--Ads--

ರಾಯಸಂದ್ರದಲ್ಲಿ ಶ್ರೀ ಸಪಲಮ್ಮದೇವಿ ಶಿಲಾವಿಗ್ರಹ ಪ್ರತಿಷ್ಠಾಪನೆ

On: May 14, 2026 11:25 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ರಾಯಸಂದ್ರದಲ್ಲಿ ಶ್ರೀ ಸಪಲಮ್ಮದೇವಿ ಶಿಲಾವಿಗ್ರಹ ಪ್ರತಿಷ್ಠಾಪನೆ

ದೇವನಹಳ್ಳಿ, ಮೇ 14 : ತಾಲ್ಲೂಕಿನ ಬೆಟ್ಟಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಸಂದ್ರ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಸಪಲಮ್ಮದೇವಿಯ ನೂತನ ಶಿಲಾವಿಗ್ರಹ ಪ್ರತಿಷ್ಠಾಪನೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಎಂದು ದೇವಾಲಯ ಸಮಿತಿಯ ಮುನಿರಾಜು ತಿಳಿಸಿದರು.

ರಾಯಸಂದ್ರದಲ್ಲಿ ನಿರ್ಮಿಸಲಾಗಿರುವ ನೂತನ ದೇವಾಲಯ ಹಾಗೂ ಶ್ರೀ ಸಪಲಮ್ಮ ದೇವಿಯ ಶಿಲಾವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಾಲಯದ ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು ರಸ್ತೆ ನಿರ್ಮಾಣದ ಸಮಯದಲ್ಲಿ ರಸ್ತೆಗೆ ಹೋಗಿತ್ತು ಜಾಗದ ಅಭಾವದಿಂದ ಚಿಕ್ಕ ಗುಡಿಯಲ್ಲಿಯೇ ಪೂಜೆಗಳನ್ನು ಮಾಡುತ್ತಿದ್ದೆವು, ಇದನ್ನು ಮನಗಂಡ ಗ್ರಾಮದ ಪಿಳ್ಳಪ್ಪನವರ ಮಕ್ಕಳು ಅಂಗಡಿ ರಾಜಣ್ಣ ಹಾಗೂ ಚನ್ನಮ್ಮನವರ ಕುಟುಂಬದವರು ದೇವಾಲಯಕ್ಕೆ ಜಾಗ ನೀಡಿದ್ದರಿಂದ ದೇವಾಲಯ ನಿರ್ಮಿಸಿ ಶಿಲಾವಿಗ್ರಹ ಪ್ರತಿಷ್ಠಾಪಿಸಲಾಗಿದೆ ಎಂದರು.

ಸಮಾಜ ಸೇವಕ, ದಾನಿಗಳಾದ ದೊಡ್ಡಚೀಮನಹಳ್ಳಿ ದೇವರಾಜು ಮಾತನಾಡಿ, ಯಾವುದೇ ದೇವಾಲಯಗಳು ಮಂದಿರಗಳ ಅಭಿವೃದ್ಧಿಯಿಂದ ಗ್ರಾಮದಲ್ಲಿ ಸಾಮರಸ್ಯ ಮೂಡಲಿದೆ.

ರಾಯಸಂದ್ರದಲ್ಲಿ ಪುರಾತನವಾದ ಈ ದೇವಾಲಯವು ಹದಗೆಟ್ಟು ಶಿಥಿಲವಾಗಿದೆ ಹಾಗೂ ದೇವಾಲಯ ನಿರ್ಮಾಣಕ್ಕೆ ಜಾಗ ಬೇಕಾಗಿದೆ ಎಂದು ರಾಯಸಂದ್ರ ಗ್ರಾಮದ ಗ್ರಾಮಸ್ಥರು ಹಾಗೂ ಭಕ್ತಾಧಿಗಳು, ಸಹಕಾರ ನೀಡಬೇಕು ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಂ. ಮೂರ್ತಿ, ದೊಡ್ಡಚೀಮನಹಳ್ಳಿ ದೇವರಾಜು ಬೆಟ್ಟಕೋಟೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ್, ಶ್ರೀ ವಿದ್ಯಾಗಣಪತಿ ಸೇವಾಸಂಘ, ಶ್ರೀ ಅಯ್ಯಪ್ಪಸ್ವಾಮಿ ಸಂಘ, ಲಕ್ಷ್ಮೀವೆಂಕಟೇಶ್ವರಸ್ವಾಮಿ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ರೈತ ಸಂಘ, ಸ್ತ್ರೀಶಕ್ತಿ ಸಂಘ,ದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now