ತಾಂಡವಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಗ್ರಾಮ ದೇವತೆ ಅಗ್ನಿ ನೇತ್ರಾಂಬ ಮಾರಮ್ಮನ ಜಾತ್ರೆ

ವಿಜಯ ದರ್ಪಣ ನ್ಯೂಸ್…..

ತಾಂಡವಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಗ್ರಾಮ ದೇವತೆ ಅಗ್ನಿ ನೇತ್ರಾಂಬ ಮಾರಮ್ಮನ ಜಾತ್ರೆ

ತಾಂಡವಪುರ ಜನವರಿ 29 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧಿ ಉಳ್ಳ ಗ್ರಾಮ ದೇವತೆ ಅಗ್ನಿ ನೇತ್ರಾಂಬ ಮಾರಮ್ಮನವರ ಜಾತ್ರೆ ಬಹಳ ವಿಜೃಂಭಣೆಯಿಂದ ಜರುಗಿತು

ಎರಡು ದಿನಗಳ ಕಾಲ ನಡೆದ ಈ ಜಾತ್ರೆಗೆ ತಾಂಡವಪುರ ಸುತ್ತಮುತ್ತಲ ಗ್ರಾಮಗಳ ಭಕ್ತ ಸಾಗರವೇ ಹರಿದು ಬಂದು ದೇವಿಗೆ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

ಈ ಗ್ರಾಮ ದೇವತೆ ಹಬ್ಬವನ್ನು ತಾಂಡವಪುರ ಹಾಗೂ ಬಂಚಳ್ಳಿ ಹುಂಡಿ ಗ್ರಾಮದ ಗ್ರಾಮಸ್ಥರು ಆಚರಿಸಲಾಗುತ್ತಿದ್ದು ಜನವರಿ 27 ರಂದು ಮಂಗಳವಾರ ಕೊಂಡೋತ್ಸವ ಬುಧವಾರ 28ರಂದು ತಂಪಿನ ಪೂಜೆ ನೆರವೇರಿತು ಇತಿಹಾಸ ಪ್ರಸಿದ್ಧಿ ಉಳ್ಳ ಈ ಮಾರಮ್ಮನ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಗೆ ಪೂಜೆ ಸಲ್ಲಿಸಿ ದೇವರ ಕೃಪೆ ಪಡೆದುಕೊಂಡರು.

ಈ ಹಬ್ಬವನ್ನು 2 ಗ್ರಾಮದ ಎಲ್ಲಾ ಕೋಮಿನ ಮುಖಂಡರು ಸೇರಿ ಪ್ರತಿ ವರ್ಷದಂತೆ ಸಂಪ್ರದಾಯ ಪ್ರಕಾರ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಾಂಡವಪುರ ಬಂಚಳ್ಳಿ ಹುಂಡಿ2 ಗ್ರಾಮಗಳ ಮುಖಂಡರುಗಳು ಸುದ್ದಿ ಗಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಗೌಡಿಕೆ ಶಿವಪ್ಪ ಮರಿಗೌಡ ಗುರು ಶಾಂತು ಬಸವರಾಜು ಟಿ ಕೆ ನಾಗೇಶ ಬಿ ಎಂ ನಾಗರಾಜು ಹುಚ್ಚೇಗೌಡ ಚೌಡ ನಾಯಕ ದೇವರಗುಡ್ಡಪ್ಪ ಕೇಶವ ಹಾಗೂ ಅರ್ಚಕರು ತಿಳಿಸಿದರು.

ಇದೆ ವೇಳೆ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿಎಂ ರಾಮು ರವರ ನೇತೃತ್ವದಲ್ಲಿ ಕಾಂಗ್ರೆಸ್ ಯುವ ಮುಖಂಡ ಬಿ ಆರ್ ರಾಕೇಶ್ ರವರು ಎಳನೀರು ಮತ್ತು ಐಸ್ ಕ್ರೀಮ್ ಅನ್ನು ವಿತರಿಸಿ ಉರಿಯುವ ಬಿಸಿಲಿನಲ್ಲಿ ಬರುತ್ತಿದ್ದ ಭಕ್ತಾದಿಗಳಿಗೆ ತಂಪು ಪಾನೀಯ ವಿಚರಿಸಿ ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಪಿ ಎ ಸಿ ಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿ ಎಂ ನಾಗರಾಜು ಹುಚ್ಚೇಗೌಡ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ ಮಹದೇವು ಬಿ ಬಿ ಕುಮಾರ್ ಬಿ ಆರ್ ರಾಕೇಶ್ ಗ್ರಾಮ ಪಂಚಾಯತಿ ಪ್ರಭುಸ್ವಾಮಿ ಮಾಜಿ ಸದಸ್ಯ ಶಿವರಾಜು ಕುಮಾರ ಪುಟ್ಟರಾಜು ರವಿ ಕುಮಾರ ಶಂಕರ ಸೇರದಂತೆ ಮುಂತಾದವರು ಭಾಗಿಯಾಗಿದ್ದರು