ಜೆಎನ್-1 ವೈರಸ್ ಕೊರೋನಾ ವೈರಸ್ನಷ್ಟು ಆಘಾತಕಾರಿಯಲ್ಲ
ವಿಜಯ ದರ್ಪಣ ನ್ಯೂಸ್ ಬೆಂಗಳೂರು ಡಿಸೆಂಬರ್:ಇದನ್ನು ನಮ್ಮಲ್ಲೇ ಕೆಲವು ವೈದ್ಯರು ಡಂಗೂರ ಬಾರಿಸಿಕೊಂಡು ಹೇಳುತ್ತಿದ್ದರೂ ಕೆಲವು ದೃಶ್ಯಮಾಧ್ಯಮಗಳು ಜನರಿಗೆ ಅರಿವು ಮೂಡಿಸುವ ಭ್ರಮೆಯಿಂದ ಭಯೋತ್ಪಾದಕರಂತೆ ಭಯದ ಉತ್ಪಾದನೆ ಮಾಡುತ್ತಿವೆ. ಇದೊಂದು ಕೋವಿಡ್-19, ಓಮಿಕ್ರಾನ್ ತಳಿಯ ಮುಂದಿನ ಮಾರ್ಪಟ್ಟ ಇನ್ನೊಂದು ವೈರಸ್ ಅಷ್ಟೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ವೈರಸ್ ಅಟ್ಯಾಕ್ ಆಗುತ್ತಲೇ ಇರುತ್ತದೆ. ನವೆಂಬರ್, ಡಿಸೆಂಬರ್, ಜನವರಿ ಚಳಿಗಾಲವಾದ್ದರಿಂದ ಈ ಕಾಲವು ವೈರಸ್ಗಳಿಗೆ ಅನುಕೂಲಕರವಾಗಿರುವುದರಿಂದ ಮನುಷ್ಯನ ಉಸಿರಾಟದಿಂದ ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಈಗಂತೂ ಜನರಲ್ಲಿ ವೈರಸ್ ಅಂದರೆ ಭಯಭೀತರಾಗುವ…