ಜ್ವಲಂತ ಸಮಸ್ಯೆಗಳ ವಿರುದ್ಧ ರೈತ ಸಂಘದ ಪದಾಧಿಕಾರಿಗಳು ಬದ್ಧತೆಯಿಂದ ಸಂಘಟಿತರಾಗಿ ಹೋರಾಟ ಮಾಡಬೇಕು 

ವಿಜಯ ದರ್ಪಣ ನ್ಯೂಸ್…

ಜ್ವಲಂತ ಸಮಸ್ಯೆಗಳ ವಿರುದ್ಧ ರೈತ ಸಂಘದ ಪದಾಧಿಕಾರಿಗಳು ಬದ್ಧತೆಯಿಂದ ಸಂಘಟಿತರಾಗಿ ಹೋರಾಟ ಮಾಡಬೇಕು

ಶಿಡ್ಲಘಟ್ಟ : ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ರೈತ ಸಂಘದ ಪದಾಧಿಕಾರಿಗಳು ಬದ್ಧತೆಯಿಂದ ಸಂಘಟಿತರಾಗಿ ಹೋರಾಟ ಮಾಡಬೇಕು ಜತೆಗೆ ಕೈ ಮತ್ತು ಬಾಯಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಅಧ್ಯಕ್ಷ ಜಿ.ಜಿ.ಹಳ್ಳಿ ಬಿ.ನಾರಾಯಣಸ್ವಾಮಿ ತಿಳಿಸಿದರು.

ನಗರದಲ್ಲಿ ಶ್ರೀ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದ ಸಮು ದಾಯ ಭವನದ ಸಭಾಂಗಣದಲ್ಲಿ ನಡೆದ ತಾಲ್ಲೂಕು ನೂತನ ಪದಾದಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ರೈತ ಹೋರಾಟ ವಿಚಾರದಲ್ಲಿಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಬಾರದು ಆಗ ಮಾತ್ರ ಹೋರಾಟಕ್ಕೆ ಜಯ ಸಾಧ್ಯ
ಶಿಡ್ಲಘಟ್ಟ ನಗರ ಹಳ್ಳಿಗಿಂತ ಕಡೆಯಾಗಿದೆ ಅಭಿವೃದ್ಧಿಯಲ್ಲಿ ಕಡಿಮೆ ಸಾದನೆ ಸಾಧಿಸಿದೆ ನಗರಸಭೆ ನಾಮ ಮಾತ್ರ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಕೆ ಮುನಿರಾಜು ಮಾತ ನಾಡಿ, ತಾಲೂಕಿನ ರೈತರ ಜ್ವಲಂತ ಸಮಸ್ಯೆಗಳ ಹೋರಾಟದ ಜತೆಗೆ ರೈತರ ಭೂಮಿಯನ್ನು ರಕ್ಷಿಸುವ ಸಲುವಾಗಿ ನ್ಯಾಯಯುತ ವಾಗಿ ಹೋರಾಟ ಮಾಡುವುದಾಗಿ ತಿಳಿಸಿದರು.
ಹಾಪ್ ಕಾಮ್ಸ್ ನಮ್ಮ ತಾಲ್ಲೂಕಿನಲ್ಲಿ 30 ಎಕರೆಯಲ್ಲಿ ನಿರ್ಮಾಣ ಮಾಡಲು ನಾವು ನಮ್ಮ ಸಂಘದಿಂದ ಸರ್ಕಾರಕ್ಕೆ ಒತ್ತಾಯ ಮಾಡಿದ್ದು ಈಗ 10 ಎಕರೆ ನೀಡಿದ್ದಾರೆ ಆದರೆ ಇದು ಸಾಲದು ಇನ್ನೂ 20 ಎಕರೆ ಭೂಮಿ ಬೇಕೆಂದು
ಸರ್ಕಾರಕ್ಕೆ ಸಂಘದಿಂದ ಒತ್ತಾಯಸಿದ್ದೇವೆ ಎಂದರು.

ಇದೇ ವೇಳೆ ಪದಾಧಿಕಾರಿಗಳ ಆಯ್ಕೆ ನಡೆಯಿತು ,
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಬಿ.ಕೆ.ಮುನಿರಾಜು, ಉಪಾಧ್ಯಕ್ಷ ಕೆಂಪೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಪ್ರಕಾಶ್, ಕಾನೂನು ಸಲಹೆಗಾರ ಪಿ.ಲಕ್ಷ್ಮಿಕಾಂತ್, ಖಜಾಂಚಿ ಎಂ.ಟಿ.ಶ್ರೀನಿವಾಸ್, ಮಹಿಳಾ ಪ್ರತಿನಿಧಿ ಎಸ್.ಎಂ.ಅಮೃತ,ಮಹಿಳಾ ಪ್ರತಿನಿಧಿ ಎನ್. ಗಾಯತ್ರಿ,ಸಂಘಟನಾ ಮಾರ್ಗದರ್ಶಕ ಎನ್.ವೆಂಕಟೇಶ್, ಪ್ರಧಾನ ಸಂಚಾಲಕ ಬಿ.ಕೆ.ಗೋವಿಂದರಾಜು, ಸಂಘಟನಾ ಸಂಚಾಲಕ ಶಿವಣ್ಣ, ಸಹಕಾರ್ಯದರ್ಶಿ ಬಿ.ಪಿ.ಸತೀಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಮುರಳಿಕುಮಾರ್, ಸದಸ್ಯರಾದ ಶಿವಣ್ಣ,ಆಂಜಿನಪ್ಪ, ಸತೀಶ್,ಬಸವರಾಜ್, ನಾಗೇಶ್, ನಾಸಿರ್ ಅಹಮದ್ ಆಯ್ಕೆಯಾದರು.