--Ads--

ಟಿ ನರಸಿಪುರದ ಕೆ ಎಸ್ ಐ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯನ್ನು ಮುಚ್ಚುವುದಿಲ್ಲ:ಸಂಸದ ಸುನಿಲ್ ಬೋಸ್

On: March 1, 2026 10:17 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಟಿ ನರಸಿಪುರದ ಕೆ ಎಸ್ ಐ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯನ್ನು ಮುಚ್ಚುವುದಿಲ್ಲ:ಸಂಸದ ಸುನಿಲ್ ಬೋಸ್

ಮೈಸೂರು : ತಾಂಡವಪುರ ಫೆಬ್ರವರಿ 28 ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡುತ್ತಿರುವ ಪಟ್ಟಣದ ಕೆ ಎಸ್ ಐ ಸಿ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಕಾರ್ಖಾನೆಯ ಅಸ್ಥಿತ್ವಕ್ಕೆ ಅಪಾಯವಿದ್ದರೆ ಸಂಬಂಧಿಸಿದವರೊಂದಿಗೆ ಸಾಧಕ ಪಾದಕಗಳನ್ನು ಚರ್ಚಿಸಿ, ಕ್ರೀಡಾಂಗಣ ನಿರ್ಮಾಣ ಸ್ಥಳವನ್ನು ಬದಲಾವಣೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಸೇರುವ ಕೆಂಪನಪುರ ಗ್ರಾಮದಲ್ಲಿ ಗುರುವಾರ ವಿಶೇಷ ಘಟಕ ಅನುದಾನ ಹಾಗೂ ಮಳೆಹಾನಿ ಅನುದಾನದಲ್ಲಿ ಪ.ಜಾತಿ ಕಾಲನಿ ಮತ್ತು ಸಾಮಾನ್ಯ ವರ್ಗದ ಬಡಾವಣೆಯಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲು ಅತಿ ಶೀಘ್ರದಲ್ಲೇ ಸ್ಥಳ ಪರಿಶೀಲಿಸಿ, ರೇಷ್ಮೆ ಉದ್ಯಮಗಳ ನಿಗಮದ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದರು.

ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಮೈಸೂರು ರೇಷ್ಮೆ ಸೀರೆ ಉದ್ಯಮವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ವತಂತ್ರ ಪೂರ್ವದಲ್ಲಿಯೇ ಹುಟ್ಟು ಹಾಕಿದ ಕೈಗಾರಿಕಾ ಸಂಸ್ಥೆಯನ್ನು ಮುಚ್ಚುವ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ. ವಿಪಕ್ಷ ಮುಖಂಡರು ಈ ವಿಚಾರವನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ವೃಥಾ ಆರೋಪವನ್ನು ಮಾಡುತ್ತಿದ್ದಾರೆ. ಅವರೆಷ್ಟು ಅಪಪ್ರಚಾರ ಮಾಡಿದಷ್ಟೂ ಜನರು ನಾಯಕರನ್ನಾಗಿ ಮಾಡುತ್ತಾರೆ ಎಂದರು.

ತಾಲೂಕು ಕೇಂದ್ರದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಜನರಿಂದ ಅದರಲ್ಲೂ ವಿದ್ಯಾರ್ಥಿಗಳಿಂದ ವ್ಯಾಪಕವಾಗಿತ್ತು. ಅದಕ್ಕಾಗಿ ವರ್ಷಗಳ ಹಿಂದೆಯೇ ಬಜೆಟ್ ನಲ್ಲಿ ಅನುದಾನ ಮಂಜೂರು ಮಾಡಲಾಗಿತ್ತು. ರೇಷ್ಮೆ ಕಾರ್ಖಾನೆ ನಿವೇಶನವನ್ನು ಆಯ್ಕೆ ಮಾಡಿದ್ದಕ್ಕೆ ಮೊದಲು ಕಾರ್ಮಿಕರು ಮತ್ತು ಪರಿಸರ ಸಂಘಟನೆಗಳ ವಿರೋಧವಿತ್ತು. ಈಗ ಅದನ್ನು ಬಿಜೆಪಿ ರಾಜಕೀಯ ತಿರುವು ಕೊಟ್ಟು, ಸೂಕ್ಷ್ಮವಾದ ವಿಚಾರವನ್ನಾಗಿ ಮಾಡಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.

