--Ads--

ಪ್ರಶ್ನೆ ಅಧಾನಿ ಭೇಟಿಯದ್ದಲ್ಲ ಪ್ರಶ್ನೆ ಕಾಂಗ್ರೆಸ್‌ನ ನಿಲುವಿನದ್ದು ,ಅಧಾನಿ ಭೇಟಿ: ಜನರ ಪ್ರಶ್ನೆಗೆ ಸ್ಪಷ್ಟ ಉತ್ತರ ಬೇಕು

On: August 25, 2026 6:29 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪ್ರಶ್ನೆ ಅಧಾನಿ ಭೇಟಿಯದ್ದಲ್ಲ ಪ್ರಶ್ನೆ ಕಾಂಗ್ರೆಸ್‌ನ ನಿಲುವಿನದ್ದು ,ಅಧಾನಿ ಭೇಟಿ: ಜನರ ಪ್ರಶ್ನೆಗೆ ಸ್ಪಷ್ಟ ಉತ್ತರ ಬೇಕು

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ ವಿರೋಧವೂ ಸಹಜ ಆದರೆ ಒಂದು ರಾಜಕೀಯ ಪಕ್ಷ ಸಾರ್ವಜನಿಕವಾಗಿ ವ್ಯಕ್ತಪಡಿಸುವ ನಿಲುವು ಮತ್ತು ಅದರ ನಾಯಕರು ಅನುಸರಿಸುವ ನಡೆ ನಡುವೆ ಸ್ಪಷ್ಟತೆ ಇರಬೇಕು ಇಲ್ಲದಿದ್ದರೆ ಜನರಲ್ಲಿ ಪ್ರಶ್ನೆಗಳು ಮೂಡುವುದು ಅನಿವಾರ್ಯ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಹಲವು ವರ್ಷಗಳಿಂದ ಗೌತಮ್ ಅಧಾನಿ ಕುರಿತು ಪ್ರಶ್ನೆಗಳನ್ನು ಎತ್ತುತ್ತಾ ಬಂದಿದ್ದಾರೆ ಸಂಸತ್ತಿನಿಂದ ಸಾರ್ವಜನಿಕ ವೇದಿಕೆಗಳವರೆಗೆ ಅಧಾನಿ ಮತ್ತು ಕೇಂದ್ರ ಸರ್ಕಾರದ ಸಂಬಂಧಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನಿರಂತರವಾಗಿ ವ್ಯಕ್ತಪಡಿಸಿದ್ದಾರೆ ಕಾಂಗ್ರೆಸ್ ಪಕ್ಷದ ಇತರ ಹಲವಾರು ನಾಯಕರು ಕೂಡ ಇದೇ ವಿಷಯದಲ್ಲಿ ಟೀಕಾತ್ಮಕ ನಿಲುವನ್ನು ಹೊಂದಿದ್ದಾರೆ

ಇಂತಹ ಸಂದರ್ಭದಲ್ಲಿ ದೇಶದ ಪ್ರಮುಖ ಉದ್ಯಮಿ ಗೌತಮ್ ಅಧಾನಿ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಹಾಗೂ ಈ ಕುರಿತು ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ

ಇಲ್ಲಿ ಪ್ರಶ್ನೆ ವ್ಯಕ್ತಿಗಳ ಕುರಿತಲ್ಲ ಪ್ರಶ್ನೆ ರಾಜಕೀಯ ನಿಲುವಿನ ಕುರಿತಾಗಿದೆ.

ಒಂದು ಕಡೆ ಅಧಾನಿ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತುವ ಕಾಂಗ್ರೆಸ್ ನಾಯಕತ್ವ ಮತ್ತೊಂದು ಕಡೆ ಅಧಾನಿಯೊಂದಿಗೆ ನಡೆಯುವ ಸಭೆಗಳು ಇವೆರಡರ ನಡುವಿನ ಸಂಬಂಧವನ್ನು ಜನರು ಸಹಜವಾಗಿಯೇ ಅರ್ಥಮಾಡಿಕೊಳ್ಳಲು ಬಯಸುತ್ತಿದ್ದಾರೆ.

ಈ ಭೇಟಿ ಕರ್ನಾಟಕಕ್ಕೆ ಹೂಡಿಕೆ ಆಕರ್ಷಣೆ ಕೈಗಾರಿಕಾ ಅಭಿವೃದ್ಧಿ ಉದ್ಯೋಗ ಸೃಷ್ಟಿ ಅಥವಾ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ್ದಾದರೆ ಅದರ ಬಗ್ಗೆ ಸರ್ಕಾರ ಸ್ಪಷ್ಟ ಮಾಹಿತಿ ನೀಡುವುದು ಅತ್ಯಂತ ಅಗತ್ಯ ಏಕೆಂದರೆ ಪಾರದರ್ಶಕತೆ ಇದ್ದಾಗ ಮಾತ್ರ ಊಹಾಪೋಹಗಳಿಗೆ ತೆರೆ ಬೀಳುತ್ತದೆ.

ಜನತಂತ್ರದಲ್ಲಿ ಜನರು ಕೇವಲ ಭಾಷಣಗಳನ್ನು ಮಾತ್ರ ಕೇಳುವುದಿಲ್ಲ ನಾಯಕರು ಏನು ಹೇಳುತ್ತಾರೆ ಮತ್ತು ಏನು ಮಾಡುತ್ತಾರೆ ಎಂಬುದನ್ನು ಕೂಡ ಅಳೆಯುತ್ತಾರೆ ರಾಜಕೀಯ ನಿಲುವು ಮತ್ತು ಆಡಳಿತಾತ್ಮಕ ನಡೆ ಒಂದೇ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಸಾರ್ವಜನಿಕ ವಿಶ್ವಾಸ ಮತ್ತಷ್ಟು ಬಲವಾಗುತ್ತದೆ.

