ವಿಜಯ ದರ್ಪಣ ನ್ಯೂಸ್….
ಸಾಂಸ್ಕೃತಿಕ ನೃತ್ಯ ವೈಭವದೊಂದಿಗೆ ನಡೆದ ಕೊಪ್ಪಳ ಜಿಲ್ಲಾ ಉತ್ಸವದ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನ

ಕೊಪ್ಪಳ,: 19ನೇ ಬಾರಿಗೆ ನಗರದ ಸಾಹಿತ್ಯ ಭವನದಲ್ಲಿ ನಡೆದ ಕೊಪ್ಪಳ ಜಿಲ್ಲಾ ಉತ್ಸವದ ತಿಳುಗನ್ನಡ ಸಾಂಸ್ಕೃತಿಕ ಸಮ್ಮೇಳನದವನ್ನ ಶ್ರೀ ಬಿ ಎಸ್ ಪಾಟೀಲ್ ವಿಭಾಗೀಯ ನ್ಯಾಯಾಂಗ ಅಭಿಯೋಜಕರು ಬಳ್ಳಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪರಂಪರೆ ನಿರಂತರವಾಗಿ ರಾಜ್ಯದ ಭೂಪಟದಲ್ಲಿ ರಾರಾಜಿಸುತ್ತಿರಲಿ ನಾಗರಿಕರ ವೇದಿಕೆ ಸರ್ಕಾರದ ಅನುದಾನವನ್ನ ನಿರೀಕ್ಷಿಸದೆ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿರುವುದು ಅಭಿನಂದನೀಯ
ಮಹೇಶ್ ಬಾಬು ಸುರ್ವೆ ಅವರ ತಂಡಕ್ಕೆ ಹೃತ್ಪೂರ್ವಕ ವಂದನೆಗಳು
ಜಿಲ್ಲಾ ಉತ್ಸವವನ್ನು ನಿರಂತರ ಮಾಡುವುದಕ್ಕಾಗಿ ತಿಳಿಸಿ ಸ್ವಾಭಿಮಾನದ ಈ ಉತ್ಸವ ಜಿಲ್ಲೆಯ ಸಾಹಿತಿಗಳು ಕಲಾವಿದರು ಭಾಗವಹಿಸಿ ಯಶಸ್ವಿಯಾಗಿ ನಡೆಸಲಿ ಎಂದು ಶುಭ ಹಾರೈಸಿದರು
19ನೇ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನಕೆ ಚಾಲನೆ ನೀಡಿ ಮಾತನಾಡಿ, ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯು ಕೊಪ್ಪಳ ಉತ್ಸವ, ಇಟಗಿ ಉತ್ಸವ, ಅಂಜನಾದ್ರಿ ಉತ್ಸವ ಮಾಡುವ ಮೂಲಕ ಜಿಲ್ಲೆಯ ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದು, ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಸ್ಪಂದಿಸಿ ಸಹಕಾರ ನೀಡಬೇಕು ಎಂದ ಅವರು, ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಮೂಲಕ ಉತ್ಸವದಲ್ಲಿ ಅವಕಾಶ ನೀಡಿದ್ದಾರೆ. ಅನೇಕ ಜಿಲ್ಲೆಯ ಕಲಾವಿದರಿಗೆ ಮಾಸಶನ ದೊರೆಯಲು ಈ ವೇದಿಕೆಗಳು ಸಹಕಾರಿಯಾಗಿವೆ ಎಂದರು.
ಕನಕಗಿರಿ ಮತ್ತು ಆನೆಗುಂದಿಗೆ ಸರ್ಕಾರದ ಅನುದಾನವಿದ್ದರೂ ನಿರಂತರವಾಗಿ ಉತ್ಸವ ನಡೆದ ಉದಾಹರಣೆಗಳಿಲ್ಲ .ಈ ನಿಟ್ಟಿನಲ್ಲಿ ಸರ್ಕಾರದ ಅನುದಾನ ಬರೆದಿದ್ದರು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಸ್ಥಳೀಯ ಸಂಪನ್ಮೂಲಗಳನ್ನು ಶೇಖರಿಸಿಕೊಂಡು ನಿರಂತರವಾಗಿ 22 ವರ್ಷ ಇಟಗಿ ಉತ್ಸವ 19 ವರ್ಷ ಕೊಪ್ಪಳ ಜಿಲ್ಲಾ ಉತ್ಸವವನ್ನು ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಕಾರ್ಯಕರ್ತರನ್ನ ಅಭಿನಂದಿಸಿದರು. ಖಾಸಗಿಯಾಗಿ ಉತ್ಸವಗಳನ್ನು ಆಚರಿಸುವ ಸಂಘ ಸಂಸ್ಥೆಗಳಿಗೆ ಸಚಿವರು ಮತ್ತು ಶಾಸಕರು ಪ್ರೋತ್ಸಾಹಿಸಬೇಕಿದೆ ಮತ್ತು ಸರ್ಕಾರದ ಅನುದಾನವನ್ನ ಬಿಡುಗಡೆಗೊಳಿಸಿ ಆರ್ಥಿಕವಾಗಿ ಬೆಂಬಲಿಸಬೇಕು ಎಂದು ಹೇಳಿದರು

ಹಿರಿಯ ಚಲನಚಿತ್ರ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಡಾ. ಸಿದ್ದಯ್ಯ ಪುರಾಣಿಕರ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡಿದರು, ಜಿಲ್ಲೆಯ ನಿರ್ಮಾತ ಜೆ.ಹೆಚ್. ಪಾಟೇಲರ ಭಾವಚಿತ್ರಕ್ಕೆ ವಕೀಲ ಮಲ್ಲನಗೌಡ ಪಾಟೀಲಪುಷ್ಪ ಅರ್ಪಣೆ ಮಾಡಿದರು.
