ರೈತರಿಗೆ ಆರ್ ಟಿ ಸಿ ವಿತರಣೆ ಮಾಡಿದ ಯತೀಂದ್ರ ಸಿದ್ದರಾಮಯ್ಯ

ವಿಜಯ ದರ್ಪಣ ನ್ಯೂಸ್….

ರೈತರಿಗೆ ಆರ್ ಟಿ ಸಿ ವಿತರಣೆ ಮಾಡಿದ ಯತೀಂದ್ರ ಸಿದ್ದರಾಮಯ್ಯ

ತಾಂಡವಪುರ ಫೆಬ್ರುವರಿ 28 ಸಿದ್ದರಾಮಯ್ಯನ ಹುಂಡಿ ಮಾದಗೆರೆ ಚಟ್ನಳ್ಳಿ ಗ್ರಾಮದ ರೈತರ ಬಹುದಿನಗಳ ಬೇಡಿಕೆಯಾಗಿ ಕನಸಾಗಿ ಉಳಿದಿದ್ದ ರೈತರ ಜಮೀನನ್ನು ದುರಸ್ತಿ ಮಾಡಿ ಮೂರು ಗ್ರಾಮಗಳಾದ ಸಿದ್ದರಾಮಯ್ಯನ ಹುಂಡಿ ಮಾದಿಗೆರೆ ಚಟ್ನಹಳ್ಳಿ ಗ್ರಾಮದ ರೈತರಿಗೆ ವಿಧಾನ ಪರಿಷತ್ ಸದಸ್ಯ ಆದ ಡಾ. ಯತೀಂದ್ರ ಸಿದ್ರಾಮಯ್ಯನವರು ಆರ್ ಟಿ ಸಿ ಗಳನ್ನು ವಿತರಿಸಿದರು

ಅವರು ಮೈಸೂರು ಜಿಲ್ಲೆ, ವರುಣ ವಿಧಾನಸಭಾ ಸದಸ್ಯರು ಲಲಿತಾದ್ರಿಪುರ ಗ್ರಾಮದಲ್ಲಿ ಕಂದಾಯ ಇಲಾಖೆ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ವರ್ಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಗ್ರಾಮಗಳಾದ ಚಟ್ನಳ್ಳಿ, ಮಾದಿಗೆರೆ ಸಿದ್ದರಾಮಯ್ಯನ ಹುಂಡಿ ಗ್ರಾಮದ ರೈತರು ಹಲವಾರು ವರ್ಷಗಳಿಂದ ಭೂಮಿ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತರು ತಮಗೆ ಸರ್ಕಾರದಿಂದ ಭೂಮಿ ಮಂಜೂರು ಮಾಡಿಕೊಳ್ಳಬೇಕೆಂದು ಮನವಿ ಮಾಡಿದ ಫಲವಾಗಿ ಆ ಆ ರೈತರ ಜಮೀನನ್ನು ಕಂದಾಯ ಇಲಾಖೆಯವರು ದುರಸ್ತಿ ಮಾಡಿ ರೈತರಿಗೆ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ ಯತೀಂದ್ರ ಸಿದ್ರಾಮಯ್ಯನವರು ಆರ್ ಟಿ ಸಿ ವಿತರಿಸಿ ಮಾತನಾಡುತ್ತ, ನಾವು ಸದಾ ರೈತರು ಬಡವರು ಕೂಲಿ ಕಾರ್ಮಿಕರ ಪರವಾಗಿ ಸಾರ್ವಜನಿಕರ ಪರವಾಗಿ ಶ್ರಮಿಸುತ್ತಿದ್ದು ರೈತರು ಹಲವಾರು ವರ್ಷಗಳಿಂದ ಉಳುಮೆ ಮಾಡಿ ಅವರಿಗೆ ಭೂಮಿ ಮುಂಜೂರಾಗತ್ತು ಆದರೆ ದುರಸ್ತಿ ಮಾಡಿ ಅವರ ಹೆಸರಲ್ಲಿ ಪಹಣಿ ಬರ್ತಿರಲಿಲ್ಲ ಆದರಿಂದ ರೈತರು ಹಲವಾರು ಬಾರಿ ನಮ್ಮ ಗಮನಕ್ಕೆ ತಂದು ಮನವಿ ಮಾಡಿದರು ಅವರ ಮನವಿಯನ್ನು ಸ್ವೀಕರಿಸಿ ಸಂಬಂಧಪಟ್ಟ ಕಂದಾಯ ಇಲಾಖೆಗೆ ಈ ವಿಚಾರವಾಗಿ ತಿಳಿಸಿ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿದ್ದೀರಿ ನಿಮ್ಮೆಲ್ಲ ಸಮಸ್ಯೆಗಳನ್ನು ಅಂತಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುಳಾ ಮಂಜುನಾಥ್ ತಾಲೂಕು ತಂಡ ಅಧಿಕಾರಿ ಮಹೇಶ್ ಕುಮಾರ್ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ ಸ ಕಳ್ಳಿ ಗ್ರಾಮದ ಮೈಸೂರು ಜಿಲ್ಲೆ ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ಬಸವರಾಜು ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಎಂ ಸಿ ಹುಂಡಿ ಶಿವಪ್ರಸಾದ್ ಚಟ್ನಹಳ್ಳಿ ಪಾಳ್ಯ ಸುರೇಶ್ ವರುಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವಿ ಆರ್ ಐ ಯೋಗೇಂದ್ರ ಕುಮಾರ್ ಗ್ರಾಮದ ಮುಖಂಡರಾದ ಭೂಮೇಶ್ ಗೌಡ ಸುರೇಶ್ ಗೌಡ ಕಾಳೇಗೌಡ ಪುನೀತ್ ರಂಗಯ್ಯ ಶಶಿಕುಮಾರ್ ಸಣ್ಣ ಮಾಧು, ನಾಗೇಂದ್ರ ಪ್ರಕಾಶ್ ನಟರಾಜು ಪುಟ್ಟಸ್ವಾಮಿ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ವಿಜಯಕುಮಾರ್ ಆಪ್ತ ಸಹಾಯಕರಾದ ಪ್ರದೀಪ್ ಶಿವಸ್ವಾಮಿ ಮಹೇಶ್ ಮುಖಂಡರಾದ ಉತ್ತನಹಳ್ಳಿ ಶಿವಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು