ದಿತ್ವಾ’ ಚಂಡಮಾರುತದ ಪರಿಣಾಮ: ನೆಲಕಚ್ಚಿದ ರಾಗಿ ಬೆಳೆ ರೈತ ಕಂಗಾಲು
ವಿಜಯ ದರ್ಪಣ ನ್ಯೂಸ್…
ದಿತ್ವಾ’ ಚಂಡಮಾರುತದ ಪರಿಣಾಮ: ನೆಲಕಚ್ಚಿದ ರಾಗಿ ಬೆಳೆ ರೈತ ಕಂಗಾಲು

ಶಿಡ್ಲಘಟ್ಟ : ತಾಲ್ಲೂಕಿನಾದ್ಯಂತ ‘ದಿತ್ವಾ’ ಚಂಡಮಾರುತದ ಪರಿಣಾಮ ವಿಪರೀತ ಚಳಿ ಹಾಗೂ ತುಂತುರು ಮಳೆಯ ವಾತಾವರಣ ನಿರ್ಮಾಣವಾಗಿದೆ ಮಳೆಯ ನೀರು ತೆನೆಗಳಲ್ಲೇ ತುಂಬಿಕೊಂಡಿರುವುದರಿಂದ ಈಗಾಗಲೇ ನಿಂತಿದ್ದ ಪೈರುಗಳು ನೆಲಕ್ಕೊರಗಿವೆ. ಹಲವು ರೈತರ ಹೊಲಗಳಲ್ಲಿ ಇಳುವರಿ ಬರದೇ, ಕೊಯ್ಲು ಮಾಡಲಾಗದೆ ರೈತರು ತೊಂದರೆ ಅನುಭವಿಸುವಂತಾಗಿದೆ.
ದಿತ್ವಾ ಚಂಡಮಾರುತದ ಪರಿಣಾಮವಾಗಿ ಕಳೆದ ಎರಡು ದಿನಗಳ ಹಿಂದೆ ಅಕಾಲಿಕ ಮಳೆಯಾಗುತ್ತಿದ್ದು, ರೈತರ ಜೀವನಕ್ಕೆ ತೀವ್ರ ಸಂಕಷ್ಟ ತಂದಿದೆ ಕೊಯ್ಲಿಗೆ ಬಂದಿದ್ದ ರಾಗಿ ಬೆಳೆ ಮಣ್ಣಿಗೆ ಒರಗಿ ಹಾಳಾಗುತ್ತಿರುವುದನ್ನು ಕಂಡು ರೈತರು ನಿರಾಶೆಯಲ್ಲಿ ಮುಳುಗಿದ್ದಾರೆ.
ತಾಲ್ಲೂಕಿನಾದ್ಯಂತ ಇದುವರೆಗೆ 12,256 ಹೆಕ್ಟೇರ್‌ಗಳಲ್ಲಿ ರಾಗಿ ಬಿತ್ತನೆ ನಡೆದಿದ್ದು, ಕೊಯ್ಲಿಗೆ ಬರದಿದ್ದ ಪ್ರದೇಶಗಳು ಹೆಚ್ಚಿನ ಹಾನಿಯಾಗಿದ್ದು,ಇನ್ನೂ ಐದಾರು ದಿನ ಮಳೆ ಮುಂದುವರಿದರೆ ತೆನೆಗಳಲ್ಲೇ ರಾಗಿ ಮೊಳೆಯುವ ಅಪಾಯ ಎದುರಿದೆ ಎಂದು ಕೃಷಿ ಇಲಾಖೆ ಎಚ್ಚರಿಸಿದೆ.
ಅಂತಿಮ ಹಂತದಲ್ಲಿರುವ ಬೆಳೆ ಹಾಳಾಗುತ್ತಿದ್ದಂತೆ ರೈತರ ಪರಿಶ್ರಮ ಮಣ್ಣಾಗುತ್ತಿದೆ ಮಳೆ ನೀರು ಸೇರ್ಪಡೆಯಾಗಿ ನೆಲ ಜಾರಿ, ಮಣ್ಣು ಮೆತ್ತಾಗಿ, ಕೊಯ್ದು ಯಂತ್ರಗಳು ಹೊಲಕ್ಕೆ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೆಲ ಕಡೆಗಳಲ್ಲಿ ಮಣ್ಣಿನ ವಾಸನೆಯಿಂದ ಹುಲ್ಲು ಕೂಡ ಮೇವಿಗೆ ಅಸಾಧ್ಯವಾಗುವ ಸ್ಥಿತಿ ಬಂದಿದೆ.
ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ರೈತರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ತುರ್ತು ಪರಿಹಾರ, ಹಾನಿ ಮೌಲ್ಯಮಾಪನ ಮತ್ತು ಪರಿಹಾರ ಧನಕ್ಕಾಗಿ ಸರ್ಕಾರದ ಕಡೆ ನೋಡುವಂತಾಗಿದೆ.
ಚಂಡಮಾರುತದ ಮಳೆಯಿಂದ ಬೆಳೆಯೆಲ್ಲಾ ನೆಲಕ್ಕೊರಗಿ ರಾಗಿಗೆ ಮಣ್ಣು ಮೆತ್ತಿರುವುದರಿಂದ ಮೇವಿಗೂ ಬಳಸಲು ಆಗುವುದಿಲ್ಲ ರೈತರ ಶ್ರಮವೆಲ್ಲಾ ವ್ಯರ್ಥವಾಗಿದೆ.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ರಕ್ತದಾನ, ಆರೋಗ್ಯ ಬಗ್ಗೆ ಅರಿವು ಅಗತ್ಯ: ಡಾ.ಜಿ.ಮುರಳಿ ಆನಂದ್

ಶಿಡ್ಲಘಟ್ಟ : ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ರಕ್ತದಾನದ ಕುರಿತ ಜ್ಞಾನ, ಭಯ ನಿವಾರಣೆ, ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವುದಲ್ಲದೆ ರಕ್ತದ ಕೊರತೆ ನೀಗಿಸುವಲ್ಲಿ ನೆರವಾಗುವುದಾಗಿದೆ ಎಂದು ಪ್ರಾಂಶುಪಾಲ ಡಾ.ಜಿ.ಮುರಳಿ ಆನಂದ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುವುದರ ಉದ್ದೇಶ ವಿದ್ಯಾರ್ಥಿಗಳಲ್ಲಿ ರಕ್ತದಾನದ ಕುರಿತು ಅರಿವು ಮೂಡಿಸುವುದು ,ರಕ್ತದಾನದ ಮಹತ್ವ, ಅದರ ಪ್ರಯೋಜನಗಳು ಮತ್ತು ಅಗತ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟ ಕಲ್ಪನೆ ನೀಡುವುದಾಗಿದೆ ಎಂದು ಹೇಳಿದರು.
ಭವಿಷ್ಯದ ನಾಗರಿಕರಲ್ಲಿ ಸಮಾಜಸೇವೆ, ಮಾನವೀಯತೆ ಮತ್ತು ವೈದ್ಯಕೀಯ ಅಗತ್ಯಗಳ ಬಗ್ಗೆ ಕಾಳಜಿಯನ್ನು ಬೆಳೆಸಲು ಈ ಶಿಬಿರ ನೆರವಾಗಿದೆ ಎಂದರು.ಶಿಬಿರದಲ್ಲಿ 40 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ರಕ್ತದಾನ ಶಿಬಿರದ ಸಂಘಟನಾ ಸಂಚಾಲಕ ಡಾ.ಷಫಿ ಅಹಮದ್, ಸಂಚಾಲಕಿ ಡಾ.ಎಂ.ಸುನಿತಾ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ, ಡಾ.ಎನ್.ವಿ.ಆದಿನಾರಾಯಣಪ್ಪ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಸಾಮೂಹಿಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಪ್ರತೀಶ್, ಕರವೇ ತಾಲ್ಲೂಕು ಅಧ್ಯಕ್ಷ ಸುನಿಲ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲ್ಲೂಕು ಅಧ್ಯಕ್ಷ ರಾಮಾಂಜನೇಯ, ಎನ್.ಎಸ್.ಎಸ್ ಮತ್ತು ಭಾರತ್ ಸ್ಕೌಟ್ಸ್ ಗೈಡ್ಸ್ ಘಟದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
