹೀರೇಬಲ್ಲ ರವಿಕುಮಾರ್, ನಾಗರಾಜ್, ವೆಂಕಟೇಶ್ ಹಾಗೂ ಎಲ್ಲಾ 17 ಮಂದಿ ಡೈರಿ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now