--Ads--

ಶ್ರೀಕಂಠೇಶ್ವರ ದೇವಾಲಯಕ್ಕೆ ಹರಿದು ಬಂದ ಭಕ್ತಸಾಗರ

On: February 1, 2026 5:30 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶ್ರೀಕಂಠೇಶ್ವರ ದೇವಾಲಯಕ್ಕೆ ಹರಿದು ಬಂದ ಭಕ್ತಸಾಗರ

ತಾಂಡವಪುರ  ಫೆಬ್ರವರಿ 1 ದಕ್ಷಿಣ ಕಾಶಿ ಎಂದೆ ಹೆಸರುವಾಸಿಯಾಗಿರುವ ನಂಜನಗೂಡಿನ ಇತಿಹಾಸ ಹೊಂದಿರುವ ಶ್ರೀಕಂಠೇಶ್ವರ ದೇವಾಲಯಕ್ಕೆ ಹುಣ್ಣಿಮೆ ಮತ್ತು ರಜಾದಿನ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರ ದರ್ಶನ ಪಡೆದರು.

ಸರ್ಕಾರದ ಶ್ರೀ ಶಕ್ತಿ ಯೋಜನೆ ಪರಿಣಾಮವಾಗಿ ಹೆಚ್ಚಾಗಿ ಮಹಿಳಾಭಕ್ತರೇಹಲವಾರು ಜಿಲ್ಲೆಗಳು ಗ್ರಾಮಗಳು ತಾಲೂಕುಗಳಿಂದ ಬಂದಂತಹ ಭಕ್ತಾದಿಗಳು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಕಪಿಲಾ ನದಿಯಲ್ಲಿ ಮಿಂದು ಗಂಗೆ ಪೂಜೆ ಸಲ್ಲಿಸಿದರು.

ಭಕ್ತಾದಿಗಳು ಕಪಿಲಾ ನದಿಯಲ್ಲಿ ಮಿಂದು ದೇವಸ್ಥಾನದ ಸುತ್ತ ಉರುಳು ಸೇವೆ ಮಾಡಿ ಮತ್ತು ಸೇವೆಗಳಾದ ಮುಡಿಸೇವೆ ಧೂಪದ ಸೇವೆ ಬಿಲ್ಪತ್ರೆ ಸೇವೆ ಬೆಲ್ಲದ ಸೇವೆ ಅಕ್ಕಿ ಸೇವೆ ಈ ರೀತಿ ಹಲವಾರು ಸಭೆಗಳನ್ನು ಮಾಡಿ ಪೂಜೆ ಸಲ್ಲಿಸಿದರು

ಹುಣ್ಣಿಮೆ ಮತ್ತು ಭಾನುವಾರ ರಜೆ ಇರುವುದರಿಂದ ನಿರೀಕ್ಷೆಗೂ ಮೀರಿ ಭಕ್ತಾದಿಗಳು ದೇವರ ದರ್ಶನಕ್ಕೆ ಆಗಮಿಸಿದರು
ನೂತನವಾಗಿ ಬಂದಿರುವ ಕಾರ್ಯನಿರ್ವಾಧಿಕಾರಿ ಕೃಷ್ಣ ಅವರು ಬಂದಂತಹ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು ಎಂದಿನಂತೆ ಅಡ್ಡ ದಡ್ಡಿ ದೇವರ ದರ್ಶನಕ್ಕೆ ಹೋಗುತ್ತಿದ್ದ ಭಕ್ತಾದಿಗಳಿಗೆ ಇಂದು ಕಡಿವಾಣ ಹಾಕಿ ನಾಕಾ ಮೂಲೆ ಗೇಟ್ಗಳನ್ನು ನಿರ್ಮಿಸಿ ಯಾರೂ ಕೂಡ ಹೋಗದಂತೆ ಕಡಿವಾಣ ಹಾಕಿದ್ದರು . ಜೊತೆಗೆ ಹೆಚ್ಚಿನ ಪೊಲೀಸ್ ಬಂದ ಬಸ್ ಮಾಡಲಾಗಿತ್ತು . ಇದಲ್ಲದೆ ದೇವಾಲಯಕ್ಕೆ ಸಂಬಂಧಪಟ್ಟ ಸೆಕ್ಯೂರಿಟಿ ಗಾರ್ಡುಗಳನ್ನು ಮತ್ತು ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಎಲ್ಲೆಲ್ಲಿ ಇರಬೇಕು ಅವರು ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಅದರಂತೆ ಅವರು ಕೂಡ ಅವರ ಇರುವ ಸ್ಥಳದಲ್ಲೇ ಕೆಲಸ ಮಾಡಿ ಭಕ್ತಾದಿಗಳಿಗೆ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ನಿರೀಕ್ಷೆಗೂ ಮೀರಿ ಭಕ್ತಾದಿಗಳು ಬಂದಿರುವುದರಿಂದ ಆದಷ್ಟು ಬಿಸಿಲಿನ ತಾಪದಿಂದ ರಕ್ಷಿಸಲು ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು . ಇದರ ಜೊತೆಗೆ ಬಾಯಾರಿಕೆ ಹೋಗಲಾಡಿಸಲು ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಯಿತು
ಈ ಬಾರಿ ವಿಶೇಷವೇನೆಂದರೆ , ಭಕ್ತಾದಿಗಳು ನೂರು ರೂಪಾಯಿ ಕೊಟ್ಟು ಟಿಕೆಟ್ ಪಡೆದು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಹೋಗುತ್ತಿದ್ದರು ಆ ಟಿಕೆಟ್ಗೆ ಲಾಡು ವಿತರಣೆ ಅವಕಾಶವಿತ್ತು ಆದರೆ ದರ್ಶನ ಮುಗಿದುಕೊಂಡು ಬಂದ ಮೇಲೆ ಲಾಡು ಪಡೆಯಬೇಕಾಗಿತ್ತು .

ಇದರಿಂದ ಹಲವಾರು ಭಕ್ತಾದಿಗಳು ಲಾಡು ಪಡೆಯದೆ ಟಿಕೆಟ್ ಬಿಸಾಕಿ ಹೋಗುತ್ತಿರುವುದು ಗಮನಕ್ಕೆ ಬಂದಿತ್ತು ಇದನ್ನು ಅರಿತ ನೂತನ ಕಾರ್ಯನಿರ್ವಾಧಿಕಾರಿ ಕೃಷ್ಣ ಅವರು ಏನಾದರೂ ಮಾಡಿ ಪ್ರತಿ 100 ರೂಪಾಯಿ ಟಿಕೆಟ್ಗೆ ಪಡೆದ ಭಕ್ತಾದಿಗಳಿಗೆ ಲಾಡು ತಲುಪಿಸಬೇಕೆಂದು ನಿರ್ಧರಿಸಿ ದೇವಾಲಯದ ಮುಂಭಾಗದಿಂದ ಭಕ್ತಾದಿಗಳು ಸಾರಥಿ ಸಾಲಿನಲ್ಲಿ ನಿಂತಿರುವಾಗಲೇ ಅವರಿಗೆ ಲಾಡು ಪ್ರಸಾದ ತಲುಪಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ನೂತನ ವ್ಯವಸ್ಥೆಯಿಂದ ಪ್ರತಿಯೊಬ್ಬರ ಭಕ್ತಾದಿಗಳಿಗೂ ಲಾಡು ತಲುಪುವಂತೆ ಆಗಿದೆ ಏನಾದರೂ ಉಳಿದ ಭಕ್ತಾದಿಗಳು ಧರ್ಮ ದರ್ಶನ ಪಡೆದ ಭಕ್ತಾದಿಗಳಿಗೆ ಎಂದಿನಂತೆ ದೇವಸ್ಥಾನದ ಮುಂಭಾಗದಲ್ಲೇ ಲಾಡು ಕೌಂಟರ್ ನಲ್ಲಿ ಲಾಡು ಪಡೆಯಬಹುದಾಗಿತ್ತು . ಇದರಿಂದ ಭಕ್ತಾದಿಗಳು ಈ ವ್ಯವಸ್ಥೆ ಸರಿ ಇದೆ ಎಂದು ಹೇಳುವುದು ಕೇಳಿ ಬಂತು.

