ವಿಜಯ ದರ್ಪಣ ನ್ಯೂಸ್…..
ಆರ್ಥಿಕತೆ ಬೆಳವಣಿಗೆಯಲ್ಲಿ ಕಾರ್ಪೋರೆಟ್ ಕಂಪನಿ ಪಾತ್ರ ಅಪಾರ: ಶಾಸಕ ಜಿ ಟಿ ದೇವೇಗೌಡ

ತಾಂಡವಪುರ ಮಾರ್ಚ್ 20: ದೇಶದ ಆರ್ಥಿಕತೆ ಬೆಳವಣಿಗೆಯಲ್ಲಿ ಕಾರ್ಪೋರೆಟ್ ಕಂಪನಿಗಳ ಕಾರ್ಯದರ್ಶಿಗಳ ಪಾತ್ರ ಮಹತ್ವದಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಕೆಆರ್‌ಎಸ್ ರಸ್ತೆಯಲ್ಲಿರುವ ಐಸಿಎಸ್‌ಐ-ಮೈಸೂರು ಘಟಕದಲ್ಲಿ ದಿ ಇನ್‌ಸ್ಟಿಟ್ಯೂಷನ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾವತಿಯಿಂದ ನಡೆದ ‘ಕಾರ್ಪೋರೆಟ್ ಲಾ-೩೬೦’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಂಪನಿಗಳ ಕಾನೂನುಗಳ ಪಾಲನೆ ಮತ್ತು ಇನ್ನಿತರ ಮಹತ್ವದ ವಿಚಾರವಾಗಿ ಆಯೋಜಿಸಿರುವ ಈ ಎರಡು ದಿನಗಳ ಕಾರ್ಯಕ್ರಮ ಉದ್ಘಾಟಿಸಿರುವುದು ನನಗೆ ಬಹಳ ಸಂತೋಷದ ವಿಷಯವಾಗಿದೆ ಎಂದು ಶುಭ ಹಾರೈಸಿ ಮಾತನಾಡಿದರು.
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕಂಪನಿಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ, ಕಂಪನಿಗಳು ಸೂಕ್ತವಾಗಿ ಬೆಳೆಯಲು ಕೇವಲ ವ್ಯವಹಾರವೇ ಸಾಕಾಗುವುದಿಲ್ಲ. ಅವು ಕಾನೂನು ಬದ್ಧವಾಗಿ ನಿಯಮಾನುಸಾರವಾಗಿ ನಡೆಯಬೇಕು. ಅದನ್ನು ಖಚಿತಪಡಿಸಿಕೊಳ್ಳುವಲ್ಲಿ ಕಂಪನಿಗಳು ಕಾರ್ಯದರ್ಶಿಗಳ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಶಾಸಕ ಜಿಟಿ ದೇವೇಗೌಡರು ಹೇಳಿದರು
ಕಂಪನಿಗಳು ಯಾವ ನಿಯಮಗಳನ್ನು ಪಾಲಿಸಬೇಕು. ಕಾನೂನುಗಳ ವಿಚಾರವಾಗಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು. ಕಾನೂನುಗಳಿಗೆ ಅನುಗುಣವಾಗಿ ಕಂಪನಿಯನ್ನು ಹೇಗೆ ನಡೆಸಬೇಕು ಎಂಬುದರಲ್ಲಿ ಕಾರ್ಯದರ್ಶಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಅದಕ್ಕಾಗಿ ಕಂಪನಿ ಕಾರ್ಯದರ್ಶಿಗಳ ಸೇವೆಯು ಕೇವಲ ಕಂಪನಿಗಳಿಗೆ ಸೀಮಿತವಾಗಿರುವುದಿಲ್ಲ ಬದಲಿಗೆ ದೇಶದ ಅಭಿವೃದ್ಧಿಗೂ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಹೆಗಡೆ, ನಾಗೇಂದ್ರ ರಾವ್, ಮಂಜುಗೌಡ, ಅಭಿಷೇಕ್ ಭಾರಧ್ವಜ್, ಕೀರ್ತನ ಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು.
ಸಂಸ್ಥೆಗಳು ಎದುರಿಸುತ್ತಿರುವ ರಸ್ತೆ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ತರಲಾಗಿದೆ. ಈ ವಿಷಯದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ಸಾಧ್ಯವಾದ ಮಟ್ಟಿಗೆ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.
– ಜಿ.ಟಿ.ದೇವೇಗೌಡ, ಶಾಸಕ