ಜಿ.ಪಂ ತಾಂತ್ರಿಕ ಉಪ ವಿಭಾಗದ 2024-25 ನೇ ಸಾಲಿನ 5054 ಮಳೆ ಹಾನಿ(ಸಾಮಾನ್ಯ) ಕೊಳತ್ತೂರು ಗ್ರಾಮದಲ್ಲಿ 25 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಸೇರಿದಂತೆ, ನರಗ್ಯಾತನಹಳ್ಳಿ ಗ್ರಾಮದಲ್ಲಿ 20 ಲಕ್ಷ, ಕೋಣಗಹಳ್ಳಿ 20 ಲಕ್ಷ, ಕಳೆದ 2023-24 ನೇ ಸಾಲಿನ ಸಿಎಂ ವಿಶೇಷ ಅನುದಾನ 1.20 ಕೋಟಿ, ಸಿಗೋಡಿಪುರ 20 ಲಕ್ಷ, ನಾಗಲಗೆರೆ ಗ್ರಾಮದಲ್ಲಿ ಸಿಎಂ ವಿಶೇಷ ಅನುದಾನ 60 ಲಕ್ಷ, ಚಿದರವಳ್ಳಿ ಗ್ರಾಮದಲ್ಲಿ ಎಸ್ಸೀಪಿ 20 ಲಕ್ಷ, ಮಳೆ ಹಾನಿ ಅನುದಾನ 30 ಲಕ್ಷ, ಬೊಮ್ಮನಹಳ್ಳಿ ಗ್ರಾಮದಲ್ಲಿ ಎಸ್ ಸಿ ಪಿ ಅನುದಾನ 15 ಲಕ್ಷ, ಎಸ್ ದೊಡ್ಡಪುರ ಗ್ರಾಮದಲ್ಲಿ ಎಸ್ಪಿ ಅನುದಾನ 10 ಲಕ್ಷ, ಕೆಂಪನಪುರ ಗ್ರಾಮದಲ್ಲಿ ಎಸ್ ಸಿ ಪಿ ಅನುದಾನ 10 ಲಕ್ಷ, ಮಳೆ ಹಾನಿ ಅನುದಾನ 20 ಲಕ್ಷ, ಬೋಳೇಗೌಡನಹುಂಡಿ ಮಳೆ ಹಾನಿ ಅನುದಾನ 25 ಲಕ್ಷ, ಸಿಎಂ ವಿಶೇಷ ಅನುದಾನ 80 ಲಕ್ಷ, ಉಕ್ಕಲಗೆರೆ ಗ್ರಾಮದಲ್ಲಿ ಎಸ್ ಸಿ ಪಿ ಅನುದಾನ 15 ಲಕ್ಷ, ಮಳೆ ಹಾನಿ ಅನುದಾನ 20 ಲಕ್ಷ ಹಾಗೂ ಬೂದಹಳ್ಳಿ ಗ್ರಾಮದಲ್ಲಿ ಸಿಎಂ ವಿಶೇಷ ಅನುದಾನ 50 ಲಕ್ಷ ರೂಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುನೀಲ್ ಬೋಸ್ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ತಾ.ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಸುನೀಲ್ ಬೋಸ್ ಯುವ ಬ್ರಿಗೇಡ್ ಸಂಚಾಲಕ ಕುಮಾರ್ ರಾಮೇಗೌಡ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷ ಎಂ.ಎನ್.ಕುಮಾರ್, ಸಂಸದರ ಆಪ್ತ ಸಹಾಯಕ ಬಿ.ಬಸವರಾಜು, ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಪ್ರಭಾರ ಇ ಓ ಡಾ.ರಂಗಸ್ವಾಮಿ, ಟಿ ಹೆಚ್ ಒ ಡಾ. ರವಿಕುಮಾರ್ ,ಎ ಇಇಗಳಾದ ಪಿ ಎನ್ ಚರಿತಾ, ಸತೀಶ್ ಚಂದ್ರನ್, ಕೆ.ಶಿವರಾಜು, ಹೆಚ್.ಸಿ.ರತೀಶ್, ವೀರೇಶ್, ಹಿರಿಯ ಜೆ ಇ ದೇವರಾಜು, ಶಿವಸ್ವಾಮಿ, ಎಇ ರಾಘವೇಂದ್ರ, ಗೋವಿಂದರಾಜು, ರಾಜಣ್ಣ, ಪಂಚಲಿಂಗಪ್ಪ, ಕೃಷ್ಣ, ಶಾಂತ, ಶ್ವೇತಾ, ರೂಪ, ಪಿಡಿಓ ಶ್ರೀನಿವಾಸ್, ಆರ್ ಐ ಆನಂದ್, ಕೆಂಪನಪುರ ಗಂಗೇಶ್, ಜೋಗಿ ಮಹದೇವ, ಮುಖಂಡರಾದ ಉಕ್ಕಲಗೆರೆ ಬಸವಣ್ಣ, ಕೆ.ಎನ್.ಕುಮಾರ, ಕೊಣಗಹಳ್ಳಿ ಮಹೇಶ್, ನಾಗರಾಜು ಮಹದೇವಸ್ವಾಮಿ, ಆರ್.ಸೋಮಣ್ಣ, ಕೆ.ಶಂಕರ್, ಬೀರೇಶ್,ಸಿಗೋಡೀಪುರ ಶಿವಮೂರ್ತಿ, ಯಶೋಧ ಶಿವಮೂರ್ತಿ, ರಾಮೇಗೌಡನಪುರ ನಿಂಗರಾಜು, ಕೆಂಪರಾಜು, ಚಿಕ್ಕರಾಚೆಗೌಡ, ಬೋಳೆಗೌಡನ ಹುಂಡಿ ಲಿಂಗರಾಜು,
ಬೋಮ್ಮನಹಳ್ಳಿ ಚಿಕ್ಕಣ್ಣ ಹಾಗೂ ಮುಂತಾದವರು ಹಾಜರಿದ್ದರು

WhatsApp

Join Now

Telegram

Join Now

Instagram

Join Now