ದೇವಾಲಯ ವತಿಯಿಂದ ಪ್ರತಿ ಬಾರಿಯೂ ಕೂಡ ಚಿಕ್ಕ ಚಿಕ್ಕ ಮಕ್ಕಳ ಬಗ್ಗೆ ಸರತಿ ಸಾಲಿನಲ್ಲಿ ನಿಲ್ಲುವ ಬಗ್ಗೆ ಕಪಿಲಾ ನದಿಯಲ್ಲಿ ಭಕ್ತಾದಿಗಳು ಎಚ್ಚರಿಕೆಯಿಂದ ಇರುವ ಬಗ್ಗೆ ತಮ್ಮ ಒಡವೆ ಬಟ್ಟೆಗಳ ಬಗ್ಗೆ ದೇವರ ದರ್ಶನಕ್ಕೆ ಯಾವ ರೀತಿ ಹೋಗಬೇಕು ಸೇರಿದಂತೆ ಹಲವಾರು ಸೂಚನೆಗಳನ್ನು ಪ್ರತಿ ಸೆಕೆಂಡಿಗೆ ಒಂದು ಬಾರಿ ತಿಳಿಸಲಾಗುತ್ತಿತ್ತು.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪೊಲೀಸ್ ಇಲಾಖೆಗೆ ಇದನ್ನು ತಡೆಯಲು ಅರ ಸಾಹಸ ಪಡೆಯುವಂತಾಯಿತು . ಊಟ ಉಪಚಾರಗಳನ್ನು ಬಿಟ್ಟು ಕಾರ್ಯನಿರ್ವಾಧೀಕಾರಿ ಕೃಷ್ಣ ಸೇರಿದಂತೆ ಸೆಕ್ಯೂರಿಟಿ ಗಾರ್ಡ್ ಗಳು ಪೊಲೀಸ್ ಇಲಾಖೆಯವರು ದೇವಾಲಯ ನೌಕರರು ಇವರುಗಳು ಊಟನೂ ಮಾಡದೆ ಭಕ್ತಾದಿಗಳ ದರ್ಶನಕ್ಕೆ ಅನುವು ಮಾಡಿಕೊಡುವ ಕೆಲಸದಲ್ಲೇ ಇದ್ದರು.
ದೇವಾಲಯ ಆಡಳಿತ ಮಂಡಳಿ ಬಂದಂತಹ ಎಲ್ಲಾ ಭಕ್ತಾದಿಗಳಿಗೆ ದಾಸೋಹ ಭವನದಲ್ಲಿ ಪ್ರತಿಯೊಬ್ಬ ಭಕ್ತಾದಿಗಳಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಅಲ್ಲೂ ಕೂಡ ಮಿತಿಮೀರಿದ ಭಕ್ತಾದಿಗಳು ತಲ್ಲಾಟ ನು ಕಾಟದಿಂದ ನಿಂತು ಪ್ರಸಾದ ಸ್ವೀಕರಿಸಿದರು.

ಇದಲ್ಲದೆ ಭಕ್ತಾದಿಗಳಿಗೆ ದೇವಾಲಯ ಮುಂಭಾಗ ಹಲವಾರು ಸಂಘ ಸಂಸ್ಥೆಗಳು ಬೆಳಗೆ ಯಿಂದ ಮಧ್ಯಾಹ್ನ ತನಕ ಕೂಡ ಪ್ರಸಾದ ನೀಡುತ್ತಿದ್ದರು

ಒಟ್ಟಾರೆ ನೂತನ ದೇವಾಲಯದ ಕಾರ್ಯನಿರ್ವಾಧಿಕಾರಿ ಕೃಷ್ಣ ಬಂದಂತ ಭಕ್ತಾದಿಗಳಿಗೆ ಪ್ರಸಾದದಿಂದ ಹಿಡಿದು ದೇವರ ದರ್ಶನ ಆಗುವವರೆಗೂ ಯಾವುದೇ ಅಡೆತಡೆ ಇಲ್ಲದೆ ಸಕಲ ಸಿದ್ಧತೆಯೊಂದಿಗೆ ಇಂದು ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ಮಲ್ಲುಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದಸ್ಯರು ಪಡೆದುಕೊಳ್ಳಬೇಕು.

ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ,  ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಡಾ. ಯತೀಂದ್ರ ಸಿದ್ದರಾಮಯ್ಯ ಶಾಸಕ ಕೆ ವೆಂಕಟೇಶ್ ರವರಿಂದ ಭೂಮಿ ಪೂಜೆ

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 5 ತಾಲ್ಲೂಕುಗಳು ತೀವ್ರ ಬರಪೀಡಿತ ; ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸಿ ಡಿಸಿಎಂ ಡಾ.ಜಿ. ಪರಮೇಶ್ವರ್ 

ಜಿಲ್ಲೆಯ ನಂಜನಗೂಡು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಡಾ .ಜಿ. ಪರಮೇಶ್ವರ್  ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