ವಿಜಯ ದರ್ಪಣ ನ್ಯೂಸ್….
ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚು ಅನುದಾನ ತಂದು ಅಭಿವೃದ್ಧಿಪಡಿಸಲು ಕ್ರಮ ವಹಿಸುತ್ತೇನೆ :ಸಂಸದ ಸುನೀಲ್ ಬೋಸ್

ತಾಂಡವಪುರ ಮೇ 19 ನನ್ನ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ- ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ದಕ್ಷಿಣ ಕಾಶಿ ನಂಜನಗೂಡು ವಿಧಾನ ಸಭಾ ಕ್ಷೇತ್ರದ. ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಾಣ ಕಾಮಗಾರಿಗಳಾದ ಕೊತ್ತನಹಳ್ಳಿ ಕಾಲೋನಿ 60 ಲಕ್ಷ ವೆಂಕಟಗಿರಿ ಕಾಲೋನಿಯಲ್ಲಿ 60 ಲಕ್ಷ ವಿವಿದೋಶ ಕೇಂದ್ರ,ಚಿಲಕಳ್ಳಿ ಗ್ರಾಮದಲ್ಲಿ 10 ರೂ ವೆಚ್ಚದ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಚಿಲಕಳ್ಳಿ ಕಾಲೋನಿಯಲ್ಲಿ ವಿವಿದೋಶ ಕೇಂದ್ರ,ಹುರ ಗ್ರಾಮದಲ್ಲಿ 15 ಲಕ್ಷ ರೂ ವೆಚ್ಚದ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದ ಸುನಿಲ್ ಬೋಸ್ ರವರು ನಮ್ಮ ರಾಜ್ಯ ಸರ್ಕಾರ ಗ್ಯಾರಂಟಿ ಜೊತೆಗೆ ರಾಜ್ಯದಲ್ಲಿ ಅಭಿವೃದ್ಧಿಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಈಹಾಡಿ ಜನರು ಅರ್ಥಿಕವಾಗಿ ಬೆಳೆಯಲು ಇಂತಹ ಕೇಂದ್ರ ಬಹಳ ಮುಖ್ಯವಾಗಿದೆ ಆದ್ದರಿಂದ ಅವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಹಾಡಿ ಜನರು ವಿವಿಧದೋಶ ಕೇಂದ್ರವನ್ನು ಸದ್ದುಪಯೋಗ ಪಡಿಸಿಕೊಳ್ಳಬೇಕು.ಪ್ರತಿ ಗ್ರಾಮದಲ್ಲೂ ಸಮುದಾಯ ಭವನಗಳನ್ನು ನಿರ್ಮಿಸಿ ಬಡ ಜನರ ಮದುವೆ ಹಾಗೂ ಶುಭ ಸಮಾರಂಭಗಳಿಗೆ ಉಪಯೋಗಿಸಿಕೊಳ್ಳಬೇಕು ,ಡಾ ಅಂಬೇಡ್ಕರ್ ಅವರ ಆಸೆಯೆಂತೆ ಪ್ರತಿಯೊಬ್ಬರು ಶಿಕ್ಷಣ ಕಲಿಯಬೇಕು ಮಕ್ಕಳಿಗೆ ಆಸ್ತಿಗಿಂತ ವಿಧ್ಯಾಭ್ಯಾಸ ಕೊಡಿಸಿದರೆ ಅವರು ದೇಶದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ.ಆದ್ದರಿಂದ ನನ್ನ ಸಂಸದರ ನಿಧಿಯಿಂದ ಪ್ರತಿ ಗ್ರಾಮಗಳಿಗೆ ಶಾಲಾ ಕೊಠಡಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆನೆ ನಾನು ಈ ಕ್ಷೇತ್ರದ ಮಗನಾಗಿ ಕೆಲಸ ಮಾಡುತ್ತಿದ್ದೆನೆ ನಮ್ಮ ತಂದೆ ಅವರು ಲೋಕೋಪಯೋಗಿ ಸಚಿವರಾಗಿದ್ದಾರೆ ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿ ಪಡಿಸಿದ್ದಾರೆ ರಸ್ತೆಗಳ ಸರದಾರ ಎಂದೇ ಹೆಸರು ಪಡೆದಿರುವ ನನ್ನ ತಂದೆ ಈಗಾಗಲೇ ಈ ಕ್ಷೇತ್ರದ ಅಭಿವೃದ್ಧಿ ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪನೆ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜೆಗೆ ಇಂದನ್ ಬಾಬು ಮುಖಂಡರಾದ ಬುಲೆಟ್ ಮಹಾದೇವಪ್ಪ ತಾಲೂಕು ಕುರುಬ ಸಮಾಜದ ಮುಖಂಡ ಕೆಂಪಣ್ಣ, ಲಕ್ಷ್ಮಿಕಾಂತ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ್ ರಾಜು ಮಹದೇವಪ್ಪ,ನಟರಾಜ್ ,ತರಗನಹಳ್ಳಿ ನಂಜುಂಡಸ್ವಾಮಿ,ಗೋವಿಂದರಾಜು, ಸಂಜಯ್ ಕುಮಾರ್, ಸುಬ್ರಹ್ಮಣ್ಯ,ಟಿ ಗಿರೀಶ್, , ಕೊಸಪ್ಪ,ಎಂ ಶಿವಣ್ಣ,ಮಹೇಶ್, ಕಂದೇಗಾಲ ಬಸವರಾಜ್, ರುದ್ರಸ್ವಾಮಿ,ಮಲ್ಲಿಕಾರ್ಜುನ,ಇಂಜಿನಿಯರ್ ಯಶವಂತ್ ಸೇರಿದಂತೆ ಪ್ರಮುಖರು ಹಾಜರಿದ್ದರು









