ಸುತ್ತೂರಿನ ಶಿವರಾತ್ರಿ ಶಿವಯೋಗಿಗಳ ಸುತ್ತೂರಿನ ವಿಜೃಂಭಣೆಯಿಂದ ಜರುಗಿದ ರಥೋತ್ಸವ ಹರಿದು ಬಂದ ಭಕ್ತ ಸಾಗರ

ವಿಜಯ ದರ್ಪಣ ನ್ಯೂಸ್….

ಸುತ್ತೂರಿನ ಶಿವರಾತ್ರಿ ಶಿವಯೋಗಿಗಳ ಸುತ್ತೂರಿನ ವಿಜೃಂಭಣೆಯಿಂದ ಜರುಗಿದ ರಥೋತ್ಸವ ಹರಿದು ಬಂದ ಭಕ್ತ ಸಾಗರ

ತಾಂಡವಪುರ ಜನವರಿ 17 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಇತಿಹಾಸ ಪ್ರಸಿದ್ಧಿ ಉಳ್ಳ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರೆ ಮಹೋತ್ಸವದಲ್ಲಿ ಶನಿವಾರ ಬೆಳಿಗ್ಗೆ 11.00ಕ್ಕೆ ಪೂಜೆ ಸಲ್ಲಿಸಿ ರಥೋತ್ಸವ ವಿಜೃಂಭಣೆಯಿಂದ ಜರಗಿದ್ದು ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥೋತ್ಸವಕ್ಕೆ ಹಣ್ಣು ದವನ ಎಸೆದು ಪುನೀತರಾದರು
ರಥೋತ್ಸವಕ್ಕೆ ಸುತ್ತೂರು ಶ್ರೀ ಗಳು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಗಳು ಚಾಲನೆ ನೀಡಿದರು.
ಸುತ್ತೂರು ರಥೋತ್ಸವವನ್ನು ನೋಡಲು ಆಗಮಿಸಿದ್ದ ಲಕ್ಷಾಂತರ ಜನ ರಥೋತ್ಸವಕ್ಕೆ ಹಣ್ಣು ದವನ ಎಸೆದು ಪುನೀತರಾದರು.
ಜಾತ್ರೆ ಮಹೋತ್ಸವದಲ್ಲಿ ಜಾನಪದ ಕಲಾತಂಡಗಳು, ನಾದಸ್ವರ, ವೀರಗಾಸೆ, ಡೊಳ್ಳು ಕುಣಿತ, ಜಾಂಜ್ ಮೇಳ,ಪೂಜಾ ಕುಣಿತ, ಗಾರುಡಿ ಗೊಂಬೆ , ತಮಟೆ ನಗಾರಿ, ಮ್ಯೂಸಿಕ್ ಡ್ರಮ್ಸ್, ಕೋಲಾಟ, ಮರಗಾಲು, ಕಂಸಾಳೆ, ದಾನಪಟ್ಟ, ವೀರಾಮಕ್ಕಳ, ತಮಟೆ, ಮಹಿಳಾ & ಪುರುಷರು ಚೆಂಡೆ, ದಾಳಪಟ, ಕರಡಿ ಮಜಲು, ಸುಗ್ಗಿ ಕುಣಿತ, ಗೊರವರ ಕುಣಿತ, ನಾಸಿಕ್ ಡ್ರಮ್ಸ್, ಹುಲಿವೇಶ, ಜಾನ್ ಪಥಕ್, ಸೇರಿದಂತೆ ಒಟ್ಟು 33 ತಂಡಗಳು ಸಾಂಸ್ಕೃತಿಕ ವೈಭವ ನಡೆಸಿಕೊಟ್ಟವು.

ಬಳಿಕ ಧಾರ್ಮಿಕ ವೇದಿಕೆ ಕಾರ್ಯಕ್ರಮವನ್ನು ಪರಮಪೂಜ್ಯರು , ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು, ಆಹಾರ ನಾಗರಿಕ ಸರಬರಾಜು ಸಚಿವರಾದ ಕೆ. ಎಚ್. ಮುನಿಯಪ್ಪ, ಮಾಜಿ ಸಚಿವರು ಹಾಗೂ ಶಾಸಕರಾದ ಜಿ.ಟಿ. ದೇವೇಗೌಡ, ಸೇರಿದಂತೆ ಇನ್ನಿತರು ಅತಿಥಿಗಳು ಕಾರ್ಯಕ್ರಮ ಸಮಾರಂಭವನ್ನು ಉದ್ಘಾಟಿಸಿದರು.
ಸಚಿವರಾದ ಕೆ.ಹೆಚ್. ಮುನಿಯಪ್ಪ ಮಾತನಾಡಿ ಪ್ರತಿವರ್ಷದಂತೆ ಪರಂಪರೆಯಿಂದ ಜಾತ್ರಾ ಮಹೋತ್ಸವ ನಡೆಸಿಕೊಂಡು ಬುದ್ಧ , ಅಂಬೇಡ್ಕರ್, ಬಸವಣ್ಣ, ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದು, ಎಲ್ಲರ ಸಮಾನ ಸಮಾನತೆಯನ್ನು ನಡೆಸಿಕೊಂಡು ಬರುತ್ತಿರುವುದು ಶ್ರೀ ಸುತ್ತೂರು ಮಠ ಮಹಾಸ್ವಾಮೀಜಿಗಳು ಎಂದರು.

ರಾಜ್ಯದಲ್ಲೇ ಹೆಸರು ಮಾಡಿ ಬಸವಣ್ಣನವರ ತತ್ವ ಆದರ್ಶಗಳನ್ನು ನಡೆಸುತ್ತಾ ಸೇವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಮಠಕ್ಕೆ ಸೇವಕನಾಗಿ ಕೆಲಸ ಮಾಡುತ್ತೇನೆ. ಈ ಮಠ ಶ್ರೇಷ್ಠವಾದ ಮಹತ್ವ ಪಡೆದಿದೆ. ಸಮಾಜದ ಸುಧಾರಣೆ ತರಲು ದಾರಿದೀಪವಾಗಿದೆ ಎಂದು ಗುಣಗಾನ ಮಾಡಿದರು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ ಸಾವಿರಾರು ವರ್ಷಗಳ ಪರಂಪರೆಯಿಂದ ನಡೆದುಕೊಂಡು ಶಿವರಾತ್ರಿಶ್ವರ ಮಹಾಸ್ವಾಮಿಗಳ ದೂರ ದೃಷ್ಟಿ ಪಾಲನೆ ಮತ್ತು ಬಸವಣ್ಣನವರ 12ನೇ ಶತಮಾನದ ವಿಚಾರಗಳನ್ನು ಹಂಚಿಕೊಂಡು ಬಂದಿರುವ ಸುತ್ತೂರು ಜಾತ್ರೆ ಮಹೋತ್ಸವ ಪ್ರಪಂಚವನ್ನು ಸೆಳೆದಿದೆ. ಹಳ್ಳಿಯಲ್ಲಿ ಜಾನಪದಗಳು ಹಿಂದಿನ ಪರಂಪರೆಯಿಂದ ಬಂದಹಂತಹ ಕಲೆಯ ನೆನಪುಗಳನ್ನು ಮಾಡುತ್ತಿರುವುದು ಶ್ರೀ ಸುತ್ತೂರು ಮಠ, ಶಿಕ್ಷಣ ಜೊತೆಗೆ ಆರೋಗ್ಯ ಒತ್ತು ಕೊಟ್ಟು ನಿರ್ಮಾಣ ಮಾಡಿಕೊಂಡು ಬರುತ್ತಿರುವ ಶ್ರೀ ಮಠ, ರೈತರಿಗೆ ಕೃಷಿಗೆ ಹೆಚ್ಚು ಹೊತ್ತು ಕೊಡಬೇಕೆಂದು ತಜ್ಞರನ್ನು ಕರೆಸಿ ರೈತರಿಗೆ ತರಬೇತಿ ಕೊಡುತ್ತಾರೆ. ರೈತರಿಗೆ ಕೃಷಿಯ ಹೆಚ್ಚು ಅರಿವು ಮೂಡಿಸುವ ಶ್ರೀ ಸುತ್ತೂರು ಮಠ ದಿಂದ ಮಾತ್ರ ಸಾಧ್ಯ, ಸುತ್ತೂರು ಮಠದಲ್ಲಿ ಮದುವೆ ಆದವರು ಪುಣ್ಯವಂತರು, ಈ ಪುಣ್ಯ ಕ್ಷೇತ್ರದಲ್ಲಿ ಸರಳವಾಗಿ ಮದುವೆಯಾದರೆ ಬದುಕನ್ನು ಕಟ್ಟಿಕೊಳ್ಳಬಹುದು. ತಲೆಮಾರಿನಿಂದ ಜಮೀನನ್ನು ಉಳಿಸಿಕೊಳ್ಳಬಹುದು.ಆದರೆ ಇತ್ತೀಚಿಗೆ ಮದುವೆ ಮಾಡುತ್ತೇನೆ ಅಂತ ತಮ್ಮ ಜಮೀನನ್ನು ಉಳಿಸಿಕೊಳ್ಳದೆ ಮಾರಾಟ ಮಾಡಿ ಅದ್ದೂರಿಯಾಗಿ ಮದುವೆ ಮಾಡುವ ಪರಿಸ್ಥಿತಿಗಳನ್ನು ನೋಡುತ್ತಿದ್ದೇನೆ. ಆದರೆ ನನ್ನ ಇಬ್ಬರ ಮಕ್ಕಳನ್ನು ಧರ್ಮಸ್ಥಳದಲ್ಲಿ ಸರಳವಾಗಿ ಮದುವೆ ಮಾಡಿದ್ದೇನೆ. ಜಮೀನು ಮಾರುವ ಬದಲು ತಮ್ಮ ಹೆಣ್ಣು ಮಕ್ಕಳಿಗೆ ಕೊಟ್ಟರೆ ಜಮೀನು ಉಳಿತಾಯವಾಗುತ್ತದೆ ಎಂದು ಜಾತ್ರೆಗೆ ಬಂದಂತಹ ಭಕ್ತರಿಗೆ ಕಿವಿಮಾತು ಹೇಳಿದರು.

ಮೈಸೂರು ಪ್ರಾದೇಶಿಕ ಆಯುಕ್ತರು ನಿತೇಶ್ ಪಾಟೀಲ್
ಮಾತನಾಡಿ ಅನೇಕ ವೈಶಿಷ್ಟತೆ ಮೂಲ ಕಾರಣ, ಸುತ್ತೂರು ಸುತ್ತಿದರೆ ಕರ್ನಾಟಕದ ಅನೇಕ ವಿಚಾರಗಳು ಗೊತ್ತಾಗುವುದು, ಜಗತ್ತು ಪರಿಚಯ ಪಡೆದರೆ ಶ್ರೀ ಮಠಗಳಿಂದ ಮಾತ್ರ ಸಾಧ್ಯ, ಪರಂಪರೆ ಉಳಿಸಿಕೊಂಡು ಬರುತ್ತಿರುವ ಸಂಸ್ಥೆ ಸುತ್ತೂರು ಮಠ, ಸುತ್ತೂರು ಮಠ ಶ್ರೀ ರಕ್ಷೆಯಾಗಿದೆ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸಿ ಸೋಮಶೇಖರ್ ಮಾತನಾಡಿ ವೈಶಿಷ್ಟತೆ ಕ್ಷೇತ್ರ, ಧಾರ್ಮಿಕ ಕ್ಷೇತ್ರ . ಪರಂಪರೆ ನಡೆದುಕೊಂಡು ಬಂದಿರುವ ಸಮ್ಮೇಳನ ಭಜನಾಮೇಳ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು, ತುಮಕೂರು ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಮಹಾಸ್ವಾಮಿಗಳು, ಶಿವನಂದ್, ಕುಮಾರ್ ರಾಜಶೇಖರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.