--Ads--

ಪೌರಕಾರ್ಮಿಕರು ಹಾಗೂ ತೃತಿಯ ಲಿಂಗಿಗಳಿಗೆ ಬಾಗಿನ ನೀಡಿದ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ

On: July 17, 2025 3:42 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ನಾಡ ದೇವತೆ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ

ಪೌರಕಾರ್ಮಿಕರು ಹಾಗೂ ತೃತಿಯ ಲಿಂಗಿಗಳಿಗೆ ಬಾಗಿನ ನೀಡಿದ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ

ಮೈಸೂರು ತಾಂಡವಪುರ  ಜುಲೈ 17 : ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆ ವಿ ಕೆ ಫೌಂಡೇಶನ್ ವತಿಯಿಂದ ನಾಡ ದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಚಾಮುಂಡಿ ಬೆಟ್ಟದ ಪಾದದಲ್ಲಿ ಪೌರಕಾರ್ಮಿಕ ಮಹಿಳೆಯರಿಗೆ ಹಾಗೂ ತೃತೀಯಲಿಂಗಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ರವರು ಸೀರೆ, ಕುಂಕುಮ, ಅರಿಶಿಣ, ಬಲೆ ಮೂಲಕ ಬಾಗಿನ ವಿತರಿಸಿ ಶುಭ ಕೋರಿದರು

ನಂತರ ಮಾತನಾಡಿದ ಅವರು ಸಮಸ್ತ ನಾಡಿನ ಜನತೆಗೆ ನಾಡ ದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ ಶುಭಾಶಯ ಕೋರಿದರು,

ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಚಾಮುಂಡೇಶ್ವರಿ ತಾಯಿ ಹೆಚ್ಚು ಶಕ್ತಿ ನೀಡಲಿ, ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಇಂದು ತಾಯಿ ದೇವತೆಯಲ್ಲಿ ಬೇಡಿಕೊಳ್ಳುತ್ತೇನೆ ಎಂದರು ಪೌರಕಾರ್ಮಿಕರಿಗೂ ಹಾಗೂ ತೃತೀಯ ಲಿಂಗಿಗಳಿಗೆ ಗುರುತಿಸಿ ಬಾಗಿನ ನೀಡುವ ಸೌಭಾಗ್ಯ ಕಲ್ಪಿಸಿಕೊಟ್ಟ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆ ವಿ ಕೆ ಫೌಂಡೇಶನ್ ವಿಶೇಷ ಧನ್ಯವಾದ ತಿಳಿಸಿದರು,

ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಕೆವಿಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿವಿನ, ಸವಿತಾ ಘಾಟ್ಕೆ, ಜಯಶ್ರೀ ಶಿವರಾಂ, ಚಿಕ್ಕಮಂಗಳೂರು ಮುರಾಜಿ ಶಾಲೆಯ ಪ್ರಾಂಶುಪಾಲರಾದ ದೀಪ, ಅಶ್ವಿನಿ ಗೌಡ, ಸುಶೀಲ, ಸರಸ್ವತಿ ಹಲಸಗಿ, ರಾಣಿ ಪ್ರಭ ಹಾಗೂ ಇನ್ನಿತರರು ಹಾಜರಿದ್ದರು

WhatsApp

Join Now

Telegram

Join Now

Instagram

Join Now