--Ads--

ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ: ಡಾ.ಯತೀಂದ್ರ ಸಿದ್ದರಾಮಯ್ಯ

On: April 24, 2026 11:33 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ: ಡಾ.ಯತೀಂದ್ರ ಸಿದ್ದರಾಮಯ್ಯ

ತಾಂಡವಪುರ ಏಪ್ರಿಲ್ 24 ನಿಮ್ಮ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ರಾಮಯ್ಯನವರು ಹೇಳಿದರು

ಅವರು ಮೈಸೂರ್ ತಾಲ್ಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ರಾಯನ ಹುಂಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆ ಹಾಗೂ ಗ್ರಾಮದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮಸ್ಥರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಗ್ರಾಮದಲ್ಲಿ ತಮ್ಮ ಹಲವಾರು ಸಮಸ್ಯೆಗಳನ್ನ ಕುಂದು ಕೊರತೆಗಳನ್ನು ನನ್ನ ಗಮನಕ್ಕೆ ತಂದಿದ್ದೀರಿ ಈ ಎಲ್ಲ ಸಮಸ್ಯೆಗಳನ್ನು ಅಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ ಅವರು, ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು ಇನ್ನುಳಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ ಅವರು ಗ್ರಾಮಕ್ಕೆ ಬಂದಾಗ  ಗ್ರಾಮದ ಮುಖಂಡರು ಹಾಗೂ ಯುವಕರು ನನ್ನನ್ನು ಅದ್ದೂರಿಯಾಗಿ ಸ್ವಾಗತ ಕೋರಿ ಸನ್ಮಾನಿಸಿ ಗೌರವಿಸುತ್ತಾ ಬಂದಿದ್ದೀರಿ ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿಯಾಗಿದ್ದು ಇದೇ ಪ್ರೀತಿ ಅಭಿಮಾನ ಇನ್ನು ಮುಂದೆ ಸಹ ಇರಲಿ ಎಂದು ಡಾ. ಯತೀದ್ರ ಸಿದ್ದರಾಮಯ್ಯನವರು ವಿನಂತಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮ ಪಂಚಾಯತಿಯ ಅಧಿಕಾರಿಗಳು ಹಾಗೂ ವರುಣಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವಿ ಹಾಗೂ ಗ್ರಾಮದ ಮುಖಂಡರಾದ ಕಂಸಾಳ ಕಲಾವಿದ ಮಾದಪ್ಪ ಮುಖಂಡರಾದ ಪಾಪಣ್ಣ ರವಿ ಮಹಾದೇವ ಸೇರಿದಂತೆ ಗ್ರಾಮದ ಸ್ಥಳೀಯ ಮುಖಂಡರು ಯುವಕರು ಗ್ರಾಮಸ್ಥರು ಹಾಜರಿದ್ದರು

ನಿಧಾನ ವಾರ್ತೆ

ತಾಂಡವಪುರ ಏಪ್ರಿಲ್ 24 ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಂಚಳ್ಳಿ ಹುಂಡಿ ಗ್ರಾಮದ ಹಿರಿಯರಾದ ಕುಳ್ಳೇಗೌಡರು ಇತ್ತೀಚೆಗೆ ನಿಧನ ಹೊಂದಿದ್ದಾರೆ ಇವರಿಗೆ 82 ವಯಸ್ಸಾಗಿತ್ತು ಅನಾರೋಗ್ಯ ನಿಮಿತ್ತ ಸ್ವಾಗ್ರಾಮದಲ್ಲಿ ನಿಧನ ಹೊಂದಿದರು

ಇವರಿಗೆ ಇಬ್ಬರು ಪುತ್ರಿಯರು ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಆಗಲಿ ಎಂದು ಮೃತರಾ ಅಂತ್ಯಕ್ರಿಯೆಯನ್ನು ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು

WhatsApp

Join Now

Telegram

Join Now

Instagram

Join Now