ವಿಜಯ ದರ್ಪಣ ನ್ಯೂಸ್….
ವಿದ್ಯಾರ್ಥಿಗಳು ದೇಶಕ್ಕೆ ಪ್ರಾಣತ್ಯಾಗ ಮಾಡಿದ ಮಹಾತ್ಮರನ್ನು ಸ್ಮರಿಸಿಕೊಂಡು ದೇಶ ಅಭಿಮಾನ ಬೆಳೆಸಿಕೊಳ್ಳಿ :ಬಿ ನಾಗರಾಜು

ತಾಂಡವಪುರ ಆಗಸ್ಟ್ 15 :
ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಮಹಾತ್ಮರನ್ನು ಸ್ಮರಿಸಿಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಿ ಎಂದು ಕಡಕೋಳ ಕಾಳಿ ಬೀರೇಶ್ವರ ದೇವಾಲಯದ ಟ್ರಸ್ಟಿನ ಅಧ್ಯಕ್ಷರು ಹಾಗೂ ಕಡಕೋಳ ಬಿಕೆಟಿ ಪಬ್ಲಿಕ್ ಶಾಲೆಯ ಸಂಸ್ಥಾಪಕ ಬಿ ನಾಗರಾಜ್ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು
ಅವರು ಇಂದು ಮೈಸೂರು ತಾಲ್ಲೂಕು ಕಡಕೋಳ ಗ್ರಾಮದ ಬೀರೇಶ್ವರ ದೇವಾಲಯ ಬಳಿ ಇರುವ ಬಿಕೆಟಿ ಪಬ್ಲಿಕ್ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಿ ನಾಗರಾಜ್ ರವರು ವಿದ್ಯಾರ್ಥಿಗಳು ದೇಶದ ಆಸ್ತಿ ದೇಶದ ರಕ್ಷಣೆಗೆ ಇಂದಿನ ಯುವ ಪೀಳಿಗೆ ಸಂಘಟರಾಗಿ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು ಜೊತೆಗೆ ಒಳ್ಳೆಯ ನಡ ನುಡಿ ಮಾನವೀಯತೆ ದೇಶ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು
ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದಂತಹ ಮಹಾತ್ಮರಾದ ಮಹಾತ್ಮ ಗಾಂಧೀಜಿ ಸರ್ದಾರ್ ವಲ್ಲಬಾಯ್ ಪಟೇಲ್ ಸುಭಾಷ್ ಚಂದ್ರ ಬೋಸ್ ಸಂಗೊಳ್ಳಿ ರಾಯಣ್ಣ ಸೇರಿದಂತೆ ಇನ್ನೂ ಹಲವಾರು ಮಂದಿ ನಾಯಕರಗಳು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ ಅಂತಹ ಮಹಾ ನಾಯಕರುಗಳನ್ನು ನಾವು ಇಂದು ಸ್ಮರಿಸಿಕೊಳ್ಳುವ ಮೂಲಕ ನಾವು ಕೂಡ ಅವರಂತೆ ದೇಶ ಅಭಿಮಾನ ಬೆಳೆಸಿಕೊಳ್ಳೋಣ ಎಂದು ಹೇಳಿದರು
ಈ ಸಂದರ್ಭದಲ್ಲಿ ಕಾಳಮ್ಮ ಮತ್ತು ಶ್ರೀ ಬೀರೇಶ್ವರ ಸ್ವಾಮಿ ದೇವಾಲಯದ ಟ್ರಸ್ಟಿನ ಅಧ್ಯಕ್ಷರು ಹಾಗೂ ಕಡಕೋಳ ಬಿಕೆಟಿ ಪಬ್ಲಿಕ್ ಶಾಲೆಯ ಸಂಸ್ಥಾಪಕ ಬಿ ನಾಗರಾಜು ಶಾಲೆಯ ಕಾರ್ಯದರ್ಶಿ ಕೆಂಪೇಗೌಡರು ಬೀರೇಶ್ವರ ಸ್ವಾಮಿ ಮತ್ತು ಕಾಳಮ್ಮ ಟ್ರಸ್ಟಿನ ಕಾರ್ಯದರ್ಶಿ ನಂಜುಂಡೇಗೌಡ , ಟ್ರಸ್ಟಿನ ಮತ್ತು ಬಿ ಕೆ ಟಿ ಪಬ್ಲಿಕ್ ಶಾಲೆಯ ಖಜಾಂಚಿ ಕೃಷ್ಣ ಉಪಾಧ್ಯಕ್ಷ ಸಿದ್ದಪ್ಪ ಸದಸ್ಯರಾದ. ಕೆಟಿ ಶಿವಣ್ಣ . ಜಯಕುಮಾರ್ ಕಾಳೇಗೌಡ ಸಿದ್ದಪ್ಪ ಸೋಮಲಿಂಗ ಚಂದ್ರು ಚಿಕ್ಕ ಪುಟ್ಟ
ವಕೀಲರು ಆದ ದೊಡ್ಡ ಬೀರೇಗೌಡ ಮಾದೇಗೌಡ,
ಹುಚ್ಚೇಗೌಡ ರಾಮಣ್ಣ . ರಾಕೇಶ್ ಕುಮಾರ್
ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಶಿವಬೀರ ಶಿವಕುಮಾರ್ ಈರಪ್ಪ. ಜಯಪ. ಪುಟ್ಟೇಗೌಡ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಹಾಗೂ ಶಾಸಕರು ವಿದ್ಯಾರ್ಥಿಗಳು ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ ಸ್ವಾತಂತ್ರೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡು ದೇಶದ ಹೋರಾಟಗಾರರ ವೇಷಭೂಷಣಗಳನ್ನು ದೊಡ್ಡ ವಿದ್ಯಾರ್ಥಿಗಳಿಗೆ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಿ ಬಹುಮಾನ ವಿತರಿಸಿದರು











