--Ads--

ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ನಯನಕುಮಾರ್‌ ಕಾರ್ಯ ಶ್ಲಾಘನೀಯ : ಶಾಸಕ ಜಿ ಟಿ ದೇವೇಗೌಡ

On: April 27, 2026 3:21 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ನಯನಕುಮಾರ್‌ ಕಾರ್ಯ ಶ್ಲಾಘನೀಯ : ಶಾಸಕ ಜಿ ಟಿ ದೇವೇಗೌಡ

ತಾಂಡವಪುರ ಏಪ್ರಿಲ್ 25: ಜೀವನದಲ್ಲಿ ಪ್ರತಿಯೊಬ್ಬರು ಸೇವಾ ಮನೋಭಾವನೆ ಬೆಳೆಸಿಕೊಂಡು, ಬಡ, ಮಧ್ಯಮ ವರ್ಗದ ಜನರಿಗೆ ತಮ್ಮಿಂದಾಗುವ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಕರುನಾಡ ಕಣ್ಮಣಿ, ವರನಟ ಡಾ.ರಾಜ್ ಕುಮಾರ್ ಅವರ ೯೭ನೇ ಜನ್ಮದಿನಾಚರಣೆ ಅಂಗವಾಗಿ, ಮೈಸೂರ್ ತಾಲೂಕು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದದಟ್ಟಗಳ್ಳಿಯಲ್ಲಿರುವ ನಯನಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ರಾಜ್‌ಕುಮಾರ್ ಅವರ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಹೊಂದಿರುವ ಕುಮಾರ್ ಅವರು ಜನಸೇವೆಯಲ್ಲಿ ಎಂದಿಗೂ ಮುಂದು. ಇದೇ ನಿಟ್ಟಿನಲ್ಲಿ ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿ, ಅತಿ ಕಡಿಮೆ ದರದಲ್ಲಿ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಸುಮಾರು ೪ ವರ್ಷದ ಹಿಂದೆ ಲೋಕಾರ್ಪಣೆಗೊಂಡ ಆಸ್ಪತ್ರೆಯಲ್ಲಿ ಸಾಕಷ್ಟು ಜನರಿಗೆ ಉಚಿತ ಚಿಕಿತ್ಸೆಯನ್ನೂ ಒದಗಿಸುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಇಂದು ಡಾ.ರಾಜ್ ಕುಮಾರ್ ಅವರ ೯೭ನೇ ಜನ್ಮದಿನ ಹಾಗೂ ಆಸ್ಪತ್ರೆಯ ೪ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕುಮಾರ್ ಅವರು ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದಾರೆ. ಪ್ರತಿ ವರ್ಷವೂ ಈ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಜೀವನದಲ್ಲಿ ದುಡಿದು ಸಾಕಷ್ಟು ಸಂಪಾದಿಸುವ ಇವರು ವೈದ್ಯಕೀಯ ಕ್ಷೇತ್ರದಲ್ಲಿ ಬಡಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಬೇಕೆಂಬ ಉದ್ದೇಶದಿಂದ ಆಸ್ಪತ್ರೆ ನಿರ್ಮಿಸಿದ್ದಾರೆ. ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನನ್ನನ್ನು ಸೇರಿದಂತೆ ಕೋಟ್ಯಾಂತರ ಜನರಿಗೆ ಮಾದರಿಯಾಗಿದೆ ಎಂದ ಜಿಟಿಡಿ, ಕುಮಾರ್ ಅವರು ಮತ್ತಷ್ಟು ಸೇವೆಯಲ್ಲಿ ತೊಡಗಲಿ ಅವರಿಗೆ ಪ್ರತಿಯೊಬ್ಬರ ಆಶೀರ್ವಾದ, ಹಾರೈಕೆ ಸದಾ ಇರಲಿ ಎಂದರು.

ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಸಂಸ್ಥಾಪಕರಾದ ನಾಡೋಜ ಪ್ರೊ. ಭಾಷ್ಯಂ ಸ್ವಾಮೀಜಿ ಅವರು ಮಾತನಾಡಿ, ವರನಟ ಡಾ. ರಾಜ್ ಕುಮಾರ್ ಕುಟುಂಬ ಹಾಗೂ ಯೋಗಾನರಸಿಂಹಸ್ವಾಮಿ ದೇವಾಲಯಕ್ಕೂ ಅವಿನಾಭವ ಸಂಬಂಧವಿದೆ. ಇಂದು ನಮ್ಮೊಂದಿಗೆ ಅವರು ಇಲ್ಲದಿದ್ದರೂ ಅವರ ಕುಟುಂಬವರ್ಗದವರು ನಿರಂತರ ಸಂಪರ್ಕದಲ್ಲಿರುತ್ತಾರೆ. ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿರುವ ನಯನಕುಮಾರ್ ಅವರು ಒಂದಿಲ್ಲೊಂದು ಸೇವಾ ಕಾರ್ಯಗಳ ಮುಖೇನ ಬಡಜನರಿಗೆ, ಮಧ್ಯಮವರ್ಗದವರಿಗೆ ನೆರವಾಗುತ್ತಿದ್ದಾರೆ ಎಂದರು.

ಅಭಿಮಾನಿಗಳೇ ದೇವರು ಎಂದು ಕರೆಯುತ್ತಿದ್ದ ರಾಜ್ ಕುಮಾರ್ ಅವರ ತತ್ವ, ಆದರ್ಶವನ್ನು ಮೈಗೂಡಿಸಿಕೊಂಡು ಆಸ್ಪತ್ರೆಯನ್ನು ಸಹ ತೆರೆದು, ವೈದ್ಯಕೀಯ ಕ್ಷೇತ್ರದಲ್ಲೂ ಸೇವೆಯನ್ನು ಮುಂದುವರೆಸುತ್ತಿರುವ ನಯನಕುಮಾರ್ ಅವರಿಗೆ ನರಸಿಂಹ ಸ್ವಾಮಿಯ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.

ನಯನಕುಮಾರ್ ಅವರು ಮಾತನಾಡಿ,ಬಡ,ಮಧ್ಯಮ ವರ್ಗದವರ ಆರೋಗ್ಯದ ಕಾಳಜಿಯಿಂದ ೪ವರ್ಷದ ಹಿಂದೆಯೇ ಆಸ್ಪತ್ರೆ ನಿರ್ಮಾಣಗೊಂಡಿದೆ. ಇದುವರೆವಿಗೂ ಸುಮಾರು ೪ ಸಾವಿರಕ್ಕೂ ಅಧಿಕ ಗಂಭೀರ ಶಸ್ತ್ರಚಿಕಿತ್ಸೆ ಸಹ ನಡೆಸಲಾಗಿದೆ. ಅತಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಜನರ ಆರೋಗ್ಯ ಕಾಪಾಡುವ ಕಾಳಜಿ ಯನ್ನು ನಾವು ಹೊಂದಿದ್ದೇವೆ ಎಂದರು.

ನಮ್ಮ ಈ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಲಭ್ಯವಿದೆ ಎಂದ ಕುಮಾರ್ ಅವರು, ಪ್ರತಿಯೊಂದು ಸರ್ಕಾರಿ ಸ್ಕೀಂ, ಇನ್ಸೂರೆನ್ಸ್ ಸೇರಿದಂತೆ ಆಯು ಷ್ಮಾನ್,ಯಶಸ್ವಿನಿ ಎಲ್ಲವನ್ನೂ ಸ್ವೀಕರಿಸುತ್ತೇವೆ ಎಂದರಲ್ಲದೇ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆ ತೆರೆಯಲಾಗಿದ್ದು, ಸಾರ್ವಜನಿಕರು ಇದರ ಸುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಯೋಗಾನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now