ಸುತ್ತೂರು ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ಕುಸ್ತಿ ಮನುಷ್ಯನ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗಲಿದೆ ಶಾಸಕ ರಿಜ್ವಾನ್ ಹರ್ಷದ್
ವಿಜಯ ದರ್ಪಣ ನ್ಯೂಸ್…..
ಸುತ್ತೂರು ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ಕುಸ್ತಿ ಮನುಷ್ಯನ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗಲಿದೆ ಶಾಸಕ ರಿಜ್ವಾನ್ ಹರ್ಷದ್

ಪಾಂಡವಪುರ ಜನವರಿ 19 ಸುತ್ತೂರು ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ ಸುತ್ತೂರು ಜಾತ್ರೆಯಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಶಾಸಕ ರಿಜ್ವಾನ್ ಹರ್ಷದ್ ಚಾಲನೆ ನೀಡಿ ಇಂತಹ ಕುಸ್ತಿ ಪಂದ್ಯಾವಳಿಗಳು ಮನುಷ್ಯನ ಆರೋಗ್ಯಕ್ಕೆ ಬಹಳ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು
ಅವರು ಇಂದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಸುತ್ತೂರು ಜಾತ್ರ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡುತ್ತಾ ಸುತ್ತೂರು ಜಾತ್ರೆಯಲ್ಲ. ಸರ್ವ ಧರ್ಮಗಳನ್ನು ಒಗ್ಗೂಡಿಸುವ ಜಾತ್ರೆಯಾಗಿದೆ ಎಂದು ಶಾಸಕ ರಿಜ್ವಾನ್ ಹರ್ಷಿದ್ ಸುತ್ತೂರು ಶ್ರೀ ಕ್ಷೇತ್ರದ ಸೇವೆಯನ್ನು ಸ್ಮರಿಸಿಕೊಂಡು ಸುತ್ರು ಶ್ರೀಗಳ ಸೇವೆಗೆ ಮೆಚ್ಚಿಗೆ ವ್ಯಕ್ತಪಡಿಸಿ ನಾನು ಕೂಡ ನನ್ನ ಕ್ಷೇತ್ರದಲ್ಲಿ ಇಂತಹ ಕುಸ್ತಿ ಪಂದ್ಯಾವಳಿಗೆ ಒಂದು ಕೋಟಿ ರೂ ಇಟ್ಟಿದ್ದೇನೆ ಎಂದು ಸಮಾರಂಭದಲ್ಲಿ ತಿಳಿಸಿದರು
ಸುತ್ತೂರು ಜಾತ್ರೆಯಲ್ಲಿ ಸೋಮವಾರ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ 44ನೇ ವರ್ಷದ 80 ಜೊತೆ ನಾಡ ಕುಸ್ತಿ ಪಂದ್ಯಾವಳಿಯನ್ನು ನಡೆಯುತ್ತಿದ್ದು
ನಾನು ಪ್ರತಿವರ್ಷವು ಸುತ್ತೂರು ಜಾತ್ರೆಗೆ ಬಹಳ ಉತ್ಸಾಹದಿಂದ ಬರುತ್ತೇನೆ. ಶ್ರೀಗಳ ಪ್ರೀತಿ ವಿಶ್ವಾಸ ಸದಾಕಾಲ ಇಟ್ಟಿದ್ದಾರೆ.
ಸುತ್ತೂರು ಜಾತ್ರೆ ಈ ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಬಹುಮುಖ್ಯ ಜಾತ್ರೆಗಳಲ್ಲಿ ಒಂದು. ಸಮಾಜದ ಜನರ ಚರ್ಚೆ ಮಾಡುವ ಜಾತ್ರೆ. ರೈತರು,ಯುವಕರು, ವಿಜ್ಞಾನ ಪ್ರದರ್ಶನಗಳು ಜೊತೆಗೆ ಸಂದೇಶವನ್ನ ತಿಳಿಸುತ್ತದೆ. ಜಾತ್ರೆಯಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ ರಾಷ್ಟ್ರಮಟ್ಟದ ಪಂದ್ಯಾವಳಿಯಾಗಿದೆ. ಕುಸ್ತಿ ಪಂದ್ಯಾವಳಿಯನ್ನು ಶ್ರೀಗಳ ಕುಳಿತು ವೀಕ್ಷಿಸುತ್ತಿರುವುದು ಒಂದು ದೊಡ್ಡ ಶಕ್ತಿಯಾಗಿದೆ.
ಮೈಸೂರು ಬಿಟ್ಟರೆ ಬೆಂಗಳೂರಿನ ಶಿವಾಜಿನಗರದಲ್ಲಿ ಕುಸ್ತಿ ಅಖಾಡಗಳು ಇವೆ. ಯುವ ಜನತೆ ಕ್ರೀಡೆಯ ಬಗ್ಗೆ ಆಸಕ್ತಿ ವಹಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಒಂದು ಕೋಟಿ ವೆಚ್ಚದಲ್ಲಿ ಇನ್ವೆಸ್ಟ್ ಮಾಡಿದ್ದೇನೆ. ಇತ್ತೀಚಿಗೆ ಯುವಕರು ಮಾದಕ ವಸ್ತುಗಳಿಗೆ ಕೊಲೆಯಾಗುತ್ತಿದ್ದಾರೆ. ಇಂತಹ ಕ್ರೀಡೆಗಳನ್ನು ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತದೆ ಎಂದರು.
ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವ ನಾರಾಯಣ್ ರವರು ಮಾತನಾಡಿ ಸುತ್ತೂರು ಶ್ರೀಗಳ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇದ್ದು ಅವರ ಆಶೀರ್ವಾದ ಹಿನ್ನೆಲೆಯಲ್ಲಿ ನಾನು ಇವತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಇದಕ್ಕೆ ನಾನು ಸುತ್ತೂರು ಮಠದ ಸ್ವಾಮೀಜಿಗಳಿಗೆ ನಾವು ಋಣಿಯಾಗಿರುತ್ತೇವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಸುತ್ತೂರು ಜಾತ್ರೆಯಲ್ಲಿ ಕೃಷಿ ವಿಜ್ಞಾನ ದೇಶ ಆಟಗಳ ಜೊತೆಗೆ ಕುಸ್ತಿ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗಿದ್ದು ಸಾಕಷ್ಟು ಆಕರ್ಷಣೀಯ ಕೇಂದ್ರವಾಗಿದೆ. ಶ್ರೀಗಳು ಕೇವಲ ಜಾತ್ರೆ ಆಗಬಾರದು ಎಂಬ ಉದ್ದೇಶದಿಂದ ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಮಾಹಿತಿ ನೀಡುವ ಸ್ಥಳವನ್ನಾಗಿ ಬದಲಾವಣೆ ಮಾಡಿದ್ದಾರೆ. ಮೈಸೂರು ಮಹಾರಾಜರ ಕಾಲದಿಂದಲೂ ಕುಸ್ತಿ ಪಂದ್ಯಾವಳಿಗಳು ಮಾನ್ಯತೆ ಪಡೆದಿದ್ದೇವೆ. ಇತ್ತೀಚಿಗೆ ಯುವಕರು ರೇಸ್ ಕೋರ್ಸ್ ಗಳಿಗೆ ಹೋಗಿ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಡ್ರಗ್ಸ್ ಜಾಲಗಳಿಗೂ ಬಲಿಯಾಗುತ್ತಿದ್ದಾರೆ. ಇಂತಹ ಕ್ರೀಡೆಗಳನ್ನು ಹೆಚ್ಚಾಗಿ ಆಯೋಜನೆ ಮಾಡುವ ಮೂಲಕ ಯುವಕರಿಗೆ ಶ್ರೀಗಳು ಸ್ಪೂರ್ತಿ ತುಂಬುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ಪೊಲೀಸ್ ಅಧೀಕ್ಷಕ ಮುತ್ತುರಾಜ್, ಶಾಸಕ ದರ್ಶನ್, ಧ್ರುವನಾರಾಯಣ್ ಮಾಜಿ ಶಾಸಕ ಹರ್ಷವರ್ಧನ್, ನಿಕಟ ಪೂರ್ವ ಬಸವ ಸೇನೆ ಅಧ್ಯಕ್ಷ ಪ್ರದೀಪ್ ದೊಡ್ಡ ಸ್ವಾಮಿಗೌಡ ಕುಮಾರ್, ಡಾ. ದತ್ತೀಸ್, ಡಾ. ಶಿವರಾಜಪ್ಪ, ಮಾಜಿ ಶಾಸಕಿ ಪರಿಮಳ ನಾಗಪ್ಪ, ರವಿಕುಮಾರ್ ಸೇರಿದಂತೆ ಮಲ್ಲನ ಮೂಲೆ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
