ಇದು ಸಾಧ್ಯವೇ…….. ನಿನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ
ವಿಜಯ ದರ್ಪಣ ನ್ಯೂಸ್… ಇದು ಸಾಧ್ಯವೇ…….. ನಿನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ ( Shadow Cabinet ) ಸಭೆಯಲ್ಲಿ ತೆಗೆದುಕೊಂಡ ಕೆಲವು ಬಹುಮುಖ್ಯ ತೀರ್ಮಾನಗಳು…… 1) ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಅರೆ ಸರ್ಕಾರಿ ಅಧಿಕಾರಿಗಳು, ಅಧಿಕಾರದಲ್ಲಿರುವ ಎಲ್ಲಾ ಜನಪ್ರತಿನಿಧಿಗಳು ಇನ್ನು ಮುಂದೆ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು, ಅಧಿಕೃತ ಕೆಲಸಕ್ಕೆ ಸರ್ಕಾರಿ ವಾಹನಗಳಲ್ಲಿಯೇ ಪ್ರಯಾಣಿಸಬೇಕು, ಅನಾರೋಗ್ಯವಾದಾಗ ಸರ್ಕಾರಿ ಆಸ್ಪತ್ರೆಗಳಲ್ಲಿಯೇ…