--Ads--

ಪುರಾತನ ಕಾಲದ ಹಸ್ತಪ್ರತಿ, ಶಾಸನಗಳ ಸಂಗ್ರಹ ಇದ್ದಲ್ಲಿ ಮಾಹಿತಿ ನೀಡಿ:ಎಡಿಸಿ ಸೈಯಿದಾ ಆಯಿಷಾ

On: May 18, 2026 4:59 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತ ಪ್ರತಿಗಳ ಸಮೀಕ್ಷಾ ಕಾರ್ಯಕ್ಕೆ ಎಡಿಸಿ ಚಾಲನೆ

ಪುರಾತನ ಕಾಲದ ಹಸ್ತಪ್ರತಿ, ಶಾಸನಗಳ ಸಂಗ್ರಹ ಇದ್ದಲ್ಲಿ ಮಾಹಿತಿ ನೀಡಿ:ಎಡಿಸಿ ಸೈಯಿದಾ ಆಯಿಷಾ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  ಮೇ 18 :

ಜಿಲ್ಲೆಯಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು, ಶಾಸನಗಳು ಹಾಗೂ ದಾಖಲೆಗಳ ಸಂಗ್ರಹವಿದ್ದಲ್ಲಿ ಮಾಹಿತಿ ನೀಡಿ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜ್ಞಾನ ಭಾರತ ಮಿಷನ್ ಯೋಜನೆಯಡಿ ರಾಷ್ಟ್ರೀಯ ಹಸ್ತ ಪ್ರತಿ ಸಮೀಕ್ಷಾ ಕಾರ್ಯಕ್ಕೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಾಚೀನ ಕಾಲದ ಶಾಸನಗಳು, ಹಸ್ತ ಪ್ರತಿಗಳು, ಕೈಬರಹಗಳನ್ನು ತಂತ್ರಜ್ಞಾನ ಮೂಲಕ ಶಾಶ್ವತವಾಗಿ ಉಳಿಸಲು ಅತ್ಯಂತ ಪುರಾತನ, ಹಳೆಯ ದಾಖಲೆಗಳ ಸಮೀಕ್ಷೆ, ಸಂರಕ್ಷಣೆ, ರಕ್ಷಣೆ ಡಿಜಟಲೀಕರಣಗೊಳಿಸಲು ಸರ್ಕಾರವು ಜ್ಞಾನ ಭಾರತಂ ಮಿಷನ್ ಯೋಜನೆ ಜಾರಿಗೆ ತಂದಿದೆ.

ರಾಷ್ಟ್ರ, ರಾಜ್ಯ, ಕರ್ನಾಟಕದ ಸೀಮಂತ ಸಂಸ್ಕೃತ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆ ಮೂಲಕ ಸಾರ್ವಜನಿಕ ಪ್ರವೇಶವನ್ನು ಒದಗಿಸಿ ಭವಿಷ್ಯದ ಪೀಳಿಗೆಗೆ ಅವುಗಳ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ಬಳಕೆಗೆ ಹಸ್ತ ಪ್ರತಿಗಳ ಸಂರಕ್ಷಣೆ ಹಾಗೂ ಡಿಜಟಲೀಕರಣಗೊಳಿಸಲಾಗುತ್ತಿದೆ.

ಜಿಲ್ಲೆಯಾದ್ಯಂತ ಗ್ರಂಥಾಲಯಗಳು, ದೇವಾಲಯಗಳು, ಮಠಗಳು, ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಪ್ರಾಚೀನ ಸಂಸ್ಥಾನಗಳು, ಪ್ರಾಚೀನ ಮನೆತನಗಳಲ್ಲಿ ಪುರಾತನ ಕಾಲದ ಅಪರೂಪದ ಹಸ್ತ ಪ್ರತಿ, ದಾಖಲೆಗಳ ಸಂಗ್ರಹ ಇರಬಹುದು. ಅವುಗಳ ಬಗ್ಗೆ ಇತಿಹಾಸಕಾರರು, ಸಂಶೋಧಕರು, ಸಾರ್ವಜನಿಕರು ಮಾಹಿತಿ ನೀಡಿ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.

ಸಾರ್ವಜನಿಕರು ಹಸ್ತಪ್ರತಿಗಳ ಬಗ್ಗೆ ಮಾಹಿತಿ ನೀಡುವುದರಿಂದ ಸರ್ಕಾರ ಅವುಗಳನ್ನು ವಶಪಡಿಸಿಕೊಳ್ಳಲಿದೆ, ಸಮಸ್ಯೆ ಆಗುತ್ತದೆ ಎಂಬ ಆತಂಕ, ಗೊಂದಲ ಬೇಡ. ಮಾಲಿಕರ ಅನುಮತಿಯೊಂದಿಗೆ ಅವುಗಳ ಡಿಜಿಟಲೀಕರಣಗೊಳಿಸಿ ಮೂಲ ಪ್ರತಿ ಅವರ ಬಳಿಯೇ ಉಳಿಸಲಾಗುವುದು ಎಂದರು.

ಮಾಹಿತಿ ಎಲ್ಲಿ ನೀಡಬೇಕು
ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ನಂ.9, ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110, ದೂ.ಸಂ 080-22040633 ಇ-ಮೇಲ್-adtourismblrr@gmail.com ಸಂಪರ್ಕಿಸಿ.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಹಾಗು ಸದಸ್ಯ ಕಾರ್ಯದರ್ಶಿ ಪ್ರೀತಿ, ಸಮಿತಿ ಸದಸ್ಯರಾದ ವಿನಾಯಕ್ ನ್ಯಾಮಣ್ಣನವರ್, ಡಾ. ಪ್ರಭುಸ್ವಾಮಿ, ವಿದ್ವಾನ್ ಅಭಿಲಾಷ, ವಿದ್ವಾನ್ ಡಾ ನಾಗೇಂದ್ರ, ಇತರೆ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now