--Ads--

2028 ಕ್ಕೆ 58 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಜೆಡಿಎಸ್‌ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರೋದು ನಿಶ್ಚಿತ: ನಿಖಿಲ್ ಕುಮಾರಸ್ವಾಮಿ

On: May 14, 2026 5:47 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

2028 ಕ್ಕೆ 58 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಜೆಡಿಎಸ್‌ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರೋದು ನಿಶ್ಚಿತ: ನಿಖಿಲ್ ಕುಮಾರಸ್ವಾಮಿ

ತಾಂಡವಪುರ ಮೇ 13 2028 ಕ್ಕೆ 58 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಜೆಡಿಎಸ್‌ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರೋದು ನಿಶ್ಚಿತ: ಜೆಡಿಎಸ್ ಪಕ್ಷದ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು

:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್‌ ಸಿಂಗಲ್‌ ಡಿಜಿಟ್‌ಗೆ ಇಳಿಯಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನು ಅವರ ವರುಣ ವಿಧಾನಸಭಾ ಕ್ಷೇತ್ರದಲ್ಲಿಸವಾಲಾಗಿ ಸ್ವೀಕರಿಸಲಾಗಿದ್ದು ಮುಂಬರುವ ಚುನಾವಣೆಯಲ್ಲಿ 58 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಜಯಿಸಿಯೇ ತೀರುತ್ತೇವೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ನೇರ ಸವಾಲು ಹಾಕಿದರು.

ಜೆಡಿಎಸ್‌ ವತಿಯಿಂದ ಬುಧವಾರ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವಮೆಲ್ಲಹಳ್ಳಿ ಬಳಿ ಆಯೋಜಿಸಿದ್ದ ಜನರೊಂದಿಗೆ ಜನತಾ ದಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನಾನಾ ರೀತಿಯ ರಾಜಕೀಯ ಅವಕಾಶಗಳನ್ನು ಮಾಡಿಕೊಟ್ಟ ಜೆಡಿಎಸ್‌ನ ಪರಿಸ್ಥಿತಿಯ ಬಗ್ಗೆ ಸಿದ್ದರಾಮಯ್ಯ ಹೀಯಾಳಿಸಿದ್ದಾರೆ. ಜೆಡಿಎಸ್‌ ಗೆ ದ್ರೋಹ ಮಾಡಿ ಹೋದ ನಾಯಕರು ವಿಧಾನಸೌಧದಲ್ಲಿ ಜೆಡಿಎಸ್‌ನ ಒಟ್ಟು ಸಂಖ್ಯಾ ಬಲದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಈಗ 19 ಕ್ಷೇತ್ರದಲ್ಲಿ ಗೆದ್ದಿದೆ. ಮುಂದಿನ ದಿನಗಳಲ್ಲಿ ಸಿಂಗಲ್‌ ಡಿಜಿಟ್‌ಗೆ ಇಳಿಯಲಿದ್ದಾರೆ ಎಂದು ಟೀಕಿಸಿದ್ದಾರೆ.

ಹಾಗಾಗಿ ಮುಂದಿನ ಚುನಾವಣೆಯಲ್ಲಿ 58 ಕ್ಕೂ ಮೀರಿದ ಸಾಧನೆಯನ್ನು ಜೆಡಿಎಸ್‌ ಮಾಡಿ ತೋರಿಸಲಿದೆ ಎಂದು ಸಿಎಂ ಅವರ ಸ್ವ ಕ್ಷೇತ್ರ ವರುಣಾದಲ್ಲಿಯೇ ಸವಾಲು ಹಾಕುತ್ತಿದ್ದೇನೆ. ಅದನ್ನು ಖಂಡಿತವಾಗಿಯೂ ಸಾಧಿಸಿ ತೋರಿಸುತ್ತೇವೆ ಎಂದರು.

ದಲಿತರ ಹಣ ಗ್ಯಾರಂಟಿಗೆ :
ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ, ಕುರ್ಚಿ ಕದನ ಮತ್ತು ಸುಳ್ಳು ಪ್ರಚಾರದಿಂದ ರಾಜ್ಯದ ವ್ಯವಸ್ಥೆ ಮೂರಾಬಟ್ಟೆಯಾಗಿದೆ. ಕಳೆದ 3 ವರ್ಷಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅಡಿ ದಲಿತ ಅಭಿವೃದ್ಧಿಗೆ ನಿಗದಿಯಾಗಿದ್ದ 29,764 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಅಲ್ಲದೇ ಈ ಅನುದಾನವನ್ನು 190 ಕೋಟಿಯಿಂದ 50 ಕೋಟಿಗೆ ಇಳಿಸಿ, 140 ಕೋಟಿ ಕಡಿತ ಮಾಡಿರುವುದು ದಲಿತರಿಗೆ ಮಾಡಿದ ದ್ರೋಹ ಎಂದು ನಿಖಿಲ್‌ ಟೀಕಿಸಿದರು.

ರೈತ ಆತ್ಮಹತ್ಯೆಯೇ ಸರಕಾರದ ಕೊಡುಗೆ :
ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 2,416 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿಯೇ ಕಳೆದ 2 ವರ್ಷಗಳಲ್ಲಿ 138 ರೈತರು ಬಲಿಯಾಗಿದ್ದಾರೆ. 2026ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿ ಮೀರಲಿದೆ ಎಂದು ಅಂಕಿ-ಅಂಶ ಸಮೇತ ದಾಳಿ ಮಾಡಿದರು. ಅಲ್ಲದೇ ರೈತವಿರೋ ಧೋರಣೆಯ ಕಾಂಗ್ರೆಸ್‌ ಸರಕಾರ ಬೇಕೆ ? ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನ ಮಾಡಿ 25 ಲಕ್ಷ ರೈತ ಕುಟುಂಬಗಳಿಗೆ ನೆರವಾದ ರೈತರ ಕಣ್ಮಣಿ ಕುಮಾರಸ್ವಾಮಿ ಅವರ ಸರಕಾರ ಬೇಕೆ ಎಂಬುದನ್ನು ಜನರು ನಿರ್ಧರಿಸಬೇಕು ಎಂದರು.

ನಿಖಿಲ್‌ ವಾಗ್ದಾಳಿ :
ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ, ನಿಮ್ಮನ್ನು ಚಾಂಪಿಯನ್‌ ಮಾಡಿದ್ದು ಯಾರು ಅಂತ ಮರೆತಿದ್ದೀರಾ? ಇಂದು ದಾಖಲೆ ಬಜೆಟ್‌ ಮಂಡಿಸಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳುವುದಕ್ಕೆ ಕಾರಣರು ಯಾರು ಎಂದು ನೆನಪಿಸಿಕೊಳ್ಳಬೇಕು. ಸಿದ್ದರಾಮಯ್ಯ ಅವರ ಸರಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ವರೆಗೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಜನರ ಮೇಲೆ ಅತಿ ಹೆಚ್ಚು ಸಾಲ ಹೊರೆಸಿದ ಸಿಎಂ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವರುಣ ಕ್ಷೇತ್ರ ಮುಖಂಡ ಅಭಿಷೇಕ್‌ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ವಿಧಾನಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ, ವರುಣ ಕ್ಷೇತ್ರ ಮುಖಂಡ ಅಭಿಷೇಕ್‌ , ಮಾಜಿ ಶಾಸಕರಾದ ಅಶ್ವಿನ್‌ ಕುಮಾರ್‌, ಕೆ.ಮಹದೇವ್‌, ಜೆಡಿಎಸ್‌ ನಗರಾಧ್ಯಕ್ಷ ಎಸ್‌.ಬಿ.ಎಂ. ಮಂಜು, ಮಾಜಿ ಮೇಯರ್‌ ಎಂ.ಜೆ. ರವಿಕುಮಾರ್‌, ಮೈಮುಲ್‌ ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್‌, ಪ್ರೊಫೆಸರ್ ಬುಕ್ಕ ಹಳ್ಳಿ ಸುಬ್ಬಪ್ಪ ಮುಖಂಡರಾದ ಬೆಳಚಾಡಿ ಶಿವಮೂರ್ತಿ, ಕೃಷ್ಣನಾಯಕ್‌ ಹಾಗೂ ಇತರರು ಇದ್ದರು.

