ಒಂದಷ್ಟು ಸಂಕಲ್ಪಗಳು…..
ವಿಜಯ ದರ್ಪಣ ನ್ಯೂಸ್….. ಒಂದಷ್ಟು ಸಂಕಲ್ಪಗಳು….. ಹೊಸ ಆಶಯಗಳ ಕನಸು ಕಾಣಲು ಯಾರ ಅಪ್ಪಣೆಯ ಅವಶ್ಯಕತೆಯೂ ಇಲ್ಲ…… ಕನಸೆಂಬ ಹುಚ್ಚು ಕುದುರೆಯನೇರಿ ಸವಾರಿ ಮಾಡುತ್ತಾ………. ಒಂದು ವೇಳೆ ಏನಾದರು ಪವಾಡ ನಡೆದು ನಾನು ಕರ್ನಾಟಕದ ಮುಖ್ಯಮಂತ್ರಿಯಾದರೇ……. ಒಂದೇ ವರ್ಷದಲ್ಲಿ ರಾಜ್ಯದ ರಸ್ತೆಗಳಲ್ಲಿ ಈಗ ಆಗುತ್ತಿರುವ ಅಪಘಾತಗಳಲ್ಲಿ ಶೇಕಡ 70% ರಷ್ಟು ತಡೆಯಬಲ್ಲೆ. ಎರಡೇ ವರ್ಷದಲ್ಲಿ ಈಗ ಹಣಕ್ಕಾಗಿ ನಡೆಯುತ್ತಿರುವ ಕೊಲೆ, ದರೋಡೆ, ಕಳ್ಳತನದಲ್ಲಿ ಶೇಕಡ 60% ರಷ್ಟು ನಿಯಂತ್ರಿಸಬಲ್ಲೆ. ಎರಡೇ ವರ್ಷದಲ್ಲಿ ಮಹಿಳೆಯರ ಮೇಲೆ ಈಗ ಆಗುತ್ತಿರುವ…
