--Ads--

ಪ್ರತಿಯೊಂದು ಜೀವರಾಶಿಗಳಲ್ಲಿ ದೇವರನ್ನು ಕಾಣಬಹುದು: ಶ್ರೀ ಶ್ರೀ ಮಂಜುನಾಥ ಮಹಾರಾಜ್ ಸ್ವಾಮಿ

On: June 29, 2026 2:09 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪ್ರತಿಯೊಂದು ಜೀವರಾಶಿಗಳಲ್ಲಿ ದೇವರನ್ನು ಕಾಣಬಹುದು: ಶ್ರೀ ಶ್ರೀ ಮಂಜುನಾಥ ಮಹಾರಾಜ್ ಸ್ವಾಮಿ

ವಿಜಯಪುರ: ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಶ್ರೀರಂಗ ಕ್ಷೇತ್ರ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಸತ್ಸಂಗ ಯತೀಂದ್ರ ಸೇವಾ ಟ್ರಸ್ಟ್ ಸಹಕಾರದೊಂದಿಗೆ ಶ್ರೀರಂಗ ಗೀತಾ ಸತ್ಸಂಗ ಸೇವಾ ಬಳಗ ವತಿಯಿಂದ ನಾಲ್ಕನೆಯ ಕಾರ್ಯಕ್ರಮ ಹಾಗೂ ಶ್ರೀ ಕೈವಾರ ತಾತಯ್ಯನವರ 29ನೆಯ ಪಾದಕ ಪೂಜೆಯಲ್ಲಿ ಶ್ರೀ ಕ್ಷೇತ್ರ *ಕೈವಾರ ನಾರೇಯಣ ಯತೀಂದ್ರರ ಧರ್ಮ ಪ್ರಚಾರಕರಾದ ಶ್ರೀ ಆನಂದ ಗುರೂಜಿ ರವರು ಗುರುದೇವ ದತ್ತ ಅವಧೂತ ಸ್ವರೂಪ* ಬಗ್ಗೆ ಮಾತನಾಡುತ್ತಾ ಹಿಂದಿನ ಮಾಸದಲ್ಲಿ ‌ ಮಾನಸಿಕ ಪೂಜೆಯ ನಂತರ ಆತ್ಮವನ್ನು ಪೂಜೆ ಮಾಡಬೇಕು ಎಂದು ತಿಳಿಸುತ್ತಾ ಆತ್ಮಸಾಕ್ಷಾತ್ಕಾರ ಎಂದರೆ ದೇಹ ಮತ್ತು ಮನಸ್ಸನ್ನು ಮೀರಿದ ಶುದ್ಧ ಪ್ರಜ್ಞೆಯಾಗಿ ನಮ್ಮ ನಿಜವಾದ ಸ್ವರೂಪದ ಸಾಕ್ಷಾತ್ಕಾರ, ಕೇವಲ ಭೌತಿಕ ಸ್ವಯಂ ಅಥವಾ ಮಾನಸಿಕ ಸ್ವಯಂ ವರ್ಧನೆಯಲ್ಲ. ಯೋಗ-ವೇದಾಂತ ಸಂಪ್ರದಾಯಗಳಲ್ಲಿ ಇದು ಅದರ ಅರ್ಥವಾಗಿದೆ.
ನಮ್ಮ ನಿಜವಾದ ಆತ್ಮವನ್ನು ತಿಳಿದುಕೊಳ್ಳುವುದು ಅತ್ಯಗತ್ಯ,

ಅದು ಎಲ್ಲಾ ಜೀವಿಗಳಲ್ಲಿಯೂ ಇರುವ ಮತ್ತು ಇಡೀ ವಿಶ್ವವನ್ನು ವ್ಯಾಪಿಸಿರುವ ಒಂದೇ ಆತ್ಮ. ಇದು ಯೋಗ ಮತ್ತು ವೇದಾಂತದ ಅತ್ಯುನ್ನತ ಬೋಧನೆಯಾಗಿದೆ, ಇದು ಅದ್ವೈತ ಅಥವಾ ಅದ್ವೈತದ ಅಂತಿಮ ಸ್ಥಿತಿ. ಎಂದು ತಿಳಿಸಿದರು.

ಶ್ರೀ ದ್ರೌಪದಿ ಆದಿಪರಾ ಶಕ್ತಿ ಮಹಾಸಂಸ್ಥಾನ ಬುಳ್ಳಹಳ್ಳಿ ಮಠ ಪೀಠಾಧ್ಯಕ್ಷರಾದ ಶ್ರೀ ಶ್ರೀ ಬಾಲ ಯೋಗಿ ಸಾಯಿ ಮಂಜುನಾಥ ಮಹಾರಾಜ್ ಶ್ರೀಗಳು ಆಶೀರ್ವಚನ ನೀಡುತ್ತಾ ಎಲ್ಲಾ ಯುಗದಲ್ಲೂ ಶ್ರೀ ಕೃಷ್ಣ ಪರಮಾತ್ಮ ನೆಂದು ಭಾವಿಸುತ್ತಾ ಕೈವಾರ ಕ್ಷೇತ್ರವು ಗುಹೆಯಲ್ಲಿ ನಾನು ಸಹ ತಪಸ್ಸು ಮಾಡಿದೆ. ಪ್ರತಿನಿತ್ಯವೂ ಸಂಗೀತ ನಡೆಯುತ್ತಿರುವ ಕ್ಷೇತ್ರವೆಂದರೆ ಕೈವಾರ.
ಹರಿಹರ ವಾಸಿಸುವ ಕ್ಷೇತ್ರವಾಗಿದೆ. ಭಕ್ತಿಯಿಂದ ಪೂಜೆ ಮಾಡಿದರೆ ಹೂವಿನಲ್ಲೂ ಕಲ್ಲಿನಲ್ಲೂ ದೇವರನ್ನು ಕಾಣಬಹುದೆಂದು ತಿಳಿಸಿದರು.

ಕೈವಾರ ತಾತಯ್ಯನವರ ಪಾದುಕೆ ಪೂಜೆಯಲ್ಲಿ ಭಾಗವಹಿಸಿದರೆ ನಿಮ್ಮ ಕಷ್ಟಕಾರ್ಪಣೆಗಳು ದೂರವಾಗುತ್ತದೆ ಎಂದು ತಿಳಿಸಿದರು

ಮುಖ್ಯಅತಿಥಿಗಳಾಗಿ ಕೈವಾರ ಕ್ಷೇತ್ರದ ವ್ಯವಸ್ಥಾಪಕ  ಲಕ್ಷ್ಮಿ ನಾರಾಯಣಪ್ಪ ಪುರಸಭಾ ಮಾಜಿ ಸದಸ್ಯ ಜಿಎಂ ಚಂದ್ರ ಶೇಖರ್ , ಸಮಾಜ ಸೇವಕರಾದ ಎಂ ಕೇಶವಪ್ಪ. ಆಂಜನಪ್ಪ ರಘು ಸ್ವಾಮಿಗಳು ಸಿ. ಆರ್. ಸೀತಾರಾಮಯ್ಯ ರತ್ನಮ್ಮ ರಾಮದಾಸ್ ಅನಿತಾ ವಿಎನ್ ವೆಂಕಟೇಶ್ ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಎಂ ವಿ ನಾಯ್ಡು ಮತ್ತು ಮುನಿರಾಜು ರವರ ವಾದ್ಯಗೋಷ್ಠಿ ಯೊಂದಿಗೆ ನಾಗರತ್ನ ಮುನಿರಾಜು ಮತ್ತು ಸಂಗಡಿಗರು ಶ್ರೀ ರಾಮ ನಾಮ ಸ್ಮರಣೆ ಮಾಡಿದರು.
.

WhatsApp

Join Now

Telegram

Join Now

Instagram

Join Now