ವಿಜಯ ದರ್ಪಣ ನ್ಯೂಸ್….
30 ವರ್ಷಗಳಿಂದ ಅಡುಗೆಮನೆಯ ಆದ್ಯತೆಯ ಆಯ್ಕೆಯಾಗಿರುವ ಸನ್‌ಪ್ಯೂರ್, ಕಿಚ್ಚ ಸುದೀಪ್ ಮತ್ತು ಪ್ರಿಯಾಮಣಿ ಸಾರಥ್ಯದಲ್ಲಿ ಹೊಸ ಮಾಧ್ಯಮ ಅಭಿಯಾನ ಆರಂಭಿಸಿದೆ

ಬೆಂಗಳೂರು, ಜುಲೈ 2, 2026: ಎಂಕೆ ಅಗ್ರೋಟೆಕ್‌ನ (ಮಾಸೂಮ್ ಗ್ರೂಪ್ ಕಂಪನಿ) ಪ್ರಮುಖ ಖಾದ್ಯ ತೈಲ ಬ್ರಾಂಡ್ ಆಗಿರುವ, ಇಂದು ಲಕ್ಷಾಂತರ ಭಾರತೀಯ ಮನೆಗಳಲ್ಲಿ 30 ವರ್ಷಗಳ ಶುದ್ಧತೆ, ನಂಬಿಕೆ ಮತ್ತು ಸಂತೋಷದ ಪ್ರತೀಕವಾಗಿರುವ ಸನ್‌ಪ್ಯೂರ್, ತನ್ನ ಐಕಾನಿಕ್ ಬ್ರಾಂಡ್ ಅಭಿಯಾನವನ್ನು ಅನಾವರಣಗೊಳಿಸಿದೆ.
ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಅವರನ್ನು ಒಳಗೊಂಡ ಈ ಅಭಿಯಾನವು ಭಾರತದ ಏಕೈಕ ಭೌತಿಕವಾಗಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ – ಸನ್‌ಪ್ಯೂರ್ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ಮೇಲೆ ಕೇಂದ್ರಿಕೃತವಾಗಿದೆ. ಈ ಎಣ್ಣೆಯು ತಲೆಮಾರುಗಳಿಂದ ದಕ್ಷಿಣ ಮತ್ತು ಪಶ್ಚಿಮ ಭಾರತದಾದ್ಯಂತದ ಗ್ರಾಹಕರಿಗೆ ವಿಶ್ವಾಸಾರ್ಹ ಆಯ್ಕೆಯಾಗಿದ್ದು, ಬ್ರ್ಯಾಂಡ್‌ನ ಪ್ರಮುಖ ಉತ್ಪನ್ನವಾಗಿದೆ.
ಮೂರು ದಶಕಗಳಿಂದಲೂ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳ, ಮಹಾರಾಷ್ಟ್ರ, ಗೋವಾ ಮತ್ತು ಓಡಿಶಾದ ಅಡುಗೆ ಮನೆಗಳಲ್ಲಿ, ಸನ್‌ಪ್ಯೂರ್ ರಿಫೈನ್ಡ್ ಸೂರ್ಯಕಾಂತಿ ಎಣ್ಣೆ ಒಂದು ನಂಬಿಕಾರ್ಹ ಆಯ್ಕೆಯಾಗಿ ಬಳಕೆಯಾಗಿದ್ದು, ತನ್ನ ಶುದ್ಧತೆ, ಗುಣಮಟ್ಟ ಮತ್ತು ಸ್ಥಿರತೆಯಿಂದ ಲಕ್ಷಾಂತರ ಮನೆಗಳ ಅಚಲ ಬದ್ಧತೆಯನ್ನು ಗಳಿಸಿದೆ. ಈ ಹೊಸ ಅಭಿಯಾನವು, ಈ ಶಾಶ್ವತ ಸಂಬಂಧಕ್ಕೆ ಗೌರವ ಸಲ್ಲಿಸುವದಲ್ಲದೆ, ಪ್ರತಿಯೊಂದು ಊಟದ ಮೇಜಿನ ಸುತ್ತ ಪ್ರಾರಂಭವಾಗುವ ಪ್ರೀತಿಯ ಕ್ಷಣಗಳು, ಒಂದುಗೂಡುವಿಕೆ ಮತ್ತು ಸಂತೋಷದ ಸರಳ ಕ್ಷಣಗಳನ್ನು ಸಂಭ್ರಮಿಸುತ್ತದೆ.
‘ಸನ್‌ಪ್ಯೂರ್ ಎಲ್ಲಿದೆ, ಸಂತೋಷ ಅಲ್ಲಿದೆ’ ಎಂಬ ಹೃದಯಸ್ಪರ್ಶಿ ಟ್ಯಾಗಲೈನ್ ಸುತ್ತ ನಿರ್ಮಾಣವಾಗಿರುವ ಈ ಟಿವಿ ಜಾಹೀರಾತು, ಹಳೆಯ ನೆನಪುಗಳ ಜಿಂಗಲ್, ಆಕರ್ಷಕ ಕಥಾ ನಿರೂಪಣೆ ಮತ್ತು ಸೂಕ್ತ ಕೌಟುಂಬಿಕ ಕ್ಷಣಗಳ ಮೂಲಕ ದೈನಂದಿನ ಜೀವನದ ಆಪ್ತತೆಯನ್ನು ಸೆರೆ ಹಿಡಿಯುತ್ತದೆ. ಇದೊಂದು ಕೇವಲ ಉತ್ಪನ್ನದ ಅಭಿಯಾನವಾಗಿರದೇ, ಕಳೆದ ಮೂರು ದಶಕಗಳಿಂದ ಸನ್‌ಪ್ಯೂರ್ ತನ್ನ ಗ್ರಾಹಕರೊಂದಿಗೆ ನಿರ್ಮಿಸಿರುವ ಭಾವನಾತ್ಮಕ ಬಾಂಧವ್ಯವನ್ನು ಸಂಭ್ರಮಿಸುತ್ತಾ, ಲಕ್ಷಾಂತರ ಭಾರತೀಯ ಕುಟುಂಬಗಳಿಗೆ ಸನ್‌ಪ್ಯೂರ್ ರಿಫೈನ್ಡ್ ಎಣ್ಣೆ ಹೇಗೆ ಆದ್ಯತೆಯ ಆಯ್ಕೆಯಾಗಿ ಮುಂದುವರೆದಿದೆ ಎಂಬುದನ್ನು ಚಿತ್ರಿಸುತ್ತದೆ.
ಬ್ರ್ಯಾಂಡ್ ಮತ್ತು ಅದರ ರಾಯಭಾರಿಗಳ ನಡುವಿನ ವಿಶಿಷ್ಟ ಮತ್ತು ಅಧಿಕೃತ ಸಂಪರ್ಕ, ಈ ಅಭಿಯಾನದ ಹೃದಯಭಾಗವಾಗಿದೆ. ಭಾರತದಾದ್ಯಂತ ಊಟದ ಮೇಜುಗಳಿಗೆ ಕಳೆ ನೀಡುತ್ತಿರುವ ಸನ್‌ಪ್ಯೂರ್ 30 ವರ್ಷಗಳನ್ನು ಆಚರಿಸುತ್ತಿರುವ ಹೊತ್ತಿನಲ್ಲಿಯೇ, ಕಿಚ್ಚ ಸುದೀಪ್ ಕೂಡ ತನ್ನ ಸಿನಿ ಜೀವನ ಮೂರು ದಶಕಗಳನ್ನು ಪೂರೈಸಿದ್ದಾರೆ.
ಹಾಗಾಗಿ, ಇದು ನಂಬಿಕೆ ಮತ್ತು ಸ್ಥಿರತೆ ಮೇಲೆ ನಿರ್ಮಾಣವಾದ ಎರಡು ಬ್ರ್ಯಾಂಡ್‌ಗಳ ನೈಸರ್ಗಿಕ ಸಂಭ್ರಮಾಚರಣೆಯಾಗಿದೆ. ಸುದೀಪ್‌ಗೆ ಪೂರಕವಾಗಿರುವ ಪ್ರಿಯಾಮಣಿಯವರು ತಮ್ಮ ಆಪ್ತತೆ, ಗಾಂಭೀರ್ಯ ಮತ್ತು ಸರಳತೆಯಿಂದ ಆಧುನಿಕ ಭಾರತೀಯ ಗೃಹಿಣಿಯನ್ನು ಸುಂದರವಾಗಿ ಪ್ರತಿನಿಧಿಸುತ್ತಾರೆ. ಹಾಗೇ ಇವರು ತಲೆಮಾರುಗಳಿಂದ ಸನ್‌ಪ್ಯೂರ್ ಪ್ರತೀಕವಾಗಿರುವ ಮೌಲ್ಯಗಳನ್ನು ಬಲಪಡಿಸುತ್ತಾ, ಕುಟುಂಬಗಳೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಬೆಸೆಯುತ್ತಾರೆ.
ತನ್ನ 30 ವರ್ಷಗಳ ಮೈಲಿಗಲ್ಲಿನ ಸಂಭ್ರಮಾಚರಣೆಯಲ್ಲಿರುವ ಸನ್‌ಪ್ಯೂರ್, ಇಂದಿನ ಆರೋಗ್ಯ ಪ್ರಜ್ಞೆಯ ಗ್ರಾಹಕರಿಗಾಗಿ ಪ್ರೀಮಿಯಂ ಖಾದ್ಯ ತೈಲವಾದ ಸನ್‌ಪ್ಯೂರ್ ಚಾಂಪಿಯನ್ ರಿಫೈನ್ಡ್ ಕೆನೋಲಾ ಎಣ್ಣೆಯನ್ನು ಬಿಡುಗಡೆ ಮಾಡಿದ್ದು, ಇದು ಮೊನೊಅನ್‌ಸ್ಯಾಚುರೇಟೆಡ್ ಕೊಬ್ಬಿನಾಮ್ಲ (MUFA) ಮತ್ತು ಒಮೆಗಾ 3 ಯಿಂದ ಸಮೃದ್ಧವಾಗಿದೆ. ಹಾಗೇ ಇದರ ತಟಸ್ಥ ರುಚಿ ಮತ್ತು ಸುವಾಸನೆಯು ಎಲ್ಲಾ ರೀತಿಯ ಭಾರತೀಯ ಅಡುಗೆಗೆ ಸೂಕ್ತವಾಗಿದೆ. ಈ ಹೊಸ ಉತ್ಪನ್ನವು ಸನ್‌ಪ್ಯೂರ್‌ನ ಭರವಸೆಯ ಖಾದ್ಯ ತೈಲ ಶ್ರೇಣಿಯನ್ನು ಹೆಚ್ಚಿಸುವದರ ಜೊತೆಗೆ, ಬ್ರ್ಯಾಂಡ್‌ನ ನಾವೀನ್ಯತೆ ಮತ್ತು ಗ್ರಾಹಕರಿಗೆ ಆರೋಗ್ಯಕರ, ಉತ್ತಮ-ಗುಣಮಟ್ಟದ ಅಡುಗೆ ಪರಿಹಾರಗಳನ್ನು ತಲುಪಿಸುವ ಅದರ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಸೂಮ್ ಗ್ರೂಪ್‌ನ ನಿರ್ದೇಶಕರಾದ ಶ್ರೀ ಮನ್ನನ್ ಖಾನ್, ” ನಾವು ಪ್ರತಿದಿನ ಲಕ್ಷಾಂತರ ಕುಟುಂಬಗಳಿಗೆ, ಅವರ ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುತ್ತಿರುವ ಪ್ರಯಾಣದ 30 ವರ್ಷಗಳನ್ನು ಆಚರಿಸುತ್ತಿರುವದರಿಂದ, ಸನ್‌ಪ್ಯೂರ್‌ನ ಪ್ರಯಾಣದಲ್ಲಿ ಈ ವರ್ಷ ಮಹತ್ವದ ಮೈಲಿಗಲ್ಲಾಗಿದೆ. ನಮ್ಮ ಈ ಹೊಸ ಅಭಿಯಾನವು ಆ ಶಾಶ್ವತ ಸಂಬಂಧ ಮತ್ತು ನಮ್ಮ ಬ್ರ್ಯಾಂಡ್‌ನ ಶುದ್ಧತೆ, ಗುಣಮಟ್ಟ, ಕಾಳಜಿ ಮತ್ತು ಒಗ್ಗಟ್ಟನ್ನು ಪ್ರದರ್ಶಿಸುವ ಮೌಲ್ಯಗಳ ಆಚರಣೆಯಾಗಿದೆ. ನಮ್ಮ ಪ್ರಮುಖ ಮಾರುಕಟ್ಟೆಗಳಲ್ಲಿನ ಪ್ರೇಕ್ಷಕರೊಂದಿಗೆ ಕಿಚ್ಚ ಸುದೀಪ್ ಮತ್ತು ಪ್ರಿಯಾಮಣಿ ಅಪಾರ ವಿಶ್ವಾಸಾರ್ಹತೆ ಮತ್ತು ಭಾವನಾತ್ಮಕ ಸಂಪರ್ಕವನ್ನು ಹೊಂದಿರುವ ವ್ಯಕ್ತಿಗಳಾಗಿರುವದರಿಂದ, ಅವರು ಸನ್‌ಪ್ಯೂರ್‌ಗೆ ಸೂಕ್ತ ಮತ್ತು ಪರಿಪೂರ್ಣ ರಾಯಭಾರಿಗಳಾಗಿದ್ದಾರೆ. ಕಳೆದ ಮೂರು ದಶಕಗಳಿಂದ ನಾವು ನಿರ್ಮಿಸಿರುವ ನಂಬಿಕೆಗೆ ಇನ್ನಷ್ಟು ನೀರೆರೆಯುತ್ತಾ, ಹಾಗೇ ಇಂದಿನ ಗ್ರಾಹಕರ ವಿಕಸನಗೊಳ್ಳುತ್ತಿರುವ ಆದ್ಯತೆಗಳನ್ನು ಪೂರೈಸಲು ‘ಸನ್‌ಪ್ಯೂರ್ ಚಾಂಪಿಯನ್ ರಿಫೈನ್ಡ್ ಕ್ಯಾನೋಲಾ ಎಣ್ಣೆ’ಯನ್ನು ಪರಿಚಯಿಸಲು ನಾವು ತುಂಬಾ ಹರ್ಷಿಸುತ್ತೇವೆ. ಇದು ನವೀನ, ಆರೋಗ್ಯಕರ ಅಡುಗೆ ಪರಿಹಾರಗಳನ್ನು ನೀಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ” ಎಂದು ಹೇಳಿದರು.
