ಜೈ ಶ್ರೀರಾಮ್….
ವಿಜಯ ದರ್ಪಣ ನ್ಯೂಸ್ ದೇಶ ಮೊದಲು ಎಂದು ಹೇಳುತ್ತಿದ್ದ ಬಹಳಷ್ಟು ಜನರು ರಾಮ ಮೊದಲು ಎಂಬ ಭಾವನಾತ್ಮಕ ಸುಳಿಗೆ ಸಿಲುಕಿದ್ದಾರೆ ಎಂದೆನಿಸುವುದಿಲ್ಲವೇ…. ವಿಶ್ವ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಧಾರ್ಮಿಕ ಅಂಧತ್ವ, ಧಾರ್ಮಿಕ ಉದ್ವೇಗ, ಮೂಡ ಭಕ್ತಿ ಕೊನೆ ಕೊನೆಗೆ ಪರಿವರ್ತನೆ ಹೊಂದಿ ತನ್ನ ಉಚ್ಛ್ರಾಯ ಸ್ಥಿತಿಯನ್ನು ತಲುಪಿ ಅಂತಿಮವಾಗಿ ರಕ್ತಪಾತದ ಮುಖಾಂತರ ವಿನಾಶದ ಅಂಚಿಗೆ ಬಂದು ತಲುಪುತ್ತದೆ….. ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಪರಿವರ್ತನೆ ಹೊಂದುವುದಿಲ್ಲವೇ ಹಾಗೆಯೇ ಭಕ್ತಿ ಅತಿಯಾದರೆ ಉನ್ಮಾದವಾಗುತ್ತದೆ. ಅಲ್ಲಿ ಭಯ ಭಕ್ತಿ ವಿನಯ ಪ್ರೀತಿ…