ಸಾವಿಗೀಡಾಗಿರುವ ರೇಷ್ಮೆ ಹುಳುಗಳನ್ನು ರೇಷ್ಮೆ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ
ವಿಜಯ ದರ್ಪಣ ನ್ಯೂಸ್… ಸಾವಿಗೀಡಾಗಿರುವ ರೇಷ್ಮೆ ಹುಳುಗಳನ್ನು ರೇಷ್ಮೆ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ಶಿಡ್ಲಘಟ್ಟ : ತಾಲ್ಲೂಕಿನ ಲಕ್ಕಹಳ್ಳಿಯ ನಿವೃತ್ತ ಉಪನ್ಯಾಸಕರು ಹಾಗು ರೈತರಾದ ಆರ್.ಆಂಜನೇಯ ಅವರ ಹಿಪ್ಪುನೇರಳೆ ಸೊಪ್ಪಿಗೆ ದುಷ್ಕರ್ಮಿಗಳು ವಿಷವನ್ನು ಸಿಂಪಡಿಸಿದ್ದರಿಂದಾಗಿ ರೇಷ್ಮೆ ಹುಳುಗಳು ಸಾವಿಗೀಡಾಗಿವೆ. ಹಣ್ಣಾದ ಹಂತದಲ್ಲಿದ್ದ ಮತ್ತು ಮೂರನೇ ಹಂತದಲ್ಲಿದ್ದ ಒಟ್ಟಾರೆ 300 ಮೊಟ್ಟೆಗಳ ಹುಳುಗಳು ಸತ್ತಿರುವುದರಿಂದ ರೈತರಿಗೆ ಸುಮಾರು ಎರಡೂವರೆ ಲಕ್ಷ ರೂ.ಗಳು ನಷ್ಟವಾಗಿದೆ. ಆರ್.ಆಂಜನೇಯ ಅವರ ನಾಲ್ಕು ಎಕರೆ ಹಿಪ್ಪುನೇರಳೆ ತೋಟದಲ್ಲಿ ಒಂದು ಎಕರೆ ಸೊಪ್ಪಿಗೆ ದುಷ್ಕರ್ಮಿಗಳು ವಿಷ…