--Ads--

ಪೋಷಕರ ಹೃದಯವಿದ್ರಾವಕ ಮನವಿ, ದಯವಿಟ್ಟು ಕೇಳಿಸಿಕೊಳ್ಳಿ……

On: July 5, 2026 3:08 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪೋಷಕರ ಹೃದಯವಿದ್ರಾವಕ ಮನವಿ, ದಯವಿಟ್ಟು ಕೇಳಿಸಿಕೊಳ್ಳಿ……

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅತ್ಯಂತ ಭೀಕರ ಚಾಕು ಇರಿತದ ಅಪರಾಧ ಪ್ರಕರಣಗಳನ್ನು ನೋಡಿದ ಮೂವರು ಮಕ್ಕಳ ತಂದೆ ತಾಯಿಯು ತೀರ ಆತಂಕಗೊಳ್ಳುತ್ತಾರೆ, ಭಯಪಡುತ್ತಾರೆ……

ಮೊಬೈಲ್ ಉಪಯೋಗಿಸಲು ಕೊಡಲಿಲ್ಲವೆಂದು ಮಗನೊಬ್ಬ ತಂದೆಯನ್ನೇ ಕೊಲ್ಲುತ್ತಾನೆ. ಆಸ್ತಿಯಲ್ಲಿ ಸರಿಯಾಗಿ ಭಾಗ ಕೊಡಲಿಲ್ಲವೆಂದು ಮಗನೊಬ್ಬ ಇಡೀ ಕುಟುಂಬವನ್ನೇ ಸರ್ವನಾಶ ಮಾಡುತ್ತಾನೆ. ಪ್ರೀತಿಸಿದವನೊಂದಿಗೆ ಮದುವೆ ಆಗಲು ಒಪ್ಪಿಗೆ ಕೊಡಲಿಲ್ಲವೆಂದು ಮಗಳೇ ತಂದೆ ತಾಯಿಯನ್ನು ಚುಚ್ಚಿ ಕೊಳ್ಳುತ್ತಾಳೆ. ಇನ್ನೊಂದೆಡೆ ಯಾವುದೋ ಕಾರಣಕ್ಕಾಗಿ ತನ್ನ ತಂದೆಯ ಎರಡು ಕಣ್ಣುಗಳನ್ನು ಕಿತ್ತ ಘಟನೆಯು ಟಿವಿಯಲ್ಲಿ ವರದಿಯಾಗಿತ್ತು.

ಹೀಗೆ ಅನೇಕ ಘಟನೆಗಳನ್ನು ನೋಡಿದ ಆ ಪೋಷಕರು ತುಂಬಾ ಗಾಬರಿಯಾಗಿ ಆ ಮೂವರು ವಯಸ್ಕ ಮಕ್ಕಳನ್ನು ಒಂದು ಕಡೆ ಸೇರಿಸಿ ಅವರಿಗೆ ಈ ರೀತಿ ಭಿನ್ನವಿಸಿಕೊಳ್ಳುತ್ತಾರೆ.

” ಮಕ್ಕಳೇ ಇತ್ತೀಚೆಗೆ ಇಡೀ ಸಮಾಜದಲ್ಲಿ ಅನೇಕ ಅಹಿತಕರ ಹಿಂಸಾಕೃತ್ಯದ ಘಟನೆಗಳು ನಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ಮಕ್ಕಳು ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸುವುದು, ವೃದ್ಧಾಶ್ರಮಕ್ಕೆ ಸೇರಿಸುವುದು, ಮನೆಯಿಂದ ಹೊರ ಹಾಕುವುದು, ಈಗ ಮತ್ತೂ ಮುಂದುವರೆದು ತಾವು ಕೇಳಿದ ವಸ್ತುಗಳನ್ನು ಕೊಡಿಸದಿದ್ದರೆ ಅಥವಾ ತಮ್ಮ ಬೇಡಿಕೆಯನ್ನು ಪೂರೈಸದಿದ್ದರೆ ತಂದೆ – ತಾಯಿಗಳನ್ನು ಚಾಕುವಿನಿಂದ ಇರಿದು ಕೊಲ್ಲುವ ಅನೇಕ ಘಟನೆಗಳು ನಡೆಯುತ್ತಿದೆ.