ಆದ್ದರಿಂದ ಇಂದು ಜನರು ಕೇಳುತ್ತಿರುವ ಪ್ರಶ್ನೆ ಸರಳವಾಗಿದೆ: ಅಧಾನಿ ಕುರಿತು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವು ಏನು?

ರಾಜಕೀಯ ವೇದಿಕೆಯಲ್ಲಿ ವ್ಯಕ್ತವಾಗುವ ವಿರೋಧವೇ ಅಂತಿಮ ನಿಲುವು ಅಥವಾ ರಾಜ್ಯದ ಅಭಿವೃದ್ಧಿಯ ಉದ್ದೇಶದಿಂದ ನಡೆಯುವ ಸಂವಾದವೇ ನಿಜವಾದ ರಾಜಕೀಯ ವಾಸ್ತವವೇ? ಈ ಪ್ರಶ್ನೆಗಳಿಗೆ ಸ್ಪಷ್ಟ ಮತ್ತು ಪಾರದರ್ಶಕ ಉತ್ತರ ನೀಡುವುದು ಆಡಳಿತದ ಜವಾಬ್ದಾರಿಯಾಗಿದೆ.

ಜನತಂತ್ರದಲ್ಲಿ ಪ್ರಶ್ನೆ ಕೇಳುವುದು ವಿರೋಧವಲ್ಲ,
ಅದು ಸಾರ್ವಜನಿಕ ಹಕ್ಕು, ಪ್ರಶ್ನೆಗಳಿಗೆ ಉತ್ತರ ನೀಡುವುದು ದೌರ್ಬಲ್ಯವಲ್ಲ ಅದು ಜವಾಬ್ದಾರಿಯುತ ಆಡಳಿತದ ಲಕ್ಷಣ.

ಮಾತು ಮತ್ತು ನಡೆ ಒಂದೇ ದಾರಿಯಲ್ಲಿ ಸಾಗಿದಾಗ ರಾಜಕೀಯಕ್ಕೆ ಗೌರವ ಸಿಗುತ್ತದೆ , ಪಾರದರ್ಶಕತೆ ಇದ್ದಾಗ ಆಡಳಿತಕ್ಕೆ ವಿಶ್ವಾಸ ಸಿಗುತ್ತದೆ.ಜನರ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ಜನತಂತ್ರ ಮತ್ತಷ್ಟು ಬಲಗೊಳ್ಳುತ್ತದೆ.
ಅಧಾನಿ ಭೇಟಿ: ರಾಜಕೀಯ ನಿಲುವು ಒಂದೇನಾ ಎರಡು ಮುಖಗಳಾ* ?

✍️ ಎಂ ಎಂ ದಾವೂದ್
ಕೊಡಗು ಜನ ಅಭಿವೃದ್ಧಿ ಸಮಿತಿ
9945375180

ಪ್ರೇಕ್ಷಕರ ಮನ ಸೆಳೆದ ನೃತ್ಯ ಪ್ರದರ್ಶನ

ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ನಗರದ ಈಜುಕೊಳದ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಜರುಗುತ್ತಿರುವ ಗುರುರಾಯರ ಆರಾಧನಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲಾಸ್ಯ ವರ್ಧನ ನೃತ್ಯ ಶಾಲೆಯ ಗುರುಗಳಾದ ಡಾ|| ಮಾಲಿನಿ ರವಿಶಂಕರ್ ಇವರ ಶಿಷ್ಯೆಯರಾದ ಕು|| ಆರ್. ಶ್ರೇಯಾ ಮತ್ತು ಕು|| ಎನ್. ಮಂದಾರ ಇವರುಗಳು ಭರತನಾಟ್ಯ ಪ್ರದರ್ಶನ ಕಾರ್ಯಕ್ರಮ ನಡೆಸಿಕೊಟ್ಟರು.

ಮೊದಲ ಪ್ರಸ್ತುತಿಯಾಗಿ ಸುಬ್ರಹ್ಮಣ್ಯ ಭಾರತಿ ರಚಿಸಿದ ಹಂಸಧ್ವನಿ ರಾಗದ ‘ನರ್ತನv ಗಣಪತಿ’, ನಂತರ ಕ್ರಮವಾಗಿ ಪಟ್ಟಣ ಸುಬ್ರಹ್ಮಣ್ಯ ಅಯ್ಯರ್ ಅವರ ರಚನೆಯ “ರಾರಾ ವೇಣು ಗೋಪ ಬಾಲ”, ಬಳ್ಳಾರಿ ಶೇಷಗಿರಿ ಆಚಾರ್ಯರ “ಚಂದ್ರಶೇಖರಂ ಭಜಾಮಿ ಸತತಂ”, ಕವಿ ಜಯದೇವ ಗೋಸ್ವಾಮಿ ಅವರ “ದಶಾವತಾರ” ನೃತ್ಯದ ನಂತರ ಪ್ರಮುಖ ಆಕರ್ಷಣೆಯಾದ ಕದನ ಕುತೂಹಲ ರಾಗ, ಆದಿ ತಾಳದ ಖ್ಯಾತ ಗಾಯಕ ಡಾ|| ಎಂ. ಬಾಲಮುರಳಿಕೃಷ್ಣ ಹಾಡಿದ ತಿಲ್ಲಾನದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಮಕ್ಕಳು ಈ ಎಲ್ಲಾ ಕೃತಿಗಳನ್ನು ಬಹಳ ಸೊಗಸಾಗಿ ಅಭಿನಯಿಸಿ ನೆರೆದಿದ್ದ ಪ್ರೇಕ್ಷಕರ ಮನ ಸೆಳೆದರು.

 

WhatsApp

Join Now

Telegram

Join Now

Instagram

Join Now