ಕೃಷಿ ಇಲಾಖೆಯಲ್ಲಿ ಸಮರ್ಪಕ ಸೇವೆಗೆ ಒತ್ತಾಯಿಸಿ ರೈತ ಸಂಘಟನೆಯಿಂದ ಪ್ರತಿಭಟನೆ
ವಿಜಯ ದರ್ಪಣ ನ್ಯೂಸ್……
ಕೃಷಿ ಇಲಾಖೆಯಲ್ಲಿ ಸಮರ್ಪಕ ಸೇವೆಗೆ ಒತ್ತಾಯಿಸಿ ರೈತ ಸಂಘಟನೆಯಿಂದ ಪ್ರತಿಭಟನೆ

ತಾಂಡವಪುರ ಮೈಸೂರು ಜನವರಿ 31 : ಕೃಷಿಇಲಾಖೆಯಲ್ಲಿ ಸಮರ್ಪಕ ಸೇವೆ ಸಿಗುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಶನಿವಾರ ನಂಜನಗೂಡಿನ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿ ಕೃಷಿ ಅಧಿಕಾರಿ ವಿರುದ್ಧ ದಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕೃಷಿಗೆ ಬೇಕಾದ ಪರಿಕರಗಳು, ಬಿತ್ತನೆ ಬೀಜ. ಮತ್ತು ಸರ್ಕಾರದ ಪ್ರಾಯೋಗಿಕ ಕಾರ್ಯಕ್ರಮವಾದ ರಾಗಿ ಪ್ರಾತ್ಯಕ್ಷಿತೆಗೆ ನೀಡುವ ಬಗೆ ತಾಲೂಕಿನಲ್ಲಿ ಸರಿಯಾಗಿ ಪ್ರಚಾರ ಮಾಡದೇ, ಸಮರ್ಪಕ ಮತ್ತು ಕಟ್ಟ ಕಡೆಯ ರೈತರಿಗೆ ಈ ಸೌಲಭ್ಯ ಕೊಡುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಭಟಿಸಲಾಯಿತು.
ತಾಲೂಕಿನಲ್ಲಿ ಕೃಷಿ ಇಲಾಖೆ ಇದೆಯೋ ಇಲ್ಲವೇ ಎಂಬತ್ತಾಗಿದೆ. ಸಮರ್ಪಕವಾದ ಇಲಾಖೆಯ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಸರಿಯಾಗಿ ಪ್ರಚಾರ ಮಾಡುತ್ತಿಲ್ಲ. ಬಂಡವಾಳ ಶಾಹಿಗಳು ಮತ್ತು ಶ್ರೀಮಂತ ರೈತರ ಜೊತೆ ತಾಲೂಕಿನ ಕೃಷಿ ಅಧಿಕಾರಿಗಳು ಸಂಪರ್ಕವನ್ನು ಹೊಂದಿ ಅಮಾಯಕ ಮತ್ತು ಬಡ ರೈತರಿಗೆ ಸೌಲಭ್ಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ.
ಇಲಾಖೆ ಯೋಜನೆಗಳನ್ನು ನಾಮಫಲಕ ಹಾಕುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನ ಪ್ರಚಾರ ಮಾಡುತ್ತಿಲ್ಲ. ರೈತ ಸ್ನೇಹಿತ ಇಲಾಖೆ ಆಗಿ ಆಡಳಿತ ಮಾಡದೆ ಸಮರ್ಪಕವಾಗಿ ರೈತರಿಗೆ ಸೌಲಭ್ಯ ದೊರಕಿಸಿ ಕೊಡುವಲ್ಲಿ ಸಂಪೂರ್ಣವಾಗಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಸ್ಪಿಂಕ್ಲರ್ ಮತ್ತು ಹನಿ ನೀರಾವರಿಗೆ ಅರ್ಜಿ ಹಾಕಿರುವ ರೈತರಿಗೆ ಸಮರ್ಪಕವಾಗಿ ಸವಲತ್ತು ನೀಡುತ್ತಿಲ್ಲ.
ಮುಂದಿನ ದಿನಗಳಲ್ಲಿ ಇಲಾಖೆಯ ಸಂಬಂಧ ಪಟ್ಟಂತ ಎಲ್ಲಾ ಕಾರ್ಯಕ್ರಮಗಳನ್ನು ಹೆಚ್ಚಿನ ಮಟ್ಟದಲ್ಲಿ ಪ್ರಚಾರ ನೀಡಬೇಕು.
ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕ್ರಮ ಕೈಗೊಳ್ಳಬೇಕು.ಮುಂದಿನ ದಿನಗಳಲ್ಲಿ ಇದೆ ರೀತಿ ಮುಂದುವರೆದರೆ ಇಲಾಖೆಗೆ ಬೀಗ ಮುದ್ರೆ ಹಾಕುವ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ,
ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್, ಜಿಲ್ಲಾ ಉಪಾಧ್ಯಕ್ಷ ದೇವನೂರು ನಾಗೇಂದ್ರಸ್ವಾಮಿ, ತಾಲೂಕು ಅಧ್ಯಕ್ಷ ಮುದ್ದಳ್ಳಿ ಮಧು, ಸಂಚಾಲಕ ಚಿದಂಬರ, ಜಗದೀಶ್, ಮುದ್ದಹಳ್ಳಿ ಶಿವಣ್ಣ,ಮಲ್ಲಣ್ಣ,
ದೇವಿರಮ್ಮನಹಳ್ಳಿ ಸಿದ್ದು, ಬಸಪ್ಪ,ಪ್ರಭು, ಸೇರಿದಂತೆ 50 ಕ್ಕೂ ರೈತರು ಹಾಜರಿದ್ದರು.
