--Ads--

ಪಿ.ಎಂ.ಶ್ರೀ. ನವೋದಯ ವಿದ್ಯಾಲಯವು ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ : ಪ್ರಾಂಶುಪಾಲ ಉಮೇಶ್ ಚಂದ್ರ

On: February 21, 2026 2:59 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪಿ.ಎಂ.ಶ್ರೀ. ನವೋದಯ ವಿದ್ಯಾಲಯವು ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ : ಪ್ರಾಂಶುಪಾಲ ಉಮೇಶ್ ಚಂದ್ರ

ಜೆ.ಇ.ಇ. ಮೈನ್ಸ್ ಪರೀಕ್ಷೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಬಾಗಲೂರಿನ ಪಿ.ಎಂ.ಶ್ರೀ. ನವೋದಯ ವಿದ್ಯಾಲಯವು ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ರಾಷ್ಟ್ರದ ಗಮನ ಸೆಳೆದಿದೆ ಎಂದು ಪ್ರಾಂಶುಪಾಲ ಉಮೇಶ್ ಚಂದ್ರ ಪ್ರಜಾಪತಿ  ತಿಳಿಸಿದ್ದಾರೆ.

ಜೆ. ಎನ್. ವಿ. ಯ ಸೆಂಟರ್ ಆಫ್ ಎಕ್ಸಲೆನ್ಸ್ (COE) ವಿಭಾಗದ ದ್ವಿತೀಯ ಪಿಯುಸಿ ಓದುತ್ತಿರುವ 194 ವಿದ್ಯಾರ್ಥಿಗಳು ಜೆ.ಇ.ಇ. ಮೈನ್ಸ್ ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಅಂದರೆ ನೂರಕ್ಕೆ ನೂರರಷ್ಟು ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ .

ಕಳೆದ ವರ್ಷದ ಕಟ್ ಆಫ್ ಆಧಾರದ ಮೇಲೆ ಒಟ್ಟು 194 ವಿದ್ಯಾರ್ಥಿಗಳ ಪೈಕಿ 183 ವಿದ್ಯಾರ್ಥಿಗಳು ಅಂದರೆ ಶೇಕಡ 94.30ರಷ್ಟು ವಿದ್ಯಾರ್ಥಿಗಳು ಪ್ರತಿಷ್ಠಿತ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಅಂದರೆ ಎನ್.ಐ.ಟಿ. ಅಲ್ಲಿ ಪ್ರವೇಶ ಪಡೆಯಲು ಆರ್ಹರಾಗಿರುತ್ತಾರೆ.

ಗೋದಾವತಿ ಹರ್ಷಿತ್ ವಿಶ್ವೇಶ್ವರ ಶೇ 99.999,

ಆದರ್ಶ ಗುಪ್ತ ಶೇ 99.924,

ಪ್ರತೀಕ್ ಶರ್ಮ 99.987 ಪರ್ಸೆಂಟೈಲ್ ಪಡೆದು ಮೊದಲ ಮೂರು ಸಾಧಕರಾಗಿದ್ದಾರೆ.

ಒಟ್ಟು 62 ವಿದ್ಯಾರ್ಥಿಗಳು ಶೇಕಡ 99 ಕ್ಕಿಂತ ಹೆಚ್ಚು ಪರ್ಸೆಂಟೈಲ್ ಗಳಿಸಿದ್ದಾರೆ.

ಭೌತಶಾಸ್ತ್ರ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿಗಳು ಶೇ.100 ಪರ್ಸೆಂಟೈಲ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
ಅದರಲ್ಲಿ ಭೌತಶಾಸ್ತ್ರದಲ್ಲಿ 43, ಗಣಿತದಲ್ಲಿ 37, ರಸಾಯನ ಶಾಸ್ತ್ರದಲ್ಲಿ 62 ವಿದ್ಯಾರ್ಥಿಗಳು ಶೇ 99% ಪರ್ಸೆಂಟೈಲ್ ಗಳಿಸಿರುವುದು ಈ ವರ್ಷದ ವಿಶೇಷವಾಗಿದೆ ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now