--Ads--

ಕಿಡಿಗೇಡಿಗಳ ದುಷ್ಕೃತ್ಯ..! ಕಟಾವಿಗೆ ಬಂದಿದ್ದ ಕಬ್ಬು ಬೆಳೆಗೆ ಬೆಂಕಿ. ಸಂಪೂರ್ಣ ಕಬ್ಬಿನ ಬೆಳೆ ನಾಶ..! ರೈತ ಹೈರಾಣು…!

On: May 7, 2026 9:35 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕಿಡಿಗೇಡಿಗಳ ದುಷ್ಕೃತ್ಯ..! ಕಟಾವಿಗೆ ಬಂದಿದ್ದ ಕಬ್ಬು ಬೆಳೆಗೆ ಬೆಂಕಿ. ಸಂಪೂರ್ಣ ಕಬ್ಬಿನ ಬೆಳೆ ನಾಶ..! ರೈತ ಹೈರಾಣು…!

ತಾಂಡವಪುರ ಏಪ್ರಿಲ್ 30 : ಕಟಾವಿಗೆ ಸಿದ್ಧವಾಗಿದ್ದ ಕಬ್ಬು ಬೆಳೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದ ಘಟನೆ ಇಂದ ರೈತನ ಕಬ್ಬಿನ ಬೆಳೆ ಸಂಪೂರ್ಣವಾಗಿ ಬೆಂಕಿಗೆ ಅವತಿಯಾಗಿ ಸಂಪೂರ್ಣವಾಗಿ ನಾಸವಾಗಿರುವ ಘಟನೆನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಲೂಕಿನ ಬದನವಾಳು ಗ್ರಾಮದಲ್ಲಿ ನಡೆದಿದೆ. ಸಾಲ ಸೋಲ ಮಾಡಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅಡವಿಟ್ಟು 5 ಎಕ್ರೆಯಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಬದನವಾಳು ಮತ್ತು ದೇವನೂರು ಗ್ರಾಮದ ಮಧ್ಯ ಭಾಗದಲ್ಲಿರುವ ಕೃಷಿ ಜಮೀನಿನಲ್ಲಿ ಬೆಳೆಯಲಾಗಿದ್ದ ಕಬ್ಬುಬೆಳೆ ನಾಶವಾಗಿದೆ. ರೈತ ವಿಜಯೇಂದ್ರ ಪ್ರಭುಸ್ವಾಮಿ ಎಂಬುವರ ಕಬ್ಬು ಬೆಳೆ ಇದಾಗಿದೆ.

ಸರ್ವೇ ನಂಬರ್ 202/1,202/2, ರಲ್ಲಿ ಸರಿ ಸುಮಾರು 5 ಎಕರೆ ಕಬ್ಬು ಬೆಳೆ ಮಾಡಿದ್ದ ರೈತ ವಿಜೇಂದ್ರ ಹಾಗೂ ಪ್ರಭುಸ್ವಾಮಿ. 11 ತಿಂಗಳು ಕಳೆದಿದ್ದು ಇನ್ನು ಒಂದು ತಿಂಗಳ ಒಳಗಾಗಿ ಕಟಾವು ಮಾಡಬೇಕಿತ್ತು.

ಯಾರು ಇಲ್ಲದ ಸಮಯ ನೋಡಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸುಮಾರು 15 ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

ಬದುಕು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಈ ರೀತಿಯ ಕೃತ್ಯ ಮಾಡಿದ್ದಾರೆ ಎಂದು ರೈತ ವಿಜೇಂದ್ರ ಪ್ರಭುಸ್ವಾಮಿ ಅಳಲು ತೋಡಿಕೊಂಡಿದ್ದಾರೆ.ರಾಜ್ಯ ಸರ್ಕಾರದಿಂದ ತಹಸಿಲ್ದಾರ್ ನೇತೃತ್ವದಲ್ಲಿ ಪರಿಶೀಲಿಸಿ ಪರಿಹಾರ ಕಲ್ಪಿಸಿಕೊಡಬೇಕು.

ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಬದ್ಧವಾಗಿ ತಕ್ಕ ಶಿಕ್ಷೆ ನೀಡಬೇಕು ಎಂದು ನಷ್ಟಕ್ಕೊಳಗಾದ ರೈತ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡುವ ಮೂಲಕ ಆಗ್ರಹಿಸಿದ್ದಾರೆ…

WhatsApp

Join Now

Telegram

Join Now

Instagram

Join Now