ಭರ್ಜರಿ ಸ್ವಾಗತ :
ವರುಣ ಕ್ಷೇತ್ರದ ಕಾರ್ಯಕ್ರಮಕ್ಕೆ ಆಗಮಿಸಿದ ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಭುಗತಗಳ್ಳಿ ಬಳಿ ಜೆಡಿಎಸ್‌ ಮುಖಂಡರು, ಕಾರ್ಯರ್ತರೆಲ್ಲರೂ ಸೇರಿ ನಾಲ್ಕು ಟ್ರ್ಯಾಕ್ಟರ್‌ನಲ್ಲಿ ಪುಷ್ಪ ಮಳೆ ಸುರಿಸುವ ಮೂಲಕ ಅದ್ದೂರಿ ಸ್ವಾಗತ ಮಾಡಿದರು.

ಬೃಹತ್‌ಗಾತ್ರದ ಸೇಬಿನ ಹಾರ :
ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಜೆಡಿಎಸ್‌ ಪರ ಹಾಗೂ ಪಕ್ಷದ ಹಿರಿಯ ಮುಖಂಡರು ಹಾಗೂ ನಿಖಿಲ್‌ ಕುಮಾರಸ್ವಾಮಿ ಅವರ ಪರವಾಗಿ ಘೋಷಣೆ ಕೂಗಿದರು. ಅಲ್ಲದೇ ಅಭಿಮಾನಿಗಳು, ಕಾರ್ಯಕರ್ತರು ಮುಖಂಡರೆಲ್ಲರೂ ಸೇರಿಕೊಂಡು ನೆಚ್ಚಿನ ನಾಯಕನಿಗೆ ಬೃಹತ್‌ ಪ್ರಮಾಣದ ಸೇಬಿನ ಹಾರವನ್ನು ಇಟಾಚಿ ಸಹಾಯದಿಂದ ಹಾಕಿ ಸಂಭ್ರಮಿಸಿದರು.

ಗ್ಯಾರಂಟಿ ಹಣ 36 ತಿಂಗಳಿಗೆ ಒಬ್ಬರಿಗೆ 72. ಸಾವಿರ ರೂ. ಆಗುತ್ತದೆ. ಈ ರೀತಿ ಹಣ ನೀಡುತ್ತಿರುವುದರಿಂದ ಸಾಲದ ಹೊತೆ ಹೆಚ್ಚಾಗಿದ್ದು ಪರಿಣಾಮವಾಗಿ ಪ್ರತಿಯೊಬ್ಬ ನಾಗಕರಿಕನ ಮೇಲೆ 1.17 ಲಕ್ಷ ಸಾಲ ಹೊರಿಸಿದ್ದಾರೆ. ಅಲ್ಪ ಹಣ ಕೊಟ್ಟು ನಾಲ್ಕು ಸಾಲ ಹೊರಿಸಿರುವುದು ಸರಿಯೇ ನೀವೇ ತೀರ್ಮಾನಿಸಿ.

ಮಾಜಿ ಸಚಿವ ಸಾರಾ ಮಹೇಶ್ ಮಾತನಾಡಿ
ಜೆಡಿಎಸ್‌ ನಿರ್ನಾಮವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಈ ಕಾರ್ಯಕ್ರಮ ಮುಂದಿನ ದಿನ ಜೆಡಿಎಸ್‌ ಬಿಜೆಪಿ ಸಮ್ಮಿಶ್ರವಾಗಿ ಅ ಕಾರ ಹಿಡಿಯುತ್ತದೆ ಎಂಬ ಸಂದೇಶ ಸಾರಿದೆ. ರೈತರು ಏಳಿಗೆಯಾಗಬೇಕಾದರೆ ಕು. ಸಿಎಂ ಆಗಬೇಕು.
-ಜಿ.ಡಿ. ಹರೀಶ್‌ಗೌಡ, ಶಾಸಕ

WhatsApp

Join Now

Telegram

Join Now

Instagram

Join Now