ಈ ಅಭಿಯಾನದ ಹಿಂದಿನ ಸೃಜನಶೀಲ ಚಿಂತನೆಯನ್ನು ಹಂಚಿಕೊಂಡ ಮಾಸೂಮ್ ಗ್ರೂಪ್‌ನ ನಿರ್ದೇಶಕಿ ಶ್ರೀಮತಿ ಫರಾಹ್ ಖಾನ್, “ಆಕರ್ಷಕ ಜಿಂಗಲ್ ಮತ್ತು ‘ಸನ್‌ಪ್ಯೂರ್ ಎಲ್ಲಿದೆ, ಸಂತೋಷ ಅಲ್ಲಿದೆ’ ಎಂಬ ಟ್ಯಾಗ್‌ಲೈನ್ ಜಾಹೀರಾತಿನ ಭಾವನಾತ್ಮಕ ಬೇರಾಗಿದೆ. ಕಿಚ್ಚ ಸುದೀಪ್ ಮತ್ತು ಪ್ರಿಯಾಮಣಿ ಅವರ ಮೂಲಕ, ಈ ಜಾಹೀರಾತು, ಉತ್ತಮ ಆಹಾರ ಮತ್ತು ಒಗ್ಗಟ್ಟಿನ ಮೂಲಕ ಪ್ರತಿ ಮನೆಯ ತರುವ ಸಂತೋಷವನ್ನು ಆಚರಿಸುತ್ತದೆ. ಪ್ರೇಕ್ಷಕರು ಜಾಹೀರಾತಿನೊಂದಿಗೆ ನಗುತ್ತಾ, ಪದೇ ಪದೇ ನೆನಪಿಸಿಕೊಳ್ಳುತ್ತಾ ಮತ್ತು ಉತ್ಪನ್ನದ ಜೊತೆ ಕೂಡಲೇ ಭಾವನಾತ್ಮಕ ಸಾಂಗತ್ಯ ಬೆಳಸಬೇಕು ಎಂದು ನಾವು ಬಯಸಿದ್ದೇವೆ. ಹಲವು ವರ್ಷಗಳಿಂದ, ಲಕ್ಷಾಂತರ ಕುಟುಂಬಗಳಿಗೆ ಸನ್‌ಪ್ಯೂರ್ ಪ್ರತಿನಿಧಿಸಿದ್ದು ಇದನ್ನೇ” ಎಂದು ಹೇಳಿದರು.
ಜುಲೈ ತಿಂಗಳಿನಿಂದ, ಸನ್‌ಪ್ಯೂರ್ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ಹೊಸ ಟಿವಿ ಜಾಹೀರಾತುನ್ನು ಟಿವಿ, ಸಿನಿಮಾ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಿಡುಗಡೆ ಮಾಡಲಾಗುವುದು. ಹಾಗೇ ಈ ಜಾಹೀರಾತು ಬಾಹ್ಯ ವೇದಿಕೆಗಳಲ್ಲಿ, ಮುದ್ರಣ, ರೇಡಿಯೋ ಜೊತೆಗೆ ಅಂಗಡಿಗಳಲ್ಲಿ ಪ್ರದರ್ಶನವಾಗಲಿದ್ದು, ಸಂಯೋಜಿತ ಸಂವಹನ ಕಾರ್ಯಕ್ರಮದ ಮೂಲಕ ಪ್ರಮುಖ ಮಾರುಕಟ್ಟೆಗಳಲ್ಲಿ ಬಿತ್ತರವಾಗಲಿದೆ.
ಸನ್‌ಪ್ಯೂರ್ ಚಾಂಪಿಯನ್ ರಿಫೈನ್ಡ್ ಕ್ಯಾನೋಲಾ ಎಣ್ಣೆಯ ಬಿಡುಗಡೆಯು, ಸನ್‌ಪ್ಯೂರ್‌ನ ಉತ್ಪನ್ನ ನಾವೀನ್ಯತೆ ಪ್ರಯಾಣದ ಮುಂದಿನ ಹಂತವನ್ನು ಗುರುತಿಸುತ್ತದೆ. ಇದು, ಗ್ರಾಹಕರ ಜೀವನಶೈಲಿಯ ವಿಕಸನಕ್ಕಾಗಿ ಆರೋಗ್ಯಕರ ಅಡುಗೆ ಪರಿಹಾರ ನೀಡುವದರೊಂದಿಗೆ, ಭಾರತದ ಅತ್ಯಂತ ವಿಶ್ವಾಸಾರ್ಹ ಖಾದ್ಯ ತೈಲ ಬ್ರಾಂಡ್‌ಗಳಲ್ಲಿ ಸನ್‌ಪ್ಯೂರ್‌ನ ಸ್ಥಾನವನ್ನು ಬಲಪಡಿಸುತ್ತದೆ.