ಜಿಲ್ಲಾ ಉತ್ಸವದ ಕವಿಗೋಷ್ಠಿ ನಡೆಸಲಾಯಿತು ಸುಮಾರು
25ಕ್ಕೂ ಹೆಚ್ಚು ಕವಿಗಳು ತಮ್ಮ ಕವನ ವಾಚನ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾ ತಂಡಗಳನ್ನು ಪ್ರಾಯೋಜಿಸಿತು.
ಹೊಸಪೇಟೆಯ ಅಂಜಲಿ ಗಗನ ಮತ್ತು ತಂಡ, ಕಂಪ್ಲಿಯ ಸುನೀಲಕುಮಾರ ತಂಡ, ಕೊಪ್ಪಳದ ವಿದ್ಯಾ ಮಂಗಳೂರು ತಂಡದಿಂದ ಕರ್ನಾಟಕ ಸಾಂಸ್ಕೃತಿಕ ಪರಂಪರೆಯ ನೃತ್ಯ ವೈಭವದ ಸಮೂಹ ನೃತ್ಯ.
ಅಂಜಲೀ ಭರತನಾಟ್ಯ ಕಲಾ ಕೇಂದ್ರದ ಸಂಡೂರು ಹುಲಿಗಿ ಹೊಸಪೇಟೆ ಕುರುಗೋಡು ತೋರಣಗಲ್ ಕೇಂದ್ರದ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ವೈಭವ ಪ್ರಸ್ತುತಪಡಿಸಲಾಯಿತು
ಭಾಗ್ಯನಗರದ ದೀಕ್ಷಾ ಕಲಾಕೇಂದ್ರದ ಕಲಾವಿದರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶಿಸಲಾಯಿತು
ರುಕ್ಮಿಣಿ ಸುರ್ವೆ ತಂಡದಿಂದ ಸಮೂಹ ನೃತ್ಯ, ಕೊಪ್ಪಳದ
ಅಲ್ತಾಫ್ ಮತ್ತು ತಂಡದಿಂದ ಸಮೂಹ ನೃತ್ಯ,
ರವಿ ಮತ್ತು ತಂಡದಿಂದ ನೃತ್ಯ ರೂಪಕ ನಟರಾಜ ಸಂಜು ತಂಡದಿಂದ ಸಮೂಹ ನೃತ್ಯ, ಅನುಷಾ ಆರ್ ಬೆಂಗಳೂರು ತಂಡದಿಂದ ಸಮೂಹ ನೃತ್ಯ ವಿಜಯ ಗವಿಮಠ ಇಲ್ಕಲ್ ತಂಡದಿಂದ ನೃತ್ಯರೂಪಕ
ಎಸ್ ಎಸ್ ಮಠದ್ ಹುಬ್ಬಳ್ಳಿ ತಂಡದಿಂದ ಕರ್ನಾಟಕ ವೈಭವದ ನೃತ್ಯರೂಪಕ ಅಶ್ವಿನಿ ಕಂಪ್ಲಿ ತಂಡದಿಂದ ಸಮೂಹ ನೃತ್ಯ ಜ್ಯೋತಿ ಗಲಗಲಿ ಹುಬ್ಬಳ್ಳಿ, ತಂಡದಿಂದ ಜಾನಪದ ನೃತ್ಯ ಅಲ್ಲದೇ ಸ್ಥಳೀಯ ಹತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ನೆರದಿದ್ದ ಕಲಾಭಿಮಾನಿ ಮತ್ತು ಪ್ರೇಕ್ಷಕರ ಜನ ಮನರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವೇದಿಕೆ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ವಹಿಸಿದ್ದರು. ಗೌರವಾಧ್ಯಕ್ಷ ಎಂ ಬಿ ಅಳವoಡಿ ಕಲ್ಯಾಣ ಕರ್ನಾಟಕ ಪತ್ರಕರ್ತರ ವೇದಿಕೆಯ ಸಂಚಾಲಕ ಶಿವು ನಿಡುಗುಂದಿ ಸೇಡಂ ರಂಗಕರ್ಮಿ ಸಿದ್ದಲಿಂಗಯ್ಯಸ್ವಾಮಿ ಸೇಡಂ ಸಂಸ್ಕೃತಿಕ ಕಾರ್ಯದರ್ಶಿ ಜಿಎಂ ಶಿವಪುರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹಿರೇಮಠ, ನಾಗರಿಕದ ವೇದಿಕೆಯ ಹಿರಿಯ ಉಪಾಧ್ಯಕ್ಷ ಎಂಎಂ ಜನಾದ್ರಿ.
ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಕೊಪ್ಪಳ ಜಿಲ್ಲಾ ನಾಗರಿಕದ ವೇದಿಕೆಯ ಅಧ್ಯಕ್ಷ ಮಹೇಶ್ ಬಾಬು ಸುರುವೇ ಸ್ವಾಗತಿಸಿ ಕಳೆದ 18 ವರ್ಷಗಳಿಂದ ನಡೆಸುತ್ತಿರುವ ಜಿಲ್ಲಾ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಆಗ್ರಹಿಸಿದರು. ಯಲಬುರ್ಗಾದ ಸರ್ಕಾರಿ ಅಭಿ ಯೋಜಕ ಶ್ರೀ ಮಲ್ಲು ಮಲ್ಲನಗೌಡ ಪಾಟೀಲ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸಾಂಸ್ಕೃತಿಕ ಕಾರ್ಯದರ್ಶಿ ಜಿಎಂ ಶಿವಪುರ
ವoದಿಸಿದರು…






