ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಸ್.ನಯನಾ ಆಯ್ಕೆ

ವಿಜಯ ದರ್ಪಣ ನ್ಯೂಸ್…..

ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಸ್.ನಯನಾ ಆಯ್ಕೆ

ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಿತ್ತನಹಳ್ಳಿ ಗ್ರಾಮದ ಸದಸ್ಯೆ ಎಸ್.ನಯನಾ ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದಾರೆ.

ಅವಧಿ ಅಧಿಕಾರ ಹಸ್ತಾಂತರ ಒಪ್ಪಂದದ ಹಿನ್ನೆಲೆ ಈ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರಾದ ಮಿತ್ತನಹಳ್ಳಿ ಗ್ರಾಮದ ಸದಸ್ಯೆ ಎಸ್.ನಯನಾ ಹಾಗೂ ಬೈರಸಂದ್ರ ಗ್ರಾಮದ ಶಶಿಕಲಾ ನಾಮಪತ್ರ ಸಲ್ಲಿಸಿದ್ದರು.

ಒಟ್ಟು 17 ಮಂದಿ ಸದಸ್ಯತ್ವ ಬಲ ಹೊಂದಿರುವ ಗ್ರಾಮ ಪಂಚಾಯತಿಯಲ್ಲಿ ಎಸ್‌.ನಯನಾ ಅವರಿಗೆ 10 ಮತ ಹಾಗು ಶಶಿಕಲಾ ಅವರಿಗೆ 7 ಮತಗಳು ಬಂದಿದ್ದು ಎಸ್.ನಯನಾ ಅವರು ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕೃಷಿ ಸಹಾಯಕ ನಿರ್ದೇಶಕ ಪಿ.ರವಿ ಘೋಷಣೆ ಮಾಡಿದರು.

ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರು, ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರಿಂದ ಪಕ್ಷದ ಸದಸ್ಯರಲ್ಲೆ ಗೊಂದಲವುಂಟಾಗಿತ್ತು ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರು ಬೆಳಗ್ಗೆಯಿಂದ ಸಂಧಾನ ನಡೆಸಿದರಾದರೂ ಸಂಧಾನ ವಿಫಲವಾಗಿದ್ದರಿಂದ ಚುನಾವಣೆ ಪ್ರಕ್ರಿಯೆ ನಡೆಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ರಾಜೀವ್ ಗೌಡ ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾ, ಮಾಜಿ ಅಧ್ಯಕ್ಷ ನಾಗೇಶ್‌, ಮಿತ್ತನಹಳ್ಳಿ ಹರೀಶ್, ಸುಗಟೂರು ದೇವರಾಜ್, ಸತೀಶ್, ಮಿತ್ತನಹಳ್ಳಿ ಮುನಿಆಂಜಿನಪ್ಪ, ಪರಮೇಶಪ್ಪ,ದ್ಯಾವಪ್ಪ, ನಾರಾಯಣಸ್ವಾಮಿ,ದೇವರಾಜ್‌, ನಾಗೇಶ್,ತಿರುಮಳಪ್ಪ ಶಿವಶಂಕ‌ರ್ ಇನ್ನಿತರರು ಹಾಜರಿದ್ದರು.