ಶ್ರೀಉಮಾ ಮಹೇಶ್ವರಸ್ವಾಮಿ, ಭದ್ರಕಾಳಿ ಸಮೇತ ಶ್ರೀವೀರಭದ್ರಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ, ಮಂಡಲಪೂಜೆ
ವಿಜಯ ದರ್ಪಣ ನ್ಯೂಸ್….
ಶ್ರೀಉಮಾ ಮಹೇಶ್ವರಸ್ವಾಮಿ, ಭದ್ರಕಾಳಿ ಸಮೇತ ಶ್ರೀವೀರಭದ್ರಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ, ಮಂಡಲಪೂಜೆ
ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀ ಉಮಾ ಮಹೇಶ್ವರಸ್ವಾಮಿ, ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಶ್ರೀಗಣಪತಿ, ಶ್ರೀ ಸುಬ್ರಮಣ್ಯಸ್ವಾಮಿ, ಶ್ರಿಕಾಲಭೈರವೇಶ್ವರ, ಶ್ರೀದಕ್ಷಿಣಾಮೂರ್ತಿ ಹಾಗೂ ದಂಪತಿ ಸಮೇತ ನವಗ್ರಹಗಳು, ನಾಗರಕಲ್ಲುಗಳು ಹಾಗೂ ನೂತನ ನಂದಿ ವಿಗ್ರಹಗಳು ಮತ್ತು ಧ್ವಜಸ್ತಂಭ ಪ್ರತಿಷ್ಠಪನೆಯ 48 ದಿನಗಳ ಮಂಡಲಪೂಜೆ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಮೇಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳು ಬಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ದೇವರ ಕೃಪೆಗೆ ಪಾತ್ರರಾದರು. ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನ ಮಹೋತ್ಸವದ 48 ದಿನಗಳ ಮಂಡಲ ಪೂಜೆ ಅಂಗವಾಗಿ ಸೋಮವಾರದಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿತು.
ಮಂಗಳವಾರ ಪ್ರಾತಃಕಾಲ ಮಹಾಸಂಕಲ್ಪ, ಗಣಪತಿ ದೇವರ ಪ್ರಾರ್ಥನೆ, ಪ್ರದಾನ ದೇವತೆಗಳಿಗೆ ಹಾಗು ಪರಿವಾರ ದೇವತೆಗಳಿಗೆ ಮಹಾರುದ್ರಾಭಿಷೇಕ, ಸಂಕ್ಷಿಪ್ತ ಕಳಸ ಪೂಜೆ ನಂತರ ಗಣಪತಿ ಹೋಮ, ಮಹಾರುದ್ರ ಹೋಮ, ನವಗ್ರಹ ಹೋಮ, ಶ್ರಿಸೂಕ್ತ ಹೋಮ, ಶಾಮತಿ ಹೋಮ, ಪ್ರಾಯಶ್ಚಿತ್ತ ಹೋಮ, ಜಯಾದಿ ಹೋಮ ನಂತರ ಪೂರ್ಣಾಹುತಿ ನಂತರ ಜಗದ್ಗುರು ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಮಂಡಲಾಭಿಷೇಕ ನೆರವೇರಿತು.
ಮಂಡಲಪೂಜೆ ಕಾರ್ಯದಲ್ಲಿ ಪಾಲ್ಗೊಂಡ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳನ್ನು ದೇವಾಲಯ ಜೀರ್ಣೋದ್ದಾರ ಸಮಿಯ ಸದಸ್ಯರು ಸನ್ಮಾನಿಸಿದರು.
ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಯಿತು, ಭಕ್ತಾದಿಗಳಿಗಾಗಿ ಅನ್ನ ಸಂತರ್ಪಣೆ ಸೇವೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಆರ್.ಕೆ.ರಾಮಕೃಷ್ಣಪ್ಪ,ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ.ಉಮೇಶ್, ಬೆಸ್ಕಾಂ ಗುತ್ತಿಗೆದಾರರಾದ ಬಿ.ಕೆ.ಶ್ರೀನಿವಾಸ್, ಮಂಜುನಾಥ್, ರಮೇಶ್ ,ಅಶ್ವತ್ಥಪ್ಪ, ನಾಗರಾಜ್, ಎಚ್.ಟಿ.ಸುದರ್ಶನ್,ರೂಪೇಶ್ ,
ಎಸ್.ಆರ್.ಶ್ರೀನಿವಾಸಮೂರ್ತಿ,ಪ್ರಭಾಕರ್ ಹಾಗು ಮೇಲೂರು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.