ವಿಜಯ ದರ್ಪಣ ನ್ಯೂಸ್…..
ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನಂತು ರವರಿಗೆ ಚಿಕ್ಕಳ್ಳಿಯಲ್ಲಿ ಅದ್ದೂರಿ ಸ್ವಾಗತ

ತಾಂಡವಪುರ ಮಾರ್ಚ್ 17 ಕರ್ನಾಟಕ ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಮೇಯರ್ ಕಾಂಗ್ರೆಸ್ ಮುಖಂಡ ಅನಂತು ಅವರನ್ನು ಮೈಸೂರು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಚಿಕ್ಕಳ್ಳಿ ಗ್ರಾಮದಲ್ಲಿ ಗಾಣಿಗ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.
ಅನಂತ ರವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದು ನನ್ನನ್ನು ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿರುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಆದ ಸಿದ್ದರಾಮಯ್ಯನವರಿಗೆ ಹಾಗೂ ಸರ್ಕಾರಕ್ಕೆ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಸಮಾಜದ ಅಭಿವೃದ್ಧಿಗೆ ಸದಾ ಶ್ರಮವಹಿಸುತ್ತೇನೆ ಎಂದು ಹೇಳಿದರು.
ನಮ್ಮ ಗಾಣಿಗ ಸಮಾಜ ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದು ಸಮಾಜದ ಅಭಿವೃದ್ಧಿಗೋಸ್ಕರ ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಸಮಾಜದ ಎಲ್ಲಾ ಬಡವರಿಗೂ ಸರ್ಕಾರದ ಯೋಜನೆಗಳು ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದು ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಮೈಸೂರು ಜಿಲ್ಲೆಯ ಅಧ್ಯಕ್ಷ ಎನ್ ಸಿ ಉಮೇಶ್ ರವರು ಹಾಗೂ ಕನ್ನಡ ರಾಜ್ಯೋತ್ಸವ ಪುರಸ್ಕೃತ ಮಾರ್ಬಳ್ಳಿ ಮಾದೇವರವರು ಚಿಕ್ಕಳ್ಳಿ ಗ್ರಾಮದ ಯಜಮಾನರುಗಳು ಹಾಗೂ ಕೂಡನಹಳ್ಳಿ, ಯಜಮಾನರಾದ ವೆಂಕಟ ಲಕ್ಷ್ಮಯ್ಯ ಹಾಗೂ ಗಾಣಿಗ ಸಮಾಜದ ಮುಖಂಡ ವರುಣ ಗ್ರಾಮ ಪಂಚಾಯಿತಿ ಸದಸ್ಯ ಚಿಕ್ಕಳ್ಳಿ ವೆಂಕಟೇಶ್ ಹಾಗೂ
ಕಾಂಗ್ರೆಸ್ ಮುಖಂಡರು ಮತ್ತು ಗಾಣಿಗ ಜನಾಂಗದ ಮುಖಂಡರು. ಗ್ರಾಮಸ್ಥರು ಹಾಜರಿದ್ದರು.
&&&&&&&&&&&&&&&&&&&&&&&&&&&&
ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯನವರಿಗೆ ಕೆಂಪಿ ಸಿದ್ದನ ಹುಂಡಿ ಗ್ರಾಮಸ್ಥರ ಮನವಿ

ತಾಂಡವಪುರ ಮಾರ್ಚ್ 17ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯನವರಿಗೆ ಕೆಂಪಿ ಸಿದ್ದನ ಹುಂಡಿ ಗ್ರಾಮಸ್ಥರ ಮನವಿ ಮಾಡಿದರು.
ಅವರು ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿ ಸಿದ್ದನ ಹುಂಡಿಗ್ರಾಮದಲ್ಲಿ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕರ ಒಂದು ಕೊರತೆ ಸಮಸ್ಯೆಗಳ ಆಲಿಕೆ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಆದ ಡಾ. ಯತೀಂದ್ರ ಸಿದ್ದರಾಮಯ್ಯನವರರಲ್ಲಿ ಕೆಂಪಿ ಸಿದ್ದನ ಹುಂಡಿ ಗ್ರಾಮದ ಮುಖಂಡರಾದ ಬೀರಯ್ಯನವರು ನಮ್ಮ ಗ್ರಾಮದಲ್ಲಿ ಸುಮಾರು 100 ರಿಂದ 150ಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ಕೆಲಸವಿಲ್ಲದೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದೆ ಆದ್ದರಿಂದ ತಾವು ನಮ್ಮ ಗ್ರಾಮದ ನಿರುದ್ಯೋಗಿ ಯುವಕರಿಗೆ ಎಲ್ಲಿಯಾದರೂ ಸರಿ ಅವರಿಗೆ ಉದ್ಯೋಗ ದೊರಕಿಸಿ ಕೊಡುವಂತೆ ಮನವಿ ಪತ್ರ ನೀಡುವ ಮೂಲಕ ಮನವಿ ಮಾಡಿದರು
ಮನವಿ ಸ್ವೀಕರಿಸಿ ಮಾತನಾಡಿದ ಡಾ. ಯತೀಂದ್ರ ಸಿದ್ರಾಮಯ್ಯನವರು ಉದ್ಯೋಗ ಸಮಸ್ಯ ಬಗೆಹರಿಸಲು ಉದ್ಯೋಗ ದುರ್ಗಸಿಕೊಡುವ ನಿಟ್ಟಿನಲ್ಲಿ ಸದ್ಯದಲ್ಲೇ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ವರುಣ ಕ್ಷೇತ್ರದ ನಿರುದ್ಯೋಗಿ ಯುವಕರುಗಳಿಗೆ ಹಂತ ಹಂತವಾಗಿ ಉದ್ಯೋಗ ದೊರಕಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೆ ವೇಳೆ ತಾಲೂಕು ಕುರುಬ ಸಂಘದ ಮಾಜಿ ಅಧ್ಯಕ್ಷ ಕೆಂಪಣ್ಣನವರು ಮಾತನಾಡಿ ನಮ್ಮ ಕೆಂಪಿಸಿದ್ರ ಹುಂಡಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರಿಗೆ ನಾವು ಆಭಾರಿಯಾಗಿದ್ದೇವೆ ಅದೇ ರೀತಿ ಗ್ರಾಮದ ಮೂಲಭೂತ ಸೌಲಭ್ಯಗಳಿಗೆ ಹೆಚ್ಚು ಗಮನಹರಿಸಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜೆಗೆ ಇಂದನ್ ಬಾಬು ಮೈಸೂರು ಜಿ. ಪಂ. ಮಾಜಿ ಸದಸ್ಯೆ ರೇವಮ್ಮ ಗ್ರಾ. ಪಂ. ಮಾಜಿ ಅಧ್ಯಕ್ಷರುಗಳಾದ ನಂಜಯ್ಯ ಕೆಎಸ್ ರವಿ ಎನ್ ನಂಜಯ್ಯ ಸಿದ್ದರಾಜು ಕೆ ಸಿದ್ದು ತಾಲೂಕು ಕುರುಬ ಸಂಘದ ಮಾಜಿ ಅಧ್ಯಕ್ಷ ಕೆಂಪಣ್ಣ ಬಗರ್ ಹುಕುಂ ಸಮಿತಿಯ ಸದಸ್ಯ ರಾಜಣ್ಣ ತಾ. ಪಂ. ಮಾಜಿ ಸದಸ್ಯ ಲಕ್ಷ್ಮಿ ಬಿಪಿ ಮಹಾದೇವ ಎಂ ದಕ್ಷಿಣ ಮೂರ್ತಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆಎಸ್ ಮಹದೇವ್ ಮರಳೂರು ದೊರೆಸ್ವಾಮಿ ಹುಳಿಮಾವು ನಟರಾಜು ಕನಕ ನೌಕರ ಸಂಘದ ಮಾಜಿ ಅಧ್ಯಕ್ಷ ಮಹಾದೇವು ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್ ಗಾಯತ್ರಿ ಮಹಾದೇವ್ ಶ್ರುತಿ ಬೀರಯ್ಯ ಸಹಕಾರ ಸಂಘದ ನಿರ್ದೇಶಕರಾದ ಶಿವನಂಜು ಚಿಕ್ಕಮಾದೇಗೌಡ ಕುಮಾರ ಹೆಜ್ಜೆಗೆ ಭಾಸ್ಕರ್ ಪುಟ್ಟಣ್ಣ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಹೆಜ್ಜಿಗೆ ಪ್ರಸನ್ನ ಗೋಪಾಲಕೃಷ್ಣ ರವಿಕುಮಾರ್ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ವಿಜಯಕುಮಾರ್ ಆಪ್ತ ಸಹಾಯಕರಾದ ಶಿವ ಸ್ವಾಮಿ ಪ್ರದೀಪ್ ಕುಮಾರ್ ಮುದ್ದು ಮಾದೇಗೌಡ ನಗರ್ಲೆ ಮನು ಶಿವಮೂರ್ತಿ ಪ್ರಜ್ವಲ್ ಅಡಕನಹಳ್ಳಿ ಮಾದಪ್ಪ ಗ್ಯಾರಂಟಿ ಯೋಜನೆಯ ಸದಸ್ಯ ರವಿ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಧಿಕಾರಿ ಜರಾಲ್ಡ್ ರಾಜೇಶ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಕಾರ್ಯದರ್ಶಿ ಮನ್ನೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು








