--Ads--

ಜೆಡಿಎಸ್‌ನಿಂದ ಸಂತ್ರಸ್ತ ಕುಟುಂಬಕ್ಕೆ  ಆರ್ಥಿಕ ನೆರವು

On: February 21, 2026 6:51 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ಜೆಡಿಎಸ್‌ನಿಂದ ಸಂತ್ರಸ್ತ ಕುಟುಂಬಕ್ಕೆ  ಆರ್ಥಿಕ ನೆರವು

ದೇವನಹಳ್ಳಿ: ಇತ್ತೀಚೆಗೆ ದೇವನಹಳ್ಳಿ ಹೋಸಕೋಟೆ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಮರಣಕ್ಕೀಡಾದ ತಾಲೂಕಿನ ದೇವನಾಯಕನಹಳ್ಳಿ ಗ್ರಾಮದ ಯುವಕ ಗಗನ್ ಅವರ ನಿವಾಸಕ್ಕೆ ನಿಕಟಪೂರ್ವ ಶಾಸಕ ಎಲ್.ಎನ್ ನಿಸರ್ಗ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ಮಂಜುನಾಥ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಕೇಂದ್ರ ಸಚಿವರು ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಮುಖಂಡರು, ಮೃತರ ಪೋಷಕರಿಗೆ ಧೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ನಿಂದ ಕುಟುಂಬಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಸಫಲ್ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಗಗನ್, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡು ಕಂಗಾಲಾಗಿದ್ದ ಪೋಷಕರಿಗೆ ಮುಖಂಡರು ಸಾಂತ್ವನ ನೀಡಿದರು.

ನಿಸರ್ಗ ನಾರಾಯಣಸ್ವಾಮಿ ಬಳಿಕ ಮಾತನಾಡಿ, ತನ್ನದಲ್ಲದ ತಪ್ಪಿಗೆ ಯುವಕ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ, ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಗಗನ್ ಸಾವು ತುಂಬಲಾರದ ನಷ್ಟವಾಗಿದೆ. ನಿಮ್ಮ ದುಃಖದಲ್ಲಿ ನಾವು ಭಾಗಿಗಳಾಗಿದ್ದು, ಸದಾ ನಿಮ್ಮೊಂದಿಗಿರುತ್ತೇವೆ ಎಂದು ಭರವಸೆ ನೀಡಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹೊಸಹಳ್ಳಿ ಟಿ.ರವಿ, ತಾಲ್ಲೂಕು ಸೊಸೈಟಿ ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ,  ನಿರ್ದೇಶಕರಾದ  ಎಂ ಗಂಗಾಧರ, ಯರ್ತಿಗಾನಹಳ್ಳಿ ಶಿವಣ್ಣ, ವಕೀಲರ ಸಂಘದ ಅಧ್ಯಕ್ಷ ಜೊನ್ನಹಳ್ಳಿ ಮುನಿರಾಜು, ಮುಖಂಡರಾದ  ಶಿವರಾಜ್, ಸಾದಹಳ್ಳಿ ಮಹೇಶ್, ವೆಂಕಟೇಶ್, ಶಿವಕುಮಾರ್, ಚಿಕ್ಕರಾಮಣ್ಣ ಗೋಪಾಲ್ ಹಾಗೂ ಛಲವಾದಿ ಮಹಾಸಭಾ ಅಧ್ಯಕ್ಷ ನಾಗರಾಜ್ ಸೇರಿದಂತೆ ಗ್ರಾಮದ ಪ್ರಮುಖರಿದ್ದರು.

&&&&&&&&&&&&&&&&&&&&&&&&&

ಪರಿಣಾಮ ಸಂಕೇತನ ಕಾರ್ಯಕ್ರಮ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ  ಬೆಂಗಳೂರು ಕೆಂಗೇರಿಯ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಫೆ. 20ರಂದು ಸಂಜೆ ಏರ್ಪಡಿಸಿದ್ದ ಸಂಕೀರ್ತನದಲ್ಲಿ ಶ್ರೀಮತಿ ಗೀತಾ ಭತ್ತದ್ ಅವರು ತಮ್ಮ ಶಿಷ್ಯವೃಂದದವರೊಂದಿಗೆ ಪರಿಣಾಮ ಸಂಕೇತನ ಕಾರ್ಯಕ್ರಮ ನಡೆಸಿಕೊಟ್ಟರು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಶ್ರೀಮತಿ ವಾಸುಕಿ ಪರಿಮಳ ಮತ್ತು ಮೃದಂಗ ವಾದನದಲ್ಲಿ ಶ್ರೀ ನಟರಾಜ್ ಸಹಕರಿಸಿದರು ಎಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಬಾ. ಪಿ. ಭುಜಂಗರಾವ್ ತಿಳಿಸಿದರು.

WhatsApp

Join Now

Telegram

Join Now

Instagram

Join Now