--Ads--

ನಂದಗುಡಿಯಲ್ಲಿ ಅದ್ದೂರಿಯಾಗಿ ಬಿ.ಎನ್. ಬಚ್ಚೇಗೌಡ ಹಾಗೂ ಬಿ.ವಿ. ರಾಜಶೇಖರ್ ಗೌಡರ ಹುಟ್ಟುಹಬ್ಬ ಆಚರಣೆ

On: October 5, 2026 11:35 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ನಂದಗುಡಿಯಲ್ಲಿ ಅದ್ದೂರಿಯಾಗಿ ಬಿ.ಎನ್. ಬಚ್ಚೇಗೌಡ ಹಾಗೂ ಬಿ.ವಿ. ರಾಜಶೇಖರ್ ಗೌಡರ ಹುಟ್ಟುಹಬ್ಬ ಆಚರಣೆ

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದ ಬಿ.ಎನ್. ಬಚ್ಚೇಗೌಡರ ಕ್ರೀಡಾಂಗಣದಲ್ಲಿ ಮಾಜಿ ಸಂಸದರಾದ ಬಿ.ಎನ್. ಬಚ್ಚೇಗೌಡರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಬಿ.ವಿ. ರಾಜಶೇಖರ್ ಗೌಡರು ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಹಿತೈಷಿಗಳು ಭಾಗವಹಿಸಿ ಇಬ್ಬರು ಗಣ್ಯರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾವರೆಕೆರೆ ಗ್ರಾಮದ ಮುಖಂಡರುಗಳ ಪರವಾಗಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಟಿ.ಎಸ್. ರಾಜಶೇಖರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿ.ಎನ್. ಬಚ್ಚೇಗೌಡರು ಹಾಗೂ ಬಿ.ವಿ. ರಾಜಶೇಖರ್ ಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

ನಂತರ ಮಾತನಾಡಿದ ಟಿ.ಎಸ್. ರಾಜಶೇಖರ್ ಅವರು, ಇಬ್ಬರಿಗೂ ಉತ್ತಮ ಆರೋಗ್ಯ, ಆಯಸ್ಸು, ಸಂತೋಷ ಹಾಗೂ ಸಮೃದ್ಧಿ ದೊರೆಯಲಿ ಎಂದು ಹಾರೈಸಿದರು.

ಸಮಾಜಮುಖಿ ಚಟುವಟಿಕೆಗಳು ಹಾಗೂ ಜನಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಮೂಲಕ ಜನರೊಂದಿಗೆ ಸದಾ ಉತ್ತಮ ಬಾಂಧವ್ಯ ಹೊಂದಿರಲಿ ಎಂದು ಶುಭ ಹಾರೈಸಿದರು.

ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ನೆಚ್ಚಿನ ನಾಯಕರಿಗೆ ಶುಭಾಶಯಗಳನ್ನು ಸಲ್ಲಿಸಿದರು. ಕಾರ್ಯಕ್ರಮವು ಸ್ನೇಹ, ಅಭಿಮಾನ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾಸಕರಾದ ಶರತ್ ಬಚ್ಚೇಗೌಡರು, ಬಮುಲ್ ನಿರ್ದೇಶಕರಾದ ಬಿವಿ ಸತೀಶ್ ಗೌಡರು, ಬಿಎನ್ ಗೋಪಾಲ್ ಗೌಡರು, ಉದ್ಯಮಿಗಳಾದ ಬೈರೇಗೌಡರು, ಗುರುಬಸಪ್ಪ, ಭೂ ನ್ಯಾಯಮಂಡಳಿ ಸದಸ್ಯರಾದ ನಾರಾಯಣಸ್ವಾಮಿ, ಲೋಕೇಶ್, ನಾಗೇಶ್, ನಾಗರಾಜ್,ಹಾಗೂ ತಾಲೂಕಿನ ಹಲವು ಗಣ್ಯರು ಸೇರಿದಂತೆ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

WhatsApp

Join Now

Telegram

Join Now

Instagram

Join Now