ಸಡಗರ ಸಂಭ್ರಮದಿಂದ ಜರುಗಿಧ ಕಾರ್ಯ ಸಿದ್ದೇಶ್ವರ ಸ್ವಾಮಿ ಚಿಕ್ಕಜಾತ್ರೆ
ವಿಜಯ ದರ್ಪಣ ನ್ಯೂಸ್…
ಸಡಗರ ಸಂಭ್ರಮದಿಂದ ಜರುಗಿಧ ಕಾರ್ಯ ಸಿದ್ದೇಶ್ವರ ಸ್ವಾಮಿ ಚಿಕ್ಕಜಾತ್ರೆ

ತಾಂಡವಪುರ ಅಕ್ಟೋಬರ್ 30 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಇತಿಹಾಸ ಪ್ರಸಿದ್ಧಿ ಉಳ್ಳಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಚಿಕ್ಕ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿದೆ.
ಶ್ರೀ ಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಕಾರ್ಯ ಗ್ರಾಮಸ್ಥರು ಹೂವಿನ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ವಿಶೇಷ ಪೂಜೆಯನ್ನು ಸಲ್ಲಿಸಿ, ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟಕ್ಕೆ ಹೆಗಲ ಮೇಲೆ ಒತ್ತುಕೊಂಡು ಹೋಗಲಾಯಿತು. ಕಾರ್ಯಸಿದ್ದೇಶ್ವರ ಸ್ವಾಮಿಗೆ ದೇವಾಲಯದಲ್ಲಿ ಕ್ಷೀರಾ ಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ, ಹೂವಿನಿಂದ ಅಲಂಕಾರ ಮಾಡಿ ಮುಜರಾಯಿ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮಹಾ ಮಂಗಳಾರತಿ ಮಾಡಿ ದೇವರ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಯಿತು.
ಚಿಕ್ಕ ಜಾತ್ರಾ ಅಂಗವಾಗಿ ಹೂವಿನ ಪಲ್ಲಕ್ಕಿ ಉತ್ಸವ, ಹುಲಿವಾಹನೋತ್ಸವ ವಿಜೃಂಭಣೆಯಿಂದ ಜರುಗಿತು. ಚಿಕ್ಕ ಜಾತ್ರಾ ಮಹೋತ್ಸವದಲ್ಲಿ ಕಾರ್ಯ ಸಿದ್ದೇಶ್ವರನಿಗೆ ಹರಕೆಹೊತ್ತ ಭಕ್ತರು,ಪಂಜಿನ ಸೇವೆ, ಧೂಪ ದೀಪದ ಸೇವೆ ಬಾಯಿ ಬೀಗ ಸೇವೆಯನ್ನು ನೆರವೇರಿಸಿದರು. ಈ ಭಾಗದ ಸುತ್ತಮುತ್ತಲಿನ ರೈತರು ತಮ್ಮ ಜಾನುವಾರುಗಳನ್ನು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪೂಜೆಯನ್ನು ಸಲ್ಲಿಸಿದರು. ಚಿಕ್ಕ ಜಾತ್ರೆಯನ್ನು ಮಹಿಳೆಯರ ಜಾತ್ರೆ ಎಂದು ಕರೆಯಲಾಗುತ್ತದೆ. ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದು ಕಂಡುಬಂದಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ.ಬಸವರಾಜು ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
&&&&&&&&&&########&&&&&&&&&&
ಸಾಲ ಹಾಗೂ ಸಹಾಯಧನ ಯೋಜನೆಗಳು ವಿದೇಶದದಲ್ಲಿ ವ್ಯಾಸಂಗ ಮಾಡಲು ಸಾಲ ಸೌಲಭ್ಯವಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳಿ

ತಾಂಡವಪುರ ಅಕ್ಟೋಬರ್ 30ಸಾಲ ಹಾಗೂ ಸಹಾಯಧನ ಯೋಜನೆಗಳು ವಿದೇಶದದಲ್ಲಿ ವ್ಯಾಸಂಗ ಮಾಡಲು ಸಾಲ ಸೌಲಭ್ಯವಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳಿ
ಅರಿವು ವಿದ್ಯಾಭ್ಯಾಸ ಸಾಲ ಯೋಜನೆ – CET ಮತ್ತು NEET ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ. (₹50,000 ರಿಂದ ₹5.00 ಲಕ್ಷವರೆಗೆ)
2. ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ – ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ. (₹20.00 ಲಕ್ಷವರೆಗೆ)
3. ಸ್ವಾಲಂಬಿ ಸಾರಥಿ ಯೋಜನೆ – ಟ್ಯಾಕ್ಸಿ / ಸರಕು ಸಾಗಣೆ ವಾಹನ / ಆಟೋ ರಿಕ್ಷಾ ಖರೀದಿಗೆ ಸಹಾಯಧನ ಯೋಜನೆ. (₹75,000 ರಿಂದ ₹3.00 ಲಕ್ಷವರೆಗೆ)
4. ಶ್ರಮಶಕ್ತಿ ಯೋಜನೆ – ಸಣ್ಣ ವ್ಯಾಪಾರ ಪ್ರಾರಂಭಿಸಲು ಅಥವಾ ವಿಸ್ತರಿಸಲು. (₹50,000: ₹25,000 ಸಾಲ + ₹25,000 ಸಹಾಯಧನ)
5. ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ – ವಿಧವೆಯರು, ವಿಚ್ಛೇದಿತ ಮಹಿಳೆಯರು ಹಾಗೂ ವಿವಾಹವಾಗದ ಮಹಿಳೆಯರ ಆರ್ಥಿಕ ಸಬಲಿಕರಣಕ್ಕಾಗಿ. (₹50,000: ₹25,000 ಸಾಲ + ₹25,000 ಸಹಾಯಧನ)
6. ವೃತ್ತಿ ಪ್ರೋತ್ಸಾಹ ಯೋಜನೆ – ಸಣ್ಣ ವ್ಯಾಪಾರ/ಚಿಲ್ಲರೆ ಮಾರಾಟ / ರಿಪೇರಿ ಸೇವೆ ಪ್ರಾರಂಭಿಸಲು. (₹1.00 ಲಕ್ಷ: ₹50,000 ಸಾಲ + ₹50,000 ಸಹಾಯಧನ)
7. ಗಂಗಾ ಕಲ್ಯಾಣ ಯೋಜನೆ – ಬೋರ್‌ವೆಲ್ ತೋಡುವುದು, ಪಂಪ್‌ಸೆಟ್ ಅಳವಡಿಸುವುದು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು. (₹3.00 ಲಕ್ಷದಿಂದ ₹4.00 ಲಕ್ಷವರೆಗೆ ಸಹಾಯಧನ)
8. ನೇರ ವ್ಯವಹಾರ ಸಾಲ ಯೋಜನೆ – ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆ ಪ್ರಾರಂಭಿಸಲು. (₹20.00 ಲಕ್ಷವರೆಗೆ ಸಾಲ)
9. ಮಹಿಳಾ ಸ್ವಸಹಾಯ ಸಂಘಗಳ ಸಹಾಯಧನ ಯೋಜನೆ – ಸ್ವ ಉದ್ಯೋಗ ಚಟುವಟಿಕೆ ಕೈಗೊಳ್ಳಲು. (50% ಸಹಾಯಧನ, ₹2.00 ಲಕ್ಷವರೆಗೆ)
10. ಸಮುದಾಯ ಆಧಾರಿತ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳು – ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲು. ಈ ಯೋಜನೆಯನ್ನು ರೂಪಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರ ಸೇರುವ ಕಿರುಗುಂದ ಗ್ರಾಮದ ಕ್ರಿಶ್ಚಿಯನ್ಸ್ ಸಂಸ್ಥೆ ಮತ್ತು ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು
77602 61984: ಯೋಜನೆ ಗಳ ಬಗ್ಗೆ ಕ್ರಿಶ್ಚಿಯನ್ ಸಮುದಾಯಕ್ಕೆ ಮಾನ್ಯ ಮುಖ್ಯಮಂತ್ರಿ ಗಳ ಕನಸಿನ ಯೋಜನೆ ಗಳನ್ನು ಅವರ ಸ್ವಕ್ಷೆತ್ರ ವರುಣ ಹಾಡ್ಯ ಗ್ರಾಮ ಸಾಡೇ ಸ್ಮಾರಕ ದೇವಾಲಯದ ದಲ್ಲಿ ಪೋಸ್ಟರ್ ಲಾಂಚ್ ಮಾಡಯಿತು ಭಾಗವಹಿಸಿದ್ದವರು
ರೇಟ್ ರೆವೆಂಡ್ ಹೇಮಚಂದ್ರ ಕುಮಾರ್ ಬಿಷೋಪ್ ರವರು ಕರ್ನಾಟಕ ಕ್ರಿಶ್ಚಿಯನ್ ಅಭಿರುದ್ದಿ ನಿಗಮದ ನಿರ್ದೇಶಕರಾದ ಸಂದೀಪ್ ರವರು ಮೈಸೂರ್ ಏರಿಯಾ ಚೆರ್ಮೆನ್ ರೆವೆರೆಂಡ್ ವಿಕ್ಟರ್.ರೆವೆಂಡ್ ಎಲಿಶ್ ಕುಮಾರ್ ರೆವೆಂಡ್ ಕೆ ಪಿ ದೇವಕುಮಾರ್ ಮೈಸೂರ್ ಹಾರ್ಡ್ ವಿಕ್ ದೇವಾಲಯದ ಕೀರ್ತಿ. ಏನೋಷ್ ಆಬ್ರಹಮ್ ಲಿಂಕನ್ ಹಾಡ್ಯದ ಆಶೀರ್ವಾದ. ಶೋಭಾಲತಾ ರೇವಣ್ಣ. ದಾಸ್ ರೀಟಾ ಯೇಸುರತ್ನ. ಕಿರುಗುಂದ ದಿಂದ ಪ್ರಭ ರವರು ಭಾಗವಹಿಸಿದ್ದರು
