ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವಂತೆ ಕಾಣುತ್ತಿಲ್ಲವೇ ಈಗಿನ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಶಾಸಕರ – ನಾಯಕರ – ಮಂತ್ರಿಗಳ ನಡವಳಿಕೆ….
ವಿಜಯ ದರ್ಪಣ ನ್ಯೂಸ್ ಬೆಂಗಳೂರು:ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಕೋಮುವಾದದ ವಿಷ ಬೀಜ ಬಿತ್ತುವ ಕ್ರಮಗಳು ಮುಂತಾದ ಆಡಳಿತಾತ್ಮಕ ವಿಫಲತೆಯಿಂದ ರೋಸಿ ಹೋದ ಕರ್ನಾಟಕದ ಮತದಾರರು ಬದಲಾವಣೆಯಾಗಿ ಕಾಂಗ್ರೇಸ್ ಪಕ್ಷಕ್ಕೆ ಅತ್ಯಂತ ಸ್ಪಷ್ಟ ಬಹುಮತ ನೀಡಿದರು. ಈ ಸರ್ಕಾರ ಪ್ರಾರಂಭದಲ್ಲಿ ಸಾಮಾಜಿಕ ನ್ಯಾಯದ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಿತು. ಅದಕ್ಕಾಗಿ ಅಭಿನಂದನೆಗಳು. ಆದರೆ ಇನ್ನೂ ಆರು ತಿಂಗಳು ಕಳೆಯುವ ಮೊದಲೇ ಅಧಿಕಾರಕ್ಕಾಗಿ ಭಿನ್ನಮತೀಯ ಚಟುವಟಿಕೆ ಪ್ರಾರಂಭಿಸಿರುವುದು ಸಾರ್ವಜನಿಕರಿಗೆ ಮಾಡುವ ಮೋಸವಲ್ಲವೇ….. ಸ್ವಾರ್ಥಿ ಸಿದ್ದರಾಮಯ್ಯ, ಅಹಂಕಾರಿ ಶಿವಕುಮಾರ್,…