ಸರ್ಕಾರಿ ನೌಕರಿ ಕೊಡಿಸುವುದಾಗಿ 21 ಲಕ್ಷ 36 ಸಾವಿರ ರೂ.ಗಳನ್ನು ವಂಚನೆ
ವಿಜಯ ದರ್ಪಣ ನ್ಯೂಸ್…
ಸರ್ಕಾರಿ ನೌಕರಿ ಕೊಡಿಸುವುದಾಗಿ 21 ಲಕ್ಷ 36 ಸಾವಿರ ರೂ.ಗಳನ್ನು ವಂಚನೆ
ಶಿಡ್ಲಘಟ್ಟ : ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ 21 ಲಕ್ಷ 36 ಸಾವಿರ ರೂ.ಗಳನ್ನು ವಂಚಿಸಿದ ವ್ಯಕ್ತಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿ ತೋಕಲಘಟ್ಟ ಗ್ರಾಮದ ಅನಿಲ್ ಕುಮಾರ್ ಬಂಧಿತ ಆರೋಪಿಯಾಗಿದ್ದು
ತಾಲ್ಲೂಕಿನ ಜಂಗಮಕೋಟೆಯ ಗೋಪಾಲಕೃಷ್ಣ ಅವರಿಗೆ
ಪರಿಚಯವಾಗಿದ್ದ ಅನಿಲ್ ಕುಮಾರ್, ತಾನು ಕೆಪಿಎಸ್‌ಸಿಯಲ್ಲಿ
ಪ್ರಮುಖ ಹುದ್ದೆಯಲ್ಲಿದ್ದೇನೆ, ನಿಮ್ಮ ಮಗನಿಗೆ ಸರ್ಕಾರಿ ನೌಕರಿ
ಕೊಡಿಸುತ್ತೇನೆ ಎಂದು ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 21 ಲಕ್ಷ 36 ಸಾವಿರ ರೂ. ಪಡೆಯುತ್ತಿದ್ದ ಆದರೆ, ವಾಗ್ದಾನ ಮಾಡಿದಂತೆ ನೌಕರಿ ಕೊಡಿಸದ ಕಾರಣ ಗೋಪಾಲಕೃಷ್ಣ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅನಿಲ್ ಕುಮಾರ್‌ನ್ನು ಹೊಸಕೋಟೆ ತಾಲ್ಲೂಕಿನ ಮಲ್ಲಿಮಾಕಲಹಳ್ಳಿ ಬಳಿ ಬಂಧಿಸಿ ವಿಚಾರಣೆ ನಡೆಸಿದರು,ವಿಚಾರಣೆ ವೇಳೆ, ಪಡೆದ ಹಣವನ್ನು ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಿನಲ್ಲಿ ಕಳೆದುಕೊಂಡಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ.
ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾದ ಆರೋಪಿ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿದಿದೆ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಪಿಎಸ್‌ಐ ಕೆ.ಸತೀಶ್ ಹಾಗೂ ಸಿಬ್ಬಂದಿ ಸಂದೀಪ್ ಕುಮಾರ್, ವೆಂಕಟೇಶ್ ಮತ್ತು ಮಂಜುನಾಥ್ ಅವರ ಕಾರ್ಯಕ್ಷಮತೆಯನ್ನು ಎಸ್ಪಿ ಕುಶಾಲ್ ಚೌಕ್ಸೆ ಪ್ರಶಂಸಿಸಿದ್ದಾರೆ.
₹$$₹₹₹₹₹₹₹₹₹₹₹₹₹₹₹₹₹₹₹೩೩೩೩೩೩೩₹₹$₹
ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ
ಶಿಡ್ಲಘಟ್ಟ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲಂತೂ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದೆ ಇದರಿಂದ ಧರ್ಮ, ಧರ್ಮಗಳ ನಡುವೆ ವೈಷಮ್ಯ ಹೆಚ್ಚುತ್ತಿದೆ ಇದು ಅಭಿವೃದ್ಧಿಗೂ, ಮಾನವ ಕುಲದ ಪ್ರಗತಿಗೂ ಮಾರಕ ಹಾಗಾಗಿ ಗಣೇಶ ಉತ್ಸವದ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಚೆಲುವರಾಜ್ ಒತ್ತಾಯಿಸಿದರು.
ನಗರದ ತಾಲೂಕು ಕಚೇರಿ ಮುಂಭಾಗ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ
ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯ ಮದ್ದೂರಲ್ಲಿ ಗಣೇಶ ಉತ್ಸವ ವೇಳೆ ಮೆರವಣಿಗೆ ತೆರಳುತ್ತಿದ್ದವರ ಮೇಲೆ ಉಗಿದು, ಕಲ್ಲು ಎಸೆದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದರು.
ಆಧ್ಯಾತ್ಮಿಕ ಹಿನ್ನೆಲೆಯಿರುವ ಶ್ರೀ ಗೌರಿ-ಗಣೇಶ ಹಬ್ಬ ಹಿಂದುಗಳ ಭಾವನಾತ್ಮಕ ಹಬ್ಬ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಲು ದೇಶದ ಜನರನ್ನು ಒಗ್ಗೂಡಿಸಿ ಸಂಘಟಿಸಲು ಶ್ರೀ ಬಾಲಗಂಗಾಧರ ತಿಲಕ್ ಸಾರ್ವಜನಿಕ ಹಬ್ಬವಾಗಿ ಪರಿವರ್ತಿಸಿದರು , ಅಂದಿನಿಂದ ಇಂದಿನವರೆಗೂ ಜನರು ಗಣೇಶ ಹಬ್ಬ ಆಚರಿಸುವುದು ರೂಢಿ ಇಂತಹ ಹಬ್ಬಕ್ಕೆ ರಾಜ್ಯ ಸರ್ಕಾರ ನಿಯಮಗಳ ಹೆಸರಿನಲ್ಲಿ ವಿಘ್ನ ಉಂಟು ಮಾಡುತ್ತಿರುವುದು ಸರಿಯಲ್ಲ ಇದರಿಂದ ಕಿಡಿಗೇಡಿಗಳು ಹಿಂದು ಧರ್ಮ, ಧಾರ್ಮಿಕ ಕೇಂದ್ರ ಆಚಾರ, ಸಂಪ್ರದಾಯಗಳ ಮೇಲೆ ವಿನಾಕಾರಣ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ತಹಸೀಲ್ದಾರ್ ಗಗನಸಿಂಧುಗೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಭಜರಂಗ ದಳದ ಸಂಯೋಜಕ ವೆಂಕೋಬರಾವ್, ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಚೆಲುವರಾಜ್, ಸಹಕಾರ್ಯದರ್ಶಿ ನರೇಶ್‌ಯಾದವ್, ಡಿ.ಆರ್.ನಾರಾಯಣಸ್ವಾಮಿ,ಮೇಲೂರು ಮಹೇಶ್, ನಾರಾಯಣಸ್ವಾಮಿ, ರಮೇಶ್ ಮುಂತಾದವರು
ಪಾಲ್ಗೊಂಡಿದ್ದರು.