ವಿಜಯ ದರ್ಪಣ ನ್ಯೂಸ್….
40 ಕೋಟಿ ರೂ.ಗಳಲ್ಲಿ ನೂತನವಾಗಿ ನಿರ್ಮಾಣ
“ಕಲಾ ನ್ಯಾಚುರಲ್ ಫುಡ್ ಜ್ಯೂಸ್ ಫ್ಯಾಕ್ಟರಿ”ಗೆ ಗುದ್ದಲಿ ಪೂಜೆ : ಕೊತ್ತನೂರು ಪಂಚಾಕ್ಷರಿರೆಡ್ಡಿ

ಶಿಡ್ಲಘಟ್ಟ : ರೈತರು ಮಾವಿನ ಮರಗಳನ್ನು ಕಡಿಯಬೇಡಿ ರೈತರಿಗಾಗಿಯೇ ಫ್ಯಾಕ್ಟರಿ ಮಾಡುತ್ತಿದ್ದೇನೆ
ಎರಡು ಘಟಕಗಳಲ್ಲಿ ಗಂಟೆಗೆ 20 ಟನ್ ಸಂಸ್ಕರಣೆ ನಡೆಯಲಿದ್ದು, ಸುಮಾರು 500 ಮಂದಿಗೆ ಉದ್ಯೋಗ, ಶೇ.80ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ,ಇದರಿಂದ ಮಾವು ರೈತರಿಗೆ ಸ್ಥಳೀಯ ಮಾರುಕಟ್ಟೆ ಹಾಗೂ ಯುವಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಕೊತ್ತನೂರು ಎ.ಪಂಚಾಕ್ಷರಿರೆಡ್ಡಿ
ಅವರು ಮನವಿ ಮಾಡಿದರು.
ಶಿಡ್ಲಘಟ್ಟ-ಚಿಂತಾಮಣಿ ರಸ್ತೆಯಲ್ಲಿರುವ ಅವರ ಬಚ್ಚಹಳ್ಳಿ ಬಳಿಯ ತೋಟದಲ್ಲಿ 40 ಕೋಟಿ ರೂ.ಗಳಲ್ಲಿ ನೂತನವಾಗಿ ನಿರ್ಮಾಣವಾಗಲಿರುವ “ಕಲಾ ನ್ಯಾಚುರಲ್ ಫುಡ್ ಜ್ಯೂಸ್ ಫ್ಯಾಕ್ಟರಿ”ಗೆ ಅವರ ಕುಟುಂಬದವರೊಂದಿಗೆ ಅದ್ಧೂರಿಯಾಗಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸ್ಥಳೀಯವಾಗಿಯೇ “ಮಾವಿನ ಹಣ್ಣಿನ ಜ್ಯೂಸ್” ತಯಾರಿಸುವುದರಿಂದ ಬೆಳೆಗಾರರಿಗೆ ಮಾರುಕಟ್ಟೆ ಮತ್ತು ಸುಧೀರ್ಘ ಸಾಗಾಣಿಕೆ ವೆಚ್ಚ ಅಪಾರ ಪ್ರಮಾಣದಲ್ಲಿ ಉಳಿತಾಯವಾಗಲಿದೆ ಇದರಿಂದ ರೈತರ ಬೆಳೆಗೆ ಯೋಗ್ಯ ಬೆಲೆ ಸಿಗುವುದರ ಜೊತೆಗೆ, ಮಾವಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಲಿದೆ ಅಲ್ಲದೆ, ನಮ್ಮ ಭಾಗದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.
ಸ್ಥಳೀಯ ಮಾವು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಹಾಗು ಮಾವು ಬೆಳೆಯುವ ರೈತರ ಹಿತರಕ್ಷಣೆ ಮಾಡುವ ಸದುದ್ದೇಶದಿಂದ,ರೈತರು ಸಂಕಷ್ಟಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಈ ಭಾಗದಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದ್ದು, ಇತ್ತೀಚೆಗೆ ಮಾರುಕಟ್ಟೆಯಲ್ಲಿ ಮಾವಿನ ಧಾರಣೆ ತೀವ್ರವಾಗಿ ಕುಸಿದಿದ್ದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಈ ಕಠಿಣ ಪರಿಸ್ಥಿತಿಯಲ್ಲಿಅವರು ತಮ್ಮ ಸ್ವಂತ ಮಾವಿನ ಮಂಡಿಯ ಮೂಲಕ ರೈತರ ಬೆಳೆಗೆ ಉತ್ತಮ ಬೆಲೆ ನೀಡಿ ಖರೀದಿಸಿ ನೆರವಾಗಿದ್ದು ಮಾವು ಬೆಳೆಗಾರರಲ್ಲಿ ಸಂತಸ ಮೂಡಿತ್ತು.
ರೈತರು ಇಂತಹ ನಷ್ಟಕ್ಕೆ ಪದೇ ಪದೇ ಸಿಲುಕಬಾರದು ಹಾಗೂ ಅವರ ಬೆಳೆಗೆ ನಿರಂತರ ಮಾರುಕಟ್ಟೆ ಮತ್ತು ಸೂಕ್ತ ಬೇಡಿಕೆ ಸೃಷ್ಟಿಯಾಗಬೇಕು ಎಂಬ ದೂರದೃಷ್ಟಿಯಿಂದ ತಮ್ಮ ಸ್ವಂತ ತೋಟದಲ್ಲೇ ಈ ಜ್ಯೂಸ್ ಫ್ಯಾಕ್ಟರಿಯನ್ನು ಸ್ಥಾಪಿಸಲು ಮುಂದಾಗಿರುವುದು
ಮಾವು ಬೆಳಿಗಾರರಲ್ಲಿ ಸಂತಸ ಮೂಡಿದೆ.
ಈ ಪೂಜಾ ಕಾರ್ಯದ ವೇಳೆ ಬಂಡಹಳ್ಳಿಯ ಸುಪ್ರಸಿದ್ದ “ಈಶ ಸಾರಥಿ ಬಸವ” ನಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆಯಲಾಯಿತು, ಆನಂತರ ಶಾಸ್ರೋಕ್ತ ವಿಧಿ-ವಿಧಾನಗಳೊಂದಿಗೆ ಗುದ್ದಲಿ ಪೂಜೆ ನೆರವೇರಿಸಿ,ಫ್ಯಾಕ್ಟರಿಯ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಯಿತು.
ಈ ಪೂಜಾ ಕಾರ್ಯದಲ್ಲಿ ಜ್ಯೋತಿ ಸ್ವರೂಪರೆಡ್ಡಿ, ಲಕ್ಷ್ಮಿರೆಡ್ಡಿ,ಸುನಿತಾ ಕುಮಾರಿ, ನಾದಾನಂದಿನಿ, ಸುಕನ್ಯ, ಪ್ರಫುಲ್ಲಾ ಕುಮಾರಿ, ಕೃಪಾನಂದ,ಪ್ರಣವ ಸ್ವರೂಪರೆಡ್ಡಿ, ತೇಜಸ್ ಸ್ವರೂಪರೆಡ್ಡಿ,ಜಗದೀಶ್ ರೆಡ್ಡಿ ಹಾಗು ಗ್ರಾಮದ ಹಿರಿಯ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.











