--Ads--

ಡಿ ಬಾಸ್ ಜೈಲಿಂದ ಬಂದ …? ಬರಲೇಇಲ್ಲ !

On: October 17, 2024 7:15 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಡಿ ಬಾಸ್ ಜೈಲಿಂದ ಬಂದ …? ಬರಲೇಇಲ್ಲ !

ಬೆಂಗಳೂರು: ಇರಲಾರದೇ ಇರುವೇ ಬಿಟ್ಟುಕೊಂಡಿರುವ ಚಿತ್ರ ನಟ ದರ್ಶನ್ ಜೈಲಿನಿಂದ ಆಚೆ ಬಂದೇ ಬರುತ್ತಾನೆಂದು ನೂರಾರು ಅಭಿಮಾನಿಗಳ ದುರಾಸೆಗೆ 57ನೇ ಸಿಟಿ ಸಿವಿಲ್ ಕೋರ್ಟ್ ಬೇಲ್ ವಜಾ ಮಾಡಿ ಅವರಿಗೆಲ್ಲ ನಿರಾಸೆ ಮಾಡಿದೆ. ಹಿರಿಯ ವಕೀಲ ಸಿ.ವಿ.ನಾಗೇಶ್ ಕೇಸ್ ನಮ್ಮ ಸುಪರ್ದಿಗೆ ತೆಗೆದುಕೊಂಡು ಪಂಚನಾಮ ಸರಿಯಾಗಿ ಮಾಡಿಲ್ಲ. ಪೊಲೀಸರ ತನಿಖೆ ಸರಿಯಾಗಿಲ್ಲ. ಅದು ಸರಿ ಇಲ್ಲ, ಇದು ಸರಿಯಿಲ್ಲ ಎಂದು ಎಷ್ಟೇ ವೀರಾವೇಶದಿಂದ ವಾದ ಮಾಡಿದ್ದರೂ ರೇಣುಕಾಸ್ವಾಮಿ ಹತ್ಯೆಯಾಗಿರೋದು ನಿಜ. ಆ ಹತ್ಯೆಯನ್ನು ಡಿ ಬಾಸ್ ಗ್ಯಾಂಗ್ ಮಾಡಿರೋದು ನಿಜ. ಸಿ.ವಿ. ನಾಗೇಶ್ ಅವರ ವಾದದಲ್ಲಿ ಈ ಹತ್ಯೆಗೆ ದರ್ಶನ್ ಕಾರಣಕರ್ತನಲ್ಲ ಎಂದು ಎಲ್ಲಿಯೂ ವಾದಿಸಲಿಲ್ಲ.

ಬೇಲ್‌ಗೆ ಬೇಕಾಗಿರುವುದು ಕೇವಲ ಆರೋಪಿತ ಈ ಪ್ರಕರಣಕ್ಕೆ ನೇರವಾಗಿ ಸಹಕರಿಸಿಲ್ಲ. ಆತನಿಂದ ಪ್ರಕರಣದ ತನಿಖೆಗೆ ಅಡ್ಡಿಯಾಗುವುದಿಲ್ಲ. ಆರೋಪಿ ಸಾಕ್ಷಿ ನಾಶ ಮಾಡುವುದಿಲ್ಲ ಎಂಬುದೇ ಹೊರತು ಅವನಿಂದ ನೂರಾರು ಜನ ಬೀದಿಗೆ ಬೀಳುತ್ತಾರೆ. ಅವನ ಚಿತ್ರದಿಂದ ನೂರಾರು ಕುಟುಂಬಗಳು ಅನ್ನ ತಿನ್ನುತ್ತವೆ. ಎಂಬುದಾಗಿರುವುದಿಲ್ಲ. ಅನುಭವಿ ವಕೀಲ ಸಿ.ವಿ.ನಾಗೇಶ್‌ಗೆ ಇವೆಲ್ಲಾ ಏಕೆ ಅರ್ಥವಾಗಲಿಲ್ಲವೋ ದೇವರೇ ಬಲ್ಲ. ಈಗ ಹೈ ಕೋರ್ಟ್ ಗೆ ಅಪ್ಲಿಕೇಶನ್ ಹಾಕಿ ಕೊಳ್ಳುತ್ತಾರೆ ಅಲ್ಲಿ bail ಸಿಗುತ್ತದೆ. ಆದರೆ ನೂರು ದಿನ ಕಂಬಿ ಹಿಂದೆ ಇದ್ದ ಶಿಕ್ಷೆ ನಿಜಕ್ಕೂ ದಯನಿಯ.

ಬೀದಿ ನಾಯಿಯನ್ನು ಓಡಿಸಲು ಒಂದು ಕಡ್ಡಿ ಸಾಕಿತ್ತು. ದರ್ಶನ್ ಏಕೆ ಎ.ಕೆ.47 ನಂತ ಬಂದೂಕು ತೆಗೆದುಕೊಂಡರೋ ಗೊತ್ತಾಗುತ್ತಿಲ್ಲ. ಪವಿತ್ರಗೌಡ ಎಂಬಾಕೆ ಮೇಕ್ಅಪ್ ಅಸಿಸ್ಟೆಂಟ್ ಜೊತೆ ಇದ್ದವಳು ಎಂದು ಕೆಲವರು ಹೇಳುತ್ತಾರಾದರೂ, ನಮ್ಮಂಥವರಿಗಷ್ಟೇ ದರ್ಶನ್ ಇಟ್ಟು ಕೊಂಡವಳು ಎನಿಸುತ್ತದೆ . ಆದರೆ ದರ್ಶನ್‌ಗೆ ಅವಳು ಕಟ್ಟಿಕೊಂಡವಳು, ಅವರಳಿಗಾಗಿ ತನ್ನ ದುಡ್ಡು ದೌಲತ್ತು ತೋರಿಸಲೋಗಿ ನೂರು ದಿನದಿಂದ ಜೈಲಿನ ಹಕ್ಕಿಯಾಗಿರುವುದು ಬೇಕಾಗಿತ್ತಾ. ಯಾವೊಬ್ಬ ಗಂಡಸಾದರೂ ಅದನ್ನೇ ಮಾಡುತ್ತಿದ್ದುದು. ಆದರೆ ಮಾಡಿದ ರೀತಿ ಸರಿಯಿಲ್ಲ.

ರೇಣುಕಾಸ್ವಾಮಿಯ ಅಪ್ಪ ಅಮ್ಮ ಮಾತೆತ್ತಿದರೆ ಕಣ್ಣೀರು ಸುರಿಸುತ್ತಾ ತನ್ನ ಮಗನನ್ನು ಕೊಂದಿದ್ದಾರೆ ಎಂದು ಹಲಬುತ್ತಾರೆ. ಅವರು ಎಲ್ಲೂ ತಮ್ಮ ಮಗ ಪವಿತ್ರಗೌಡ ಗೆ ಅಸಹ್ಯಕರ ಮೆಸೇಜ್ ಮಾಡಿರೋದು ತಪ್ಪು ಇನ್ನೂ ಹಲವಾರು ನಟಿಮಣಿಯರಿಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಹಾಕಿರೋದು ತಪ್ಪು ಎಂದು ಹೇಳುವುದಿಲ್ಲ. ಪವಿತ್ರಗೌಡಳೊಂದಿಗೆ ಅವಳು ಒಪ್ಪಿದ್ದರೆ ಲೀವಿಂಗ್ ರಿಲೇಶನ್ ಮಾಡಿಕೊಳ್ಳುತ್ತಿದ್ದಿದ್ದು ತಪ್ಪು ಎಂದು ಹೇಳುವುದಿಲ್ಲ. ಹೆತ್ತ ಕರುಳು ಹೋಗಲಿ ಬಿಡಿ.
ನಮ್ಮ ಮಾಧ್ಯಮದವರಿಗೆ ಏನಾಗಿದೆ ರೇಣುಕಾಸ್ವಾಮಿ ಹತ್ಯೆಯನ್ನು, ದರ್ಶನ್ ಕ್ರೌರ್ಯವನ್ನು, ಪ್ರತಿ ಕ್ಷಣ ಏಕೆ ಬಿತ್ತರಗೊಳಿಸಬೇಕು. ದರ್ಶನ್ ಸೆಲೆಬ್ರಿಟಿ ಆಗಿಲ್ಲದಿದ್ದರೆ ಮಾಧ್ಯಮದವರು ಇದನ್ನು ಶತಮಾನದ ಹತ್ಯೆಯಂತೆ ಬಿಂಬಿಸದಿದ್ದರೆ ಸಾಮಾನ್ಯ ವ್ಯಕ್ತಿಗೆ ಸಿಗುತ್ತಿದ್ದ ಬೇಲ್ ಸೌಲಭ್ಯ ಇಷ್ಟೊತ್ತಿಗಾಗಲೇ ದರ್ಶನ್‌ಗೆ ಸಿಗುತ್ತಿತ್ತು. ಏನು ಮಾಡುವುದು ಒಂದು ದರ್ಶನ್ ಮೇಲಿರುವ ಕೋಪ ಮತ್ತೊಂದು ಟಿಆರ್‌ಪಿ ಹಿಂದೆ ಬೀಳುವ ಹಪಾಹಪಿ. ದರ್ಶನ್ ರೌಡಿ ನಾಗನೊಂದಿಗೆ ಐಷಾರಾಮಿ ಬದುಕು ಸಾಗಿಸುತ್ತಿದ್ದಾನೆ ಎಂದು ಹೇಳಿ ಬಳ್ಳಾರಿ ಜೈಲಿಗೆ ಕಳಿಸಿದ್ದಾಯ್ತು. ಅಲ್ಲಿ ಇನ್ನೂ ಐಷಾರಾಮದ ಬದುಕು ದರ್ಶನ್ ಕಾಣುತ್ತಿದ್ದಾನೆ. ಯಾರೋ ತಂದು ಕೊಟ್ಟ ಬಟ್ಟೆ, ಹಣ್ಣು, ಡ್ರೈ ಫ್ರೂಟ್ ಬ್ಯಾಗ್ ಹಿಡಿದುಕೊಂಡು ಬಂದರೆ ಜೈಲಿನಿಂದ ಹೊರಟ ದರ್ಶನ್ ಎಂಬ ಬ್ರೇಕಿಂಗ್ ನ್ಯೂಸ್, ಥೂ ನಾಚಿಕೆಯಾಗಬೇಕು ಅವನ ಹಿಂದೆ ಬಿದ್ದಿರುವ ಮೊಸಳೆಯಾಕಾರದ ಕ್ಯಾಮರಾಗಳಿಗೆ…….


... ನರಸಿಂಹ ಮೂರ್ತಿ. B . R.
94448174932

WhatsApp

Join Now

Telegram

Join Now

Instagram

Join Now