ವಿಜೃಂಭಣೆಯಿಂದ ಜರುಗಿದ ಕಾರ್ಯಸಿದ್ದೇಶ್ವರ ಜಾತ್ರೆ: ದೇವರ ದರ್ಶನ ಪಡೆದು ಪುನೀತರಾದ ಭಕ್ತರು
ವಿಜಯ ದರ್ಪಣ ನ್ಯೂಸ್…
ವಿಜೃಂಭಣೆಯಿಂದ ಜರುಗಿದ ಕಾರ್ಯಸಿದ್ದೇಶ್ವರ ಜಾತ್ರೆ: ದೇವರ ದರ್ಶನ ಪಡೆದು ಪುನೀತರಾದ ಭಕ್ತರು
ತಾಂಡವಪುರ ಅಕ್ಟೋಬರ್ 23 ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂಜನಗೂಡು ತಾಲೂಕು ಇತಿಹಾಸ ಪ್ರಸಿದ್ಧಿ ಉಳ್ಳ ಕಾರ್ಯ ಗ್ರಾಮದ ಬಳಿ ಇರುವ ಕಾರ್ಯ ಸಿದ್ದೇಶ್ವರ ಸ್ವಾಮಿ ಜಾತ್ರೆಯು.ಬಹಳ ವಿಜೃಂಭಣೆಯಿಂದ ಜರುಗಿತು.
ಈ ಜಾತ್ರೆಯಲ್ಲಿ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಭಾಗವಹಿಸಿ. ಇಂದು ಬೆಳಗ್ಗೆ ಗ್ರಾಮದಿಂದ ಹೊರಡುವ ಪಲ್ಲಕ್ಕಿ ಉತ್ಸವ ಮೂರ್ತಿಗೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ಸಿದ್ಧೇಶ್ವರ ಸ್ವಾಮಿ ಜಾತ್ರೆಯು ಪ್ರತಿ ವರ್ಷವೂ ವಿಜೃಂಭಣೆ ಜರುಗುತ್ತಿದ್ದು. ಈ ಬಾರಿ ಈ ಭಾಗದಲ್ಲಿ ಉತ್ತಮ ಮಳೆಯಾಗಿ ರೈತರ ಭೂಮಿಗಳಲ್ಲಿ ಬೆಳೆದಿರುವ ಬೆಳೆಗಳು. ಉತ್ತಮವಾಗಿದೆ ರೈತರು ಜಾನುವಾರುಗಳಿಗೆ ಸಾರ್ವಜನಿಕರಿಗೆ ಸಂತೋಷ ಉಂಟು ಮಾಡಿದೆ. ಅಲ್ಲದೆ ಈ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಭಾಗವಹಿಸಿ ದೇವರ ದರ್ಶನ ಪಡೆದಿದ್ದಾರೆ. ಸಿದ್ದೇಶ್ವರ ಸ್ವಾಮಿಯ ಭಕ್ತಾದಿಗಳಿಗೆ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸಿದರು
ಜಾತ್ರೆ ವಿಶೇಷವಾಗಿ ಕಾರ್ಯಸಿದ್ದೇಶ್ವರ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಹಾಗೂ ಜನ ಜಾನುವಾರುಗಳಿಗೆ ಅನುಕೂಲವಾಗಲು ಬೆಟ್ಟದಲ್ಲಿ ಹಾಗೂಗ್ರಾಮದಲ್ಲಿ ಕುಡಿಯುವ ನೀರಿನ ಅವಸ್ಥೆ. ಸ್ವಚ್ಛತೆಯ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಬಸವಣ್ಣ ತಿಳಿಸಿದ್ದಾರೆ..
ಈ ಜಾತ್ರೆಯಲ್ಲಿ. ಬೆಂಗಳೂರು. ಮೈಸೂರು. ಮಂಡ್ಯ. ಚಾಮರಾಜನಗರ. ಮುಂತಾದ ಜಿಲ್ಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಭಾಗವಹಿಸಿ ದೇವರ ದರ್ಶನ ಪಡೆದ ಅರಕೆಗಳನ್ನು ಒಪ್ಪಿಸಿದರು.
ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು ಜಾತ್ರೆಯ ಪ್ರಯುಕ್ತ ಮುಜರಾಯಿ ಇಲಾಖೆ ಅಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದು ಬಸ್ತನ್ನು ಏರ್ಪಡಿಸಿ ಬರುವಂತ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡರು