ನಾಡಿನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರು ವಿಶ್ವಮಾನವ ಕುವೆಂಪು : ಶಾಸಕ ದರ್ಶನ್ ಧ್ರುವ ನಾರಾಯಣ್
ವಿಜಯ ದರ್ಪಣ ನ್ಯೂಸ್….
ನಾಡಿನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರು ವಿಶ್ವಮಾನವ ಕುವೆಂಪು : ಶಾಸಕ ದರ್ಶನ್ ಧ್ರುವ ನಾರಾಯಣ್

ತಾಂಡವಪುರ ಜನವರಿ 24 : ನಾಡಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಹೆಗ್ಗಳಿಕೆ ಕುವೆಂಪುರವರಿಗೆ ಸಲ್ಲುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು
ಅವರು ಇಂದು ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂಜನಗೂಡಿನ ದಕ್ಷಿಣ ಕಾಶಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 122ನೇ ಕುವೆಂಪುರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ದರ್ಶನ್ ಧ್ರುವ ನಾರಾಯಣ್ ಅವರು ನಾಡಿಗೆ ಹಾಗೂ ಸಮಾಜಕ್ಕೆ ಅಪಾರ ಕೊಡಿಗೆ ನೀಡಿದ ಹೆಗ್ಗಳಿಕೆ ಕುವೆಂಪುರವರಿಗೆ ಸಲ್ಲುತ್ತದೆ ಇವರು 18ನೇ ವಯಸ್ಸಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿ ತಾವು ಇಹಲೋಕ ತ್ಯಜಿಸುವವರೆಗೂ ಕನ್ನಡಕ್ಕೆ ಸಾಹಿತ್ಯಕ್ಕೆ ಅಪಾರ ಕಥೆ ಕಾದಂಬರಿ ನೀಡಿ ಇಡಿ ವಿಶ್ವಕ್ಕೆ ವಿಶ್ವಮಾನವ ಎಂಬ ಹೆಸರು ಗಳಿಸಿದ್ದಾರೆ.
ಇವರು ಹಾಕಿಕೊಟ್ಟ ಸಾಹಿತ್ಯ ಕ್ಷೇತ್ರವನ್ನು ನಾವೆಲ್ಲ ಈಗಿನ ಯುವಕರು ಅಳವಡಿಸಿಕೊಳ್ಳಬೇಕು ಹೆಚ್ಚು ಹೆಚ್ಚು ಸಾಹಿತ್ಯಗಳನ್ನು ಬರೆಯಬೇಕು ಎಂದು ತಿಳಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯ ಪರಿಷತ್ ಭವನಕ್ಕೆ ಸ್ಥಳವನ್ನು ನೀಡಿ ಎಂದು ಮನವಿ ಮಾಡಿದ್ದಾರೆ ನಗರಸಭಾ ವ್ಯಾಪ್ತಿಯಲ್ಲಿ ಬರುವ ಸಿಎ ನಿವೇಶನವನ್ನು ನೀಡುವಂತೆ ನಾನು ಈಗಾಗಲೇ ನಗರಸಭೆಯ ಆಯುಕ್ತರಿಗೆ ಸೂಚಿಸಿದ್ದೇನೆ ಆದಷ್ಟು ಬೇಗ ನಮ್ಮ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಸಹಕಾರ ನೀಡುತ್ತೇನೆಂದು ಹೇಳಿದರು. ಇದೇ ಸಂದರ್ಭದಲ್ಲಿ ಅವರ ತಂದೆ ಮಕ್ಕಳೊಂದಿಗೆ ಇದ್ದ ಭಾವಚಿತ್ರವನ್ನು ಕನ್ನಡ ಸಾಹಿತ್ಯ ಪರಿಷತ್ ನೀಡಿ ಗೌರವಿಸಲಾಯಿತು ಅವರು ಬಹಳ ಸಂತೋಷ ಪಟ್ಟರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ ಡಿ ರಾಜಣ್ಣ ಮಾತನಾಡಿ ಕುವೆಂಪುರವರು ತಮ್ಮದೇ ಕನ್ನಡ ಕ್ಷೇತ್ರಕ್ಕೆ ಸಾಹಿತ್ಯ ಕ್ಷೇತ್ರಕ್ಕೆ ಚಾಪನ್ನ ಮೂಡಿಸಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಸಲ್ಲುತ್ತದೆ ರಾಮಾಯಣ ದರ್ಶನಂ ಅತ್ಯಂತ ಮನೋಜ್ಞವಾಗಿ ರಚಿಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಡಿಕೆರೆ ಗೋಪಾಲ ರವರು ಮಾತನಾಡಿ ಕುವೆಂಪುರವರು ತಮ್ಮ ಚಿಕ್ಕವಯಸ್ಸಿನಿಂದಲೇ ಸಾಹಿತ್ಯಕ್ಕೆ ಕವನಗಳನ್ನು ಬರೆಯುವುದರ ಮೂಲಕ ಪ್ರಾರಂಭ ಮಾಡಿ ಕಾದಂಬರಿ ನಾಟಕಕ್ಕೆ ಪೂರಕವಾದ ಕಥೆಗಳನ್ನು ಬರೆದು ವಿಶ್ವಕ್ಕೆ ಮಾದರಿಯಾದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಚಿಕ್ಕ ರಂಗ ನಾಯಕ ತಾಲೂಕು ಘಟಕದ ಅಧ್ಯಕ್ಷ ಲತಾಮುದ್ದು ಮೋಹನ್ ಮಾತನಾಡಿ ಕಳೆದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೇ ತಿಂಗಳು ಗೀತ ಗಾಯನ ಸ್ಪರ್ಧೆಯನ್ನು ಗುರುಭವನದಲ್ಲಿ ಆಯೋಜಿಸಿ, ವಿಜೇತರಾದ ಮಕ್ಕಳಿಗೆ ಶಾಸಕರಿಂದ ಬಹುಮಾನ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಶ್ರೀಧರ್. ಕಾಸ ಪಾದ ಪದಾಧಿಕಾರಿಗಳಾದ ಕಸಬಾ ಹೋಬಳಿ ಅಧ್ಯಕ್ಷ ಸತೀಶ್ ದಳವಾಯ್ ಮಂಜುಳಾ ಮಂಜುನಾಥ. ಪ್ರಭಾಕರ್ ಸತೀಶ್ ಮುಂತಾದವರು ಭಾಗವಹಿಸಿದ್ದರು.
