ಕೆಐಡಿಬಿ ಕಚೇರಿ ಬಳಿ ರೈತರ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಕೆಐಡಿಬಿ ವಿರುದ್ಧ ರೈತರ ಆಕ್ರೋಶ

ವಿಜಯ ದರ್ಪಣ ನ್ಯೂಸ್…..

ಕೆಐಡಿಬಿ ಕಚೇರಿ ಬಳಿ ರೈತರ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಕೆಐಡಿಬಿ ವಿರುದ್ಧ ರೈತರ ಆಕ್ರೋಶ

ತಾಂಡವಪರ: ಫೆಬ್ರವರಿ 3 ಮೈಸೂರು ಜಿಲ್ಲೆ, ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಭೂಮಿ ಕಳೆದುಕೊಂಡಿರುವ ರೈತರಿಗೆ ಉದ್ಯೋಗ ನೀಡಬೇಕು, ಅವರಿಗೆ ನಿವೇಶನ ನೀಡಬೇಕು ಮತ್ತು ಅವರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕೆ.ಐ.ಡಿ.ಬಿ ಕಚೇರಿ ಮುಂಭಾಗ ಅಹೋರಾತ್ರಿ ಅನಿರ್ಧಿಷ್ಟಾವದಿ ಧರಣಿ ಕೈಗೊಂಡು ಆಕ್ರೋಶ ವ್ಯಕ್ತಪಡಿಸಿರು.

ನಗರದ ಗನ್ ಹೌಸ್ ವೃತ್ತದಲ್ಲಿ ಸೋಮವಾರ ಜಮಾಯಿಸಿದ ಕೋಚನಹಳ್ಳಿ ಗ್ರಾಮ ಮತ್ತು ಹಿಮ್ಮಾವು ಗ್ರಾಮದ ರೈತರು ರಾಮಸ್ವಾಮಿ ವೃತ್ತದವರೆಗೆ ಪಾದಯಾತ್ರೆ ಮೂಲಕ ತೆರಳಿ ನಂತರ ಕೆ.ಆರ್.ಎಸ್. ರಸ್ತೆಯಲ್ಲಿರುವ ಕೆ.ಐ.ಡಿ.ಬಿ ಕಚೇರಿ ಬಳಿಗೆ ತೆರಳಿದರು. ಇದೇ ವೇಳೆ ರಾಜ್ಯ ರೈತ ಸಂಘದ ಜಿಲ್ಲಾ ಸಂಘಟನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಕೋಚನಹಳ್ಳಿ ಗ್ರಾಮದಲ್ಲಿ ಸುಮಾರು 160 ಎಕರೆ ರೈತರ ಜಮೀನನ್ನು ಗಾಲ್ಫ್ ಕಂಪನಿಯವರು ವಶಕ್ಕೆ ಪಡೆದು ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ರೈತರಿಗೆ ಮೋಸ ಮಾಡಿದ್ದಾರೆ. ಈ ಸಂಬಂಧ ಹೋರಾಟ ಮಾಡಿಕೊಂಡು ಬರುತ್ತಿದ್ದು, ಅಂದಿನ ಜಿಲ್ಲಾಧಿಕಾರಿ ಬಗಾದಿ ಗೌಥಮ್ ಅವರು ರೈತರು ಮತ್ತು ಕಂಪನಿಯವರೊಂದಿಗೆ ಮಾತುಕತೆ ನಡೆಸಿ ಉದ್ಯೋಗ ಕೊಡುವ ಭರವಸೆನ್ನು ನೀಡಿ ಆದೇಶ ಮಾಡಿದ್ದರು. ಆದರೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಮ್ಮಾವು ಗ್ರಾಮದಲ್ಲಿ 1515 ಎಕರೆ ಜಮೀನನ್ನು ಕೆ.ಐ.ಡಿ. ಭೂಸ್ವಾಧೀನಪಡಿಸಿಕೊಂಡು ಚಿತ್ರನಗರಿಗೆ 165 ಎಕರೆ ನೀಡಿದೆ.‌ಇಲ್ಲಿಯೂ ಸಹ ರೈತರಿಗೆ ಅನ್ಯಾವಾಗಿದ್ದು 500 ಎಕರೆ ಪ್ರದೇಶ ಸರ್ಕಾರಿ ಗೋಮಾಳ ಎಂದು ಹೇಳಿ ರೈತರಿಗೆ ಪರಿಹಾರವನ್ನೇ ನೀಡಿಲ್ಲ. ಇಲ್ಲಿನ ಸಂತ್ರಸ್ಥ ರೈತರಿಗೆ ದೊರೆಯಬೇಕಾದ 18 ಕೋಟಿ ಪರಿಹಾರವನ್ನು ಮೂಲ ರೈತರಿಗೆ ನೀಡದೆ ಅನ್ಯಾಯ ಮಾಡಲಾಗಿದೆ. ಹಾಗಾಗಿ ಇದರ ಮರುತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಕೂಡಲೇ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಮೂಲ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮೈಸೂರು ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಮರಕಂಯ್ಯ, ಉಗ್ರನರಸಿಂಹೇಗೌಡ, ಚಂದ್ರಶೇಖರ್ ಮೇಟಿ, ಆನಂದೂರು ಪ್ರಭಾಕರ್, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೇಮ್ ರಾಜ್, ಬಸವರಾಜು, ಮಂಡಕಳ್ಳಿ ಮಹೇಶ್, ಹೊಸೂರು ಕುಮಾರ್, ನೇತ್ರಾವತಿ ಸೇರಿ ಅನೇಕರು ಅನಿರ್ಧಿಷ್ಟಾವದಿ ಅಹೋರಾತ್ರಿ ಧರಣಿಯಲ್ಲಿ ನೂರಕ್ಕೂ ಹೆಚ್ಚು ರೈತರ ಮಹಿಳೆಯರು ಭಾಗವಹಿಸಿದ್ದರು.