ವಿಜಯ ದರ್ಪಣ ನ್ಯೂಸ್…..
ಮೂಡಲಪಾಳ್ಯ ಮೆಟರ್ನಿಟಿ ಹೋಂ ನಲ್ಲಿ ನಡೆದ “ಹೆಣ್ಣು ಹುಟ್ಟಿದ ಮನೆ ಹೊನ್ನಾಗಲಿ”

ಶ್ರೀ ಮಹಾತಪಸ್ವಿ ಫೌಂಡೇಶನ್(ರಿ), ಬೆಂಗಳೂರು ವತಿಯಿಂದ ಇಂದು ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ “ಹೆಣ್ಣು ಹುಟ್ಟಿದ ಮನೆ ಹೊನ್ನಾಗಲಿ”ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನವು ಬಿ.ಬಿ.ಎಂ.ಪಿ. ವ್ಯಾಪ್ತಿಯ ಮೂಡಲಪಾಳ್ಯ ಮೆಟರ್ನಿಟಿ ಹೋಂ ನಲ್ಲಿ ನಡೆಯಿತು.
ಸಂಸ್ಥೆಯ ವತಿಯಿಂದ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳಿನವರೆಗೆ ಹುಟ್ಟಿದ ನವಜಾತ ಹೆಣ್ಣು ಶಿಶುಗಳಿಗೆ ಪ್ರತಿಷ್ಠಿತ ಹಿಮಾಲಯ ಕಂಪೆನಿಯ ‘ಆರೋಗ್ಯ ಪೋಷಣಾ ಕಿಟ್’ ಮತ್ತು ‘ಅಭಿನಂದನಾ ಪತ್ರ’ ವನ್ನು ಆಯ್ದ ಫಲಾನುಭವಿಗಳಿಗೆ ನೀಡುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸೂತಿ ತಜ್ಞರಾದ ಡಾ. ವಾಗ್ದೇವಿ.ಎಸ್.ಕೆ ಅವರು ಕಾರ್ಯಕ್ರಮವನ್ನು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಆಯೋಜನೆ ಮಾಡಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು ಮತ್ತು ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದರು.
&&&&&&&&&&&&&&&&&&&&&&&&&&&&&&
ಸೆಂಟರ್ಸ್ ಆಫ್ ಎಕ್ಸೆಲೆನ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ: ಮಾರ್ಚ್ 31 ಕೊನೆಯ ದಿನ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ., ಮಾರ್ಚ್: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2025-26ನೇ ಸಾಲಿನ ಸೆಂಟರ್ಸ್ ಆಫ್ ಎಕ್ಸೆಲೆನ್ಸ್ (CA Foundation) ತರಬೇತಿ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಕಳೆದ ಸಾಲಿನಲ್ಲಿ 10ನೇ ತರಗತಿ ಉತ್ತೀರ್ಣರಾಗಿ, ಈವರೆಗೆ ಯಾವುದೇ ಪ್ರಥಮ ಪಿ.ಯು.ಸಿ ತರಗತಿಗೆ ದಾಖಲಾತಿ ಪಡೆಯದ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ https://dom.karnataka.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 31, 2025 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ 216, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವಹನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110 ದೂರವಾಣಿ ಸಂಖ್ಯೆ 080-29787455 ಗೆ ಸಂಪರ್ಕಿಸಲು ಬೆಂಗಳೂರು ಗ್ರಾಮಾಂತರ, ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣಯ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