ನಮಗೆ ಗೊತ್ತಿಲ್ಲ, ಮುಂದೆ ನೀವುಗಳು ಸಹ ನಮ್ಮ ಬಳಿ ನಿಮ್ಮ ಕೆಲವು ಬೇಡಿಕೆಗಳನ್ನು ಇಡಬಹುದು. ಅದರಲ್ಲಿ ನಮ್ಮ ಕೈಲಾದ ಕೆಲವು ಬೇಡಿಕೆಗಳನ್ನು ಪೂರೈಸುತ್ತೇವೆ. ಆದರೆ ಅದನ್ನು ಮೀರಿ ನೀವು ನಮ್ಮನ್ನು ಪೀಡಿಸಿದರೆ ಅದು ನಮ್ಮಿಂದ ಸಾಧ್ಯವಾಗುವುದಿಲ್ಲ. ಆಗ ನಿಮಗೆ ನಮ್ಮ ಮೇಲೆ ಕೋಪ ಬರಬಹುದು. ಎಂದಿನಂತೆ ಈ ಸಮಾಜದಲ್ಲಿ ನಡೆಯುತ್ತಿರುವ ಹಲವು ಘಟನೆಗಳ ರೀತಿ ನೀವು ಸಹ ನಮ್ಮನ್ನು ಕೊಲ್ಲಲು ಯೋಚಿಸಬಹುದು. ಸಂಚು ಹೂಡಬಹುದು. ಆದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ನಾವು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇವೆ. ನೀವು ಆ ರೀತಿ ಮಾಡುವುದಿಲ್ಲ, ಆ ನಂಬಿಕೆ ನಮಗಿದೆ. ಆದರೂ ಒಂದು ವೇಳೆ ನಿಮ್ಮಲ್ಲಿ ಯಾರಾದರೂ ಆ ರೀತಿ ನಮ್ಮನ್ನು ಕೊಲ್ಲುವ ಮನಸ್ಥಿತಿ ಉಂಟಾದರೆ ದಯವಿಟ್ಟು ಕೊಲ್ಲಿ. ಅದು ನಿಮ್ಮ ಆಯ್ಕೆಗೆ ಬಿಟ್ಟದ್ದು. ಆದರೆ ಕೊಲ್ಲುವಾಗ ಚಾಕುವಿನಿಂದ ಇರಿಯುವುದು, ರಾಡ್ ನಿಂದ ಹೊಡೆಯುವುದು ಮಾಡಬೇಡಿ. ನಮಗೆ ತುಂಬಾ ನೋವಾಗುತ್ತದೆ. ದಯವಿಟ್ಟು ಏನಾದರೂ ನೋವಿಲ್ಲದ ಸಾವಿನ ಉಪಾಯವನ್ನು ಹುಡುಕಿ ನಮ್ಮನ್ನು ಇಲ್ಲವಾಗಿಸಿ. ಏಕೆಂದರೆ ನೀವು ನಮ್ಮ ಮಕ್ಕಳು ನಿಮ್ಮನ್ನು ನಾವು ಶಿಕ್ಷಿಸುವುದಿಲ್ಲ ನಿಮ್ಮನ್ನು ಕ್ಷಮಿಸುತ್ತೇವೆ, ಪೊಲೀಸರಿಗೂ ನಿಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಬರೆದುಕೊಡುತ್ತೇವೆ….”

ಎಂದು ಕೈ ಮುಗಿದು ಕೇಳಿಕೊಳ್ಳುತ್ತಾರೆ. ಇದನ್ನು ಕೇಳಿದ ಮೂವರು ಮಕ್ಕಳು ತುಂಬಾ ಭಾವುಕರಾಗಿ ಕಣ್ಣೀರು ಸುರಿಸುತ್ತಾ ತಂದೆ ತಾಯಿಯನ್ನು ತಬ್ಬಿಕೊಳ್ಳುತ್ತಾರೆ. ಎಂದೆಂದಿಗೂ ಆ ರೀತಿ ಮಾಡುವುದಿಲ್ಲ ಎಂದು ಪರಿಪರಿಯಾಗಿ ಹೇಳುತ್ತಾರೆ…..

ಈ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಸಮಾಜ ಹಿಂಸಾತ್ಮಕ ಮನಸ್ಥಿತಿಯತ್ತ ಸಾಗುತ್ತಿದೆ. ಧ್ಯಾನಸ್ಥ ಮನಸ್ಥಿತಿ ಎಂಬುದೇ ಗಗನಕುಸುಮವಾಗಿದೆ. ಸ್ಪರ್ಧೆ, ವೇಗ ಹಣ ಕೇಂದ್ರೀಕೃತ ಸಮಾಜ ಮನುಷ್ಯನ ಯೋಚನಾ ಶಕ್ತಿಯನ್ನೇ ಬದಲಾಯಿಸಿದೆ. ಅದು ಕ್ರೌರ್ಯದ ಹಾದಿಯಲ್ಲಿ ಸಾಗುತ್ತಿದೆ. ಭವಿಷ್ಯವನ್ನು ಯೋಚಿಸಿ, ಸಮಾಜವನ್ನು ಪುನರ್ ರೂಪಿಸಬೇಕಾದ ಜವಾಬ್ದಾರಿ ನಮಗಿದೆ ಉಳಿದದ್ದು ಅವರವರ ವಿವೇಚನೆಗೆ ಬಿಡುